ಕಾಂಗ್ರೆಸ್‌ ಶಾಸಕರ ಮೇಲೆ ಸಿಎಂ, ಡಿಸಿಎಂಗೆ ನಂಬಿಕೆ ಇಲ್ಲ: ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ

By Kannadaprabha News  |  First Published Jan 17, 2024, 6:43 AM IST

ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇವಲ ಮೂರಲ್ಲ, ತ್ರಿವಳಿ ಸಿಎಂ ಅಲ್ಲ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಥಾನ ಹೊರತುಪಡಿಸಿ 32 ಸಚಿವರನ್ನೂ ಉಪ ಮುಖ್ಯಮಂತ್ರಿಗಳೆಂದು ಘೋಷಿಸಲಿ, ಎಲ್ಲಾ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದರು. 


ದಾವಣಗೆರೆ (ಜ.17): ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇವಲ ಮೂರಲ್ಲ, ತ್ರಿವಳಿ ಸಿಎಂ ಅಲ್ಲ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಥಾನ ಹೊರತುಪಡಿಸಿ 32 ಸಚಿವರನ್ನೂ ಉಪ ಮುಖ್ಯಮಂತ್ರಿಗಳೆಂದು ಘೋಷಿಸಲಿ, ಎಲ್ಲಾ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದರು. ಕಚೇರಿ, ಕಾರು, ವೇತನ, ಭತ್ಯೆ ನೀಡಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ನೀಡಲು ಹೊರಟಿದ್ದಾರೆ. ಇದೇನು ನಿಮ್ಮ ಮನೆಯ ದುಡ್ಡಾ? ಸರ್ಕಾರದ ದುಡ್ಡು, ಜನರಿಂದ ತೆರಿಗೆ ಸಂಗ್ರಹವಾಗುತ್ತಿದೆ. ಒಂದು ವೇಳೆ ಕೊಟ್ಟರೆ ತೀವ್ರ ಸ್ವರೂಪದ ಹೋರಾಟ ನಡೆಸುತ್ತೇವೆ. ನೀವೇನು ಪುನರ್ವಸತಿ ಕೇಂದ್ರ, ಗಂಜಿ ಕೇಂದ್ರಗಳನ್ನು ಮಾಡಲು ಹೊರಟಿದ್ದಾರಾ ಎಂದು ಹರಿಹಾಯ್ದರು.

ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದೀರಿ, ಪರಿಶೀಲನೆ ಮಾಡಬೇಕಲ್ಲವೇ? ನಿಮ್ಮ ಗ್ಯಾರಂಟಿ ಯೋಜನೆ ಬಗ್ಗೆ ನೀವೇ ಪರಿಶೀಲಿಸಬೇಕಲ್ಲವೇ? ಐದೂ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ನೂರಕ್ಕೆ ನೂರರಷ್ಟು ವಿಫಲವಾಗಿದ್ದಾರೆ. ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ. ಶಾಸಕರ ಮೇಲೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ನಂಬಿಕೆ ಇಲ್ಲ. ಹಾಗಿದ್ದರೆ ಅಧಿಕಾರಿಗಳಿಗೆ ಸಂಬಳ ಯಾಕೆ ಕೊಡುತ್ತೀರಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಡಿಸಿಎಂ ಬೇಡಿಕೆ ಕುರಿತ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

Tap to resize

Latest Videos

ಹೆಗಡೆ ಹೇಳಿಕೆ ಒಪ್ಪಲು ಸಾಧ್ಯವಿಲ್ಲ: ಅನಂತಕುಮಾರ ಹೆಗಡೆ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಸಿದ್ಧಾಂತದ ಮೇಲೆ ಬಂದವರು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಆ ಸ್ಥಾನದ ಮೇಲೆ ಯಾರೇ ಇದ್ದರೂ ಸ್ಥಾನಕ್ಕೆ ಬೆಲೆ, ಗೌರವ ಕೊಡಬೇಕು. ರಾಜಕೀಯ ವಿರೋಧ ಮಾಡಿಕೊಳ್ಳಿ. ಆದರೆ, ಯಾರಿಗೇ ಆಗಲಿ ಏಕವಚನದಿಂದ, ಅಗೌರವದಿಂದ ಮಾತನಾಡಬಾರದು. ಹೆಗಡೆ ಹೇಳಿಕೆ ನಾವೆಲ್ಲರೂ ಸರ್ವ ಸಮ್ಮತವಾಗಿ ಖಂಡಿಸುತ್ತೇವೆ. ಮಾತಿನ ಭರದಲ್ಲಿ ಸಿದ್ದರಾಮಯ್ಯಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪು. ಹಾಗೆಂದು ಸಿದ್ದರಾಮಯ್ಯ ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದೂ ತಪ್ಪು ಎಂದು ರೇಣುಕಾಚಾರ್ಯ ಹೇಳಿದರು.

ರಾಮನ ಜನ್ಮಪತ್ರ ಕೇಳಿದ್ದ ಕಾಂಗ್ರೆಸ್‌ಗೆ ಜ್ಞಾನೋದಯ: ಎಂ.ಪಿ.ರೇಣುಕಾಚಾರ್ಯ ಲೇವಡಿ

ಎಸ್.ರಾಮಪ್ಪ ಹೇಳಿಕೆ ಟೀಕಿಸಲು ಹೋಗಲ್ಲ: ಹರಿಹರದ ಮಾಜಿ ಶಾಸಕ ಎಸ್.ರಾಮಪ್ಪ ಹೇಳಿಕೆಯನ್ನು ನಾನು ಟೀಕಿಸಲು ಹೋಗಲ್ಲ. ಟೀಕೆ, ಟಿಪ್ಪಣಿಗಳು ಪರಿಶುದ್ಧವಾಗಿರಬೇಕು. ಹೊಲಸು ಮಾತುಗಳನ್ನಾಡಬಾರದು. ಯಾರಿಗೂ ಕೇವಲವಾಗಿ, ಏಕವಚನದಲ್ಲೂ ಮಾತನಾಡಬಾರದು.ಬಿಜೆಪಿ ನಮಗೆ ಸಂಸ್ಕೃತಿ, ಸಂಸ್ಕಾರವನ್ನು ನೀಡಿದೆ. ಹಾಗಾಗಿ ನಾವು ಸಂಸ್ಕೃತಿಯಡಿಯಲ್ಲೇ ಮಾತನಾಡಬೇಕಾಗುತ್ತದೆ.
-ರೇಣುಕಾಚಾರ್ಯ, ಮಾಜಿ ಸಚಿವ

click me!