ಸಂಧಾನ ಯಶಸ್ವಿ ಬೆನ್ನಲ್ಲೇ ಅತೃಪ್ತ ಶಾಸಕನಿಗೆ ಸಿದ್ದರಾಮಯ್ಯ ನೋಟಿಸ್

By Web DeskFirst Published Feb 5, 2019, 9:51 PM IST
Highlights

ಶಾಸಕ ಉಮೇಶ್ ಜಾಧವ್ ಗೆ 3ನೇ ನೋಟಿಸ್! ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟಿಸ್! ಖುದ್ದು ಭೇಟಿಯಾಗಿ ಸ್ಪಷ್ಟೀಕರಣ ನೀಡಲು ಸಿದ್ದರಾಮಯ್ಯ ಸೂಚನೆ.

ಬೆಂಗಳೂರು, [ಫೆ.05]: ಕಾಂಗ್ರೆಸ್ ಅತೃಪ್ತ ಶಾಸಕ ಉಮೇಶ್ ಜಾಧವ್ ಜೊತೆಗಿನ ಸಂಧಾನ ಯಶಸ್ವಿಯಾಯ್ತು ಎನ್ನುವಷ್ಟರಲ್ಲಿಯೇ ಮತ್ತೊಂದು ನೋಟಿಸ್ ನೀಡಲಾಗಿದೆ.

ಕೆಪಿಸಿಸಿ ಕಾರ್ಯದ್ಯಕ್ಷ ಈಶ್ವರ್ ಖಂಡ್ರೆ ಅವರು ಇಂದು [ಬುಧವಾರ] ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಅವರೊಡನೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಲ ಷರತ್ತುಗಳೊಂದಿಗೆ ಮಾತುಕತೆ ಯಶಸ್ವಿಯಾಗಿದೆ ಎನ್ನಲಾಗಿದೆ.

ಮತ್ತೊಬ್ಬ ‘ಪ್ರಮುಖ’ ಅತೃಪ್ತ ಶಾಸಕ U-ಟರ್ನ್: ಆಪರೇಷನ್‌ ಪಂಕ್ಚರ್

ಆದ್ರೆ ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಾಧವ್ ಗೆ 3ನೇ ನೋಟಿಸ್ ನೀಡಿದ್ದಾರೆ. ಖುದ್ದು ಭೇಟಿಯಾಗಿ ಸ್ಪಷ್ಟೀಕರಣ ನೀಡುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಅಧಿವೇಶನಕ್ಕೂ ಮುಂಚೆ ಅಥವಾ ಅಧಿವೇಶನ ಅವಧಿಯಲ್ಲಿ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಕಚೇರಿಗೆ ಬಂದು ಭೇಟಿ ಮಾಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ.

ಗೈರಾದ ಶಾಸಕರಿಗೆ ಶೋಕಾಸ್ ನೋಟಿಸ್​ ಕೊಟ್ಟ ಕಾಂಗ್ರೆಸ್​:ನೋಟಿಸ್​ನಲ್ಲೇನಿದೆ?

ಈಗಾಗಲೇ ಉಮೇಶ್ ಜಾಧವ್ ಅವರಿಗೆ ಎರಡು ನೋಟಿಸ್ ನೀಡಲಾಗಿತ್ತು.  ಜ.18ರ ಶಾಸಕಾಂಗ ಸಭೆಗೆ ಗೈರು ಹಿನ್ನೆಲೆ ಸ್ಪಷ್ಟನೆ ನೀಡಲು ನೋಟಿಸ್ ನೀಡಿದ್ದರು.ಇದಾದ ಬಳಿಕ CLP ಕಾರ್ಯದರ್ಶಿ ಜ.27ರಂದು ಎರಡನೇ ನೋಟಿಸ್ ನೀಡಿದ್ದರು.

ಆದ್ರೆ, ನೋಟಿಸ್ ನೀಡಿ  9 ದಿನವಾದರೂ ಉಮೇಶ್ ಜಾಧವ್ ಉತ್ತರಿಸದಿದ್ದಕ್ಕೆ ಈಗ ಸಿದ್ದರಾಮಯ್ಯ ಅವರು 3ನೇ ನೋಟಿಸ್ ನೀಡಿದ್ದಾರೆ.

ಇನ್ನೊಂದು ಪ್ರಮುಖ ಅಂಶ ಅಂದ್ರೆ ನಾಳೆಯಿಂದ [ಬುಧವಾರ] ಬಜೆಟ್ ಅಧೀವೇಶನ ನಡೆಯಲಿದ್ದು, ಅಧೀವೇಶನದಲ್ಲಿ ಪಾಲ್ಗೊಳ್ಳುವಂತೆ ಈಗಾಗಲೇ ಕಾಂಗ್ರೆಸ್ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ.

ಒಂದು ವೇಳೆ ವಿಪ್ ಉಲ್ಲಂಘಿಸಿ ಬಜೆಟ್ ಅಧಿವೇಶನಕ್ಕೆ ಗೈರಾದರೆ ಪಕ್ಷಾಂತರ ಕಾಯ್ದೆ ಅಡಿಯಲ್ಲಿ ಕ್ರಮಕೈಗೊಳ್ಳುವ ಸಾದ್ಯತೆಗಳಿವೆ. ಒಟ್ಟಿನಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಅತೃಪ್ತ ಶಾಸಕರ ನಡೆ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.

click me!