ಸಿದ್ದರಾಮಯ್ಯ ಬ್ರಹ್ಮಾಸ್ತ್ರ, ಅತೃಪ್ತ ಶಾಸಕರಿಗೆ ಅನರ್ಹತೆಯ ಭೀತಿ

By Web DeskFirst Published Feb 11, 2019, 6:09 PM IST
Highlights

ನಾಲ್ಕು ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮಕ್ಕೆ ಸ್ಪೀಕರ್ ಗೆ ದೂರು! ಪದೇ ಪದೇ ನೊಟೀಸ್ ಕೊಟ್ರು ಶಾಸಕರು  ಹಾಜರಾಗಿರಲಿಲ್ಲ!  ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಪಕ್ಷ ವಿರೋಧಿ ನಡವಳಿಕೆ ಅಡಿಯಲ್ಲಿ ಕ್ರಮಕ್ಕೆ ದೂರು ನೀಡಿದ ಸಿಎಲ್‌ಪಿ ನಾಯಕ.

ಬೆಂಗಳೂರು, (ಫೆ.11): ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ಕಾಂಗ್ರೆಸ್  ನ ನಾಲ್ವರು ಅತೃಪ್ತ ಶಾಸಕರಿಗೆ ಅನರ್ಹತೆಯ ಭೀತಿ ಎದುರಾಗಿದೆ.

ವಿಪ್ ಉಲ್ಲಂಘನೆ ಮಾಡಿರುವುದರಿಂದ ಪಕ್ಷಾಂತರ ಕಾಯ್ದೆ ಅಡಿಯಲ್ಲಿ ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು  ಅನರ್ಹ ಮಾಡುವಂತೆ  ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ  ಇಂದು [ಸೋಮವಾರ] ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ದೂರು ನೀಡಿದರು.

ಪಕ್ಷ ವಿರೋಧಿ ಚಟುವಟಿಕೆ, ವಿಪ್ ಉಲ್ಲಂಘನೆ ಕಾರಣಕ್ಕೆ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ ಹಾಗೂ ಉಮೇಶ್ ಜಾಧವ್ ಅವರ ಅನರ್ಹತೆಗೆ ಕ್ರಮ ಕೈಗೊಳ್ಳುವಂತೆ ಶಾಸಕಾಂಗ ಪಕ್ಷದ ನಾಯಕ ಅವರು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಉಪಸ್ಥಿತರಿದ್ದರು. pic.twitter.com/m2LbijuQAd

— Karnataka Congress (@INCKarnataka)

ಅತೃಪ್ತರ ವಿರುದ್ಧ ಕ್ರಮ: ಕೈಪಡೆಗೆ 2 ವಿಷಯಗಳದ್ದೇ ಟೆನ್ಶನ್

ಗೋಕಾಕ್ MLA, ಮಹೇಶ ಕುಮಠಳ್ಳಿ, ಬಿ.ನಾಗೇಂದ್ರ ಹಾಗೂ ಡಾ. ಉಮೇಶ್ ಜಾಧವ್ ಅವರು ಎರಡೆರಡು ಬಾರಿ ಶೋಕಾಸ್ ನೋಟಿಸ್ ಹಾಗೂ ವಿಪ್​ಗಳನ್ನು ಜಾರಿ ಮಾಡಿದ್ದರೂ ಅದ್ಯಾವುದಕ್ಕೆ ಕಿಮ್ಮತ್ತು ನೀಡಿಲ್ಲ. 

ಹೀಗಾಗಿ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ.

ಈ ವೇಳೆ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಾಥ್ ನೀಡಿದರು.

click me!