ವರದಿ: ಗಿರೀಶ್ ಕುಮಾರ್ , ಏಷ್ಯಾನೆಟ್ ಸುವರ್ಣನ್ಯೂಸ್
ಗದಗ (ಮೇ.4): ಮನುಷ್ಯ ಅಂದ್ರೆ ಆಸೆ ಇದ್ದೇ ಇರುತ್ತೆ. ಆಸೆ ಇಲ್ಲದ ವ್ಯಕ್ತಿಗೆ ಮನುಷ್ಯ ಅನ್ನಲ್ಲ ಅನ್ನೋ ಮೂಲಕ ಡಿಸಿಎಂ ಹುದ್ದೆ ಮೇಲೆ ಆಸೆ ಕಮರಿಲ್ಲ ಅನ್ನೋ ಸಂದೇಶವನ್ನ ಸಚಿವ ಬಿ ಶ್ರೀರಾಮುಲು ( B sriramulu) ನೀಡಿದರು. ರಾಜ್ಯದಲ್ಲಿ ನಾಲ್ವರು ಡಿಸಿಎಂಗಳಾಗ್ತಾರೆ ಅನ್ನೋ ಚರ್ಚೆ ಚಾಲ್ತಿಯಲ್ಲಿರುವಾಗ್ಲೆ ರಾಮುಲು ಈ ಮಾತು ಹೇಳಿದ್ದಾರೆ.
ಗದಗ ನಗರದಲ್ಲಿ ಸುದ್ದಿಗಾರರ ಜೊತೆ ಮಾತ್ನಾಡಿ, ಹುದ್ದೆ ಮೇಲೆ ಆಸೆ ಇರಬಹುದು ಆದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದ್ರು.. ಯಾರನ್ನ ಮಂತ್ರಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡ್ಬೇಕು ಅನ್ನೋದು ಪಾರ್ಟಿ ತೀರ್ಮಾನ ಮಾಡುತ್ತೆ. ಪಾರ್ಟಿ ತೀರ್ಮಾನವೇ ಅಂತಿಮ. ಆಸೆ ಇರಬಹುದು, ಆದ್ರೆ ಪಾರ್ಟಿ ಅನ್ನೋ ಸಿಸ್ಟಮ್ ಇದೆ. ನಮ್ಮದು ರಾಷ್ಟ್ರೀಯ ಪಕ್ಷ, ಮುಂದಿನ ತೀರ್ಮಾನವನ್ನ ಪಾರ್ಟಿ ತೆಗೆದುಕೊಳ್ಳುತ್ತದೆ ಎಂದ್ರು.. ಜೊತೆ ಪಾರ್ಟಿ ಏನೇ ಜವಾಬ್ದಾರಿ ಕೊಟ್ಟರೂ ನಿಬಾಯಿಸುತ್ತೇನೆ ಅನ್ನೋ ಮೂಲಕ ಡಿಸಿಎಂ ಜವಾಬ್ದಾರಿ ನೀಡಿದ್ರೆ ನಿಬಾಯಿಸುತ್ತೇನೆ ಎನ್ನುವ ಸಂದೇಶ ನೀಡಿದ್ದಾರೆ. ಡಿಸಿಎಂ ಯಾರಾಗ್ಬೇಕು ಅನ್ನೋದನ್ನ ಪಾರ್ಟಿ ನಿರ್ಧರಿಸಲಿದೆ ಎಂದ್ರು. ಅಲ್ದೆ, ಪಾರ್ಟಿ ಬಿಟ್ಟು ಬೇರೇನೂ ಇಲ್ಲ. ಎಲ್ಲವೂ ಪಾರ್ಟಿ ತೀರ್ಮಾನ ಮಾಡುತ್ತೆ ಎಂದ್ರು.
ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ: 150 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಜನಪ್ರಿಯ ಬಜೆಟ್ ನೀಡಿದ್ದೇವೆ ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜನಸ್ಪಂದನೆ ಸಿಗಲಿದೆ. ಸ್ಪಷ್ಟವಾಗಿ ಹೇಳುತ್ತೇನೆ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ.. ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಅಮಿತ್ ಶಾ, ಯಡಿಯೂರಪ್ಪ ಅವರೂ ಹೇಳಿದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ರಾಮುಲು ಪುನರುಚ್ಚರಿಸಿದ್ರು.. ಶಾಸಕ ಬಸನಗೌಡ ಯತ್ನಾಳ್ ವಯಕ್ತಿಕ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ, ಸಿಎಂ ಬೊಮ್ಮಾಯಿ ಯವರು ಎಲ್ಲ ಜಾತಿ ಧರ್ಮದವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಶಾಲ ಹೃದಯದವರು. ನಮ್ಮ ಮುಖ್ಯಮಂತ್ರಿಗಳೇ ಮುಂದುವರೆಯುತ್ತಾರೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ರು.
Chitradurga Lamb's Birthday: ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ ರೈತ!
ಸಂಪುಟ ವಿಸ್ತರಣೆ ವಿಚಾರವಾಗಿ ನಿಕಟಪೂರ್ವ ಸಿಎಂ ಯಡಿಯೂರಪ್ಪ ಈಗಾಗ್ಲೆ ಹೇಳಿದ್ದಾರೆ. ಸಂಪುಟ ವಿಚಾರವಾಗಿ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಹೈಕಮಾಂಡ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ್ರು. ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅಧ್ಯತೆ ನೀಡ್ಬೇಕು ಎಂದಿದ್ದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ, ಹಿರಿಯ ನಾಯಕ ಸಂತೋಷ್ ಜೀ ಹೇಳಿರುವ ವಿಚಾರ ಸರಿಯಾಗಿದೆ. ಹೊಸಬರಿಗೆ ಅವಕಾಶ ಕೊಡೋದ್ರಿಂದ ಜಿಡ್ಡು ಗಟ್ಟಿದ ವ್ಯವಸ್ಥೆ ಬದಲಾಗಲಿದೆ. ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು, ರಾಜಕೀಯವಾಗಿ ನಿಶಕ್ತರಾದವರು ತೊಲಗಬೇಕು. ಹೊಸಬರು ಬರಬೇಕು. ಎಂದ ಬಿಎಲ್ ಸಂತೋಷ ಹೇಳಿಕೆಗೆ ಅನುಮೋದನೆ ನೀಡಿದ್ರು.
ಪಿಎಸ್ ಐ ನೇಮಕಾತಿಯಲ್ಲಿ ಭಷ್ಟಾಚಾರ ಆಗಿದೆ ಅಂತಾ ಕಂಡು ಹಿಡಿದಿದ್ದು ನಾವೇ: ಪಿಎಸ್ ಐ ಪರೀಕ್ಷೆಯಲ್ಲಿ ಹಗರಣವಾಗಿದೆ ಎಂಬುದನ್ನ ಹೊರತಂದಿದ್ದೇವೆ. ನಮ್ಮ ಸರ್ಕಾರವೇ ತನಿಖೆಗೆ ಆದೇಶ ಮಾಡಿದೆ. ಆದ್ರೆ ಕಾಂಗ್ರೆಸ್ ನಮ್ಮ ಮೇಲೆಯೆ ಆರೋಪ ಮಾಡುತ್ತಿದೆ. ಅಶ್ವತ್ಥ ನಾರಾಯಣ ಅವರ ವಿರುದ್ಧ ದಾಖಲೆಗಳಿದ್ದರೆ ಕೊಡಿ. ಕಾಂಗ್ರೆಸ್ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದ ಜನಕ ಕಾಂಗ್ರೆಸ್.. ಕಾಂಗ್ರೆಸ್ ದೇಶ ಲೂಟಿ ಮಾಡಿದ್ದಾರೆ. 60 ವರ್ಷದಿಂದ ಇದೇ ತಪ್ಪು ಮಾಡುತ್ತ ಬಂದಿದ್ದಾರೆ. ಅವರ ತಪ್ಪನ್ನ ಬಿಜೆಪಿ ಸರಿ ಪಡಿಸುವ ಕೆಲಸ ಮಾಡುತ್ತಿದೆ. ನಮ್ಮ ಕೆಲಸ ಮುಂದಿನ ಚುನಾವಣೆಯಲ್ಲಿ ಶ್ರೀ ರಕ್ಷೆಯಾಗಿದೆ ಅಂತಾ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ರು.
VIJAYAPURA ಆದಿಲ್ ಶಾಹಿಗಳ ದಾಳಿ ನಲುಗಿದ್ದ ಪುರಾತನ ಶಿವನ ದೇಗುಲಕ್ಕೆ ಪುನರುಜ್ಜೀವನ
ನಮ್ಮ ಅವಧಿಯಲ್ಲೇ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ: ವಾಲ್ಮೀಕಿ ಸಮಾಜಕ್ಕೆ (valmiki community) ಶೇಕಡಾ 7.5 ಮೀಸಲಾತಿ ಹೆಚ್ಚಿಸುವ ವಿಚಾರ ಸಂಬಂಧಿಸಿದಂತೆ ಮಾತ್ನಾಡಿದ ಸಚಿವ ರಾಮುಲು, ನಮ್ಮ ಅವಧಿಯಲ್ಲೇ ಮೀಸಲಾತಿ ಹೆಚ್ಚಳ ಆಗಲಿದೆ ಎಂಬ ವಿಶ್ವಾಸ ಇದೆ.. ಸಮಾಜಕ್ಕೆ ಮಾತು ಕೊಟ್ಟಿದ್ದೇನೆ ಮಾತಿನಂತೆ ಇದೇ ಅವಧಿಯಲ್ಲಿ ಮೀಸಲಾತಿ ಹೆಚ್ಚಳ ಆಗಲಿದೆ.. ಮಾಡೇ ಮಾಡುತ್ತೇವೆ ಅನ್ನೋ ನಂಬಿಕೆ ಇದೆ.. ಕೆಲಸ ಆಗೇ ಆಗುತ್ತೆ. ರಾಜೀನಾಮೆ, ರಾಜಕೀಯ ನಿವೃತ್ತಿ ಪ್ರಶ್ನೆಯೇ ಬರಲ್ಲ ಎಂದ್ರು.