ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

By Web Desk  |  First Published Feb 5, 2019, 12:43 PM IST

ಕಳೆದ 27 ವರ್ಷಗಳಿಂದ ಬಿಜೆಪಿ ಅಧಿಪತ್ಯ ಸಾಧಿಸಿರುವ ಈ ಲೋಕಸಭಾ ಸ್ಥಾನವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಲು ಮುಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೋಮುವಾದದ ಸಂಗತಿಗಳು ಎರಡೂ ಪಕ್ಷಗಳಿಗೆ ಸಿಗುತ್ತಿಲ್ಲ. ಹಾಗಾಗಿ ಅಭಿವೃದ್ಧಿ ವೈಫಲ್ಯವನ್ನೇ ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡಿವೆ. ಬಿಜೆಪಿ ರಾಜ್ಯ ಸಮ್ಮಿಶ್ರ ಸರ್ಕಾರದ ಪ್ರತಿಯೊಂದು ನಡೆಯನ್ನೂ ಟೀಕಿಸುತ್ತಾ ಆರೋಪಿಸುತ್ತಿದ್ದರೆ, ಕಾಂಗ್ರೆಸ್ ಕೂಡ ಕೇಂದ್ರದ ನೀತಿಗಳನ್ನು ಪಟ್ಟಿ ಮಾಡಿದೆ.


ಮಹಾಭಾರತ ಸಂಗ್ರಾಮ: ದಕ್ಷಿಣ ಕನ್ನಡ ಕ್ಷೇತ್ರ

ಮಂಗಳೂರು[ಫೆ.05]: ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಂಪನ ಸೃಷ್ಟಿಯಾಗಿದೆ. ಕಳೆದ 27 ವರ್ಷಗಳಿಂದ ಬಿಜೆಪಿ ಅಧಿ​ಪತ್ಯ ಸಾಧಿ​ಸಿ​ರುವ ಈ ಲೋಕಸಭಾ ಸ್ಥಾನವನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಲು ಮುಂದಾಗಿದೆ. ಭದ್ರ​ಕೋ​ಟೆ​ಯಲ್ಲಿ ಬಿಜೆ​ಪಿಗೆ ಸೋಲು​ಣಿ​ಸುವ ಮೂಲಕ ಅದರ ಆತ್ಮ​ವಿ​ಶ್ವಾ​ಸಕ್ಕೆ ಪೆಟ್ಟು​ಕೊ​ಡ​ಬೇಕು ಎಂಬ ಉದ್ದೇ​ಶ​ದಿಂದ ಈಗಾ​ಗಲೇ ಕಾಂಗ್ರೆಸ್‌ ಕಾರ್ಯ​ಕ​ರ್ತರು ಹಾಗೂ ನಾಯ​ಕರು ಇನ್ನಿ​ಲ್ಲದ ಉತ್ಸಾ​ಹ​ದಿಂದ ಪ್ರಚಾರ ಕಾರ್ಯಕ್ಕೆ ಈಗಾ​ಗಲೇ ಧುಮು​ಕಿ​ದ್ದಾ​ರೆ.

Tap to resize

Latest Videos

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಚುನಾವಣೆಗೆ ಎರಡ್ಮೂರು ತಿಂಗಳ ಮೊದಲೇ ಕೈಪಾಳಯ ಪುಟಿದೆದ್ದಿದೆ. ಬಿಜೆ​ಪಿಯ ಹಾಲಿ ಸಂಸ​ದರು ತೋರಿದ್ದಾರೆ ಎನ್ನಲಾದ ವೈಫ​ಲ್ಯ​ಗ​ಳನ್ನು ಒಂದೊಂದಾಗಿ ಹೆಕ್ಕಿ ತೆಗೆ​ಯ​ತೊ​ಡ​ಗಿ​ದ್ದಾರೆ. ಹೀಗಾಗಿ ಈ ಕಣ ಈ ಬಾರಿ ಭಾರಿ ಪೈಪೋ​ಟಿ ನಡೆ​ಯುವ ಎಲ್ಲಾ ಲಕ್ಷ​ಣ​ಗ​ಳನ್ನು ತೋರಿ​ಸ​ತೊ​ಡ​ಗಿ​ದೆ.

ಲೋಕಸಭೆಯ ಮಟ್ಟಿಗೆ ದ.ಕ. ಜಿಲ್ಲೆಯಲ್ಲಿ ಬಿಜೆಪಿಯದೇ ಪ್ರಾಬಲ್ಯ. ತಮ್ಮ ಸಂಸ​ದರ ವಿರುದ್ಧ ಕಾಂಗ್ರೆಸ್‌ ನಡೆ​ಸಿ​ರುವ ಪ್ರಚಾ​ರಾಂದೋ​ಲ​ನಕ್ಕೆ ಬಿಜೆಪಿ ಕೂಡ ಮಾರು​ತ್ತರ ನೀಡಲು ಸಜ್ಜಾ​ಗಿದೆ. ದ.ಕ. ಜಿಲ್ಲೆಗೆ ಕೇಂದ್ರ ಸರ್ಕಾರ ಕೊಡುಗೆಯ ಬಗ್ಗೆ ಗಂಭೀರ ಪ್ರಚಾರಕ್ಕೆ ಮುಂದಡಿ ಇಟ್ಟಿದ್ದಾರೆ. ಈಗಾಗಲೇ ಮುದ್ರಾ ಸಾಲ ಯೋಜನೆ, ಸ್ಟಾರ್ಟ್‌ ಅಪ್‌ ಯೋಜನೆ ಹಾಗೂ ಈಗ ಉಜ್ವಲ ಯೋಜನೆಯ ಸಮಾವೇಶಗಳನ್ನು ಅದ್ಧೂರಿಯಾಗಿ ನಡೆಸಿ ವಿಪಕ್ಷಗಳು ಕಣ್ಣು ಕುಕ್ಕುವಂತೆ ಮಾಡಿದೆ.ಆದರೆ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ಹೇಳಿಕೊಳ್ಳುವಂತಹ ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಬಿಜೆಪಿಗರನ್ನು ಕಾಡುತ್ತಿದೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಈ ಬಾರಿ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೋಮುವಾದದ ಸಂಗತಿಗಳು ಎರಡೂ ಪಕ್ಷಗಳಿಗೆ ಸಿಗುತ್ತಿಲ್ಲ. ಹಾಗಾಗಿ ಅಭಿವೃದ್ಧಿ ವೈಫÜಲ್ಯವನ್ನೇ ಈ ಬಾರಿ ಚುನಾವಣಾ ಪ್ರಚಾರಕ್ಕೆ ಬಂಡವಾಳ ಮಾಡಿಕೊಂಡಿವೆ. ಬಿಜೆಪಿ ರಾಜ್ಯ ಸಮ್ಮಿಶ್ರ ಸರ್ಕಾರದ ಪ್ರತಿಯೊಂದು ನಡೆಯನ್ನೂ ಟೀಕಿಸುತ್ತಾ ಆರೋಪಿಸುತ್ತಿದ್ದರೆ, ಕಾಂಗ್ರೆಸ್‌ ಕೂಡ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಪಟ್ಟಿಮಾಡಿ ಹೇಳುತ್ತಾ ಬರುತ್ತಿದೆ. ಇದಕ್ಕೆ ಪೂರಕವಾಗಿ ಜೆಡಿಎಸ್‌ ಹಾಗೂ ಸಿಪಿಎಂ ಪಕ್ಷಗಳು ಕೂಡ ಕೇಂದ್ರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತಲೇ ಇವೆ.

ಬಿಜೆಪಿಯಿಂದ ಮತ್ತೆ ಕಟೀಲ್‌?:

ಬಿಜೆಪಿಯಿಂದ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮತ್ತೆ ಸ್ಪರ್ಧಿಸುವ ಸಂಭವವೇ ಜಾಸ್ತಿ ಎನ್ನುತ್ತಿವೆ ಪಕ್ಷದ ಮೂಲಗಳು. ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಕೆಲವು ತಿಂಗಳ ಹಿಂದೆ ಅಭಿವೃದ್ಧಿ ಕಾರ್ಯ ಕಡೆಗಣನೆ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ಮೂರ್ನಾಲ್ಕು ಮಂದಿ ಟಿಕೆಟ್‌ಗೆ ಪ್ರಯತ್ನಿಸಲು ಸಿದ್ಧರಾಗಿದ್ದಾರೆ. ಒಳಗೊಳಗೇ ಅಸಮಾಧಾನ ಇದೆಯಾದರೂ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಅಸ್ತ್ರವನ್ನು ಮುಂದಿಟ್ಟುಕೊಂಡು ಅಸಮಾಧಾನದ ಹೊಗೆಯನ್ನು ಹೋಗಲಾಡಿಸುವ ಪ್ರಯತ್ನಗಳು ನಡೆಯುತ್ತಿವೆ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ನಳಿನ್‌ ಎರಡು ಬಾರಿ ಸಂಸದರಾಗಿದ್ದರೂ, ಕ್ಷೇತ್ರದ ಪ್ರಮುಖ ಬೇಡಿಕೆಯಾದ ಪ್ರತ್ಯೇಕ ರೈಲ್ವೆ ವಲಯ, ಪ್ಲಾಸ್ಟಿಕ್‌ ಪಾರ್ಕ್, ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ವಿಶೇಷ ಕೃಷಿ ಆರ್ಥಿಕ ವಲಯ ಬೇಡಿಕೆಗಳು ಈಡೇರಿಲ್ಲ. ಈ ಸಾಲಿಗೆ ವಿಪಕ್ಷಗಳ ಹೋರಾಟದಿಂದಾಗಿ ಹೆದ್ದಾರಿ ಕಾಮಗಾರಿ ಹಾಗೂ ಪಂಪ್‌ವೆಲ್‌, ತೊಕ್ಕೊಟ್ಟು ಮೇಲ್ಸೇತುವೆಗಳೂ ವೈಫಲ್ಯ ಪಟ್ಟಿಗೆ ಸೇರಿಕೊಂಡಿವೆ. ಆದರೆ ಟಿಕೆಟ್‌ಗೆ ಗೆಲ್ಲುವ ಮಾನದಂಡವನ್ನು ಇರಿಸಿಕೊಂಡರೆ ತೊಡಕಾಗದು ಎನ್ನುವುದು ಪಕ್ಷ ಮುಖಂಡರ ಅಂಬೋಣ.

ಕಾಂಗ್ರೆಸ್‌ನಿಂದ ಯಾರು?:

ದ.ಕ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಿಂದ ಲೋಕಸಭೆಗೆ ಅಭ್ಯರ್ಥಿ ಯಾರು? ಇದು ಮಿಲಿಯನ್‌ ಡಾಲರ್‌ ಪ್ರಶ್ನೆ. ಕಳೆದ ಅವಧಿಯಲ್ಲಿ ಸ್ಪರ್ಧಿಸಿದ್ದ ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಈ ಇಳಿವಯಸ್ಸಿನಲ್ಲೂ ನಾನು ಕೂಡ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಟಿಕೆಟ್‌ ಸಿಗುವುದು ದೂರದ ಮಾತು ಎಂದು ಕಾಂಗ್ರೆಸಿಗರೇ ಹೇಳುತ್ತಿದ್ದರೂ ಪೂಜಾರಿ ಮಾತ್ರ ನಾನು ದೆಹಲಿಗೆ ಹೋಗಿ ಪ್ರಯತ್ನ ನಡೆಸುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಈಗಾಗಲೇ ಟಿಕೆಟ್‌ಗಾಗಿ ಒಂದು ಸುತ್ತಿನ ದೆಹಲಿ ಯಾತ್ರೆ ಮುಗಿಸಿ ಬಂದಿದ್ದಾರೆ. ಇವರಲ್ಲದೆ ದೆಹಲಿ ಮಟ್ಟದಲ್ಲಿ ಗಟ್ಟಿಬೇರು ಹೊಂದಿರುವ ಬಿ.ಕೆ. ಹರಿಪ್ರಸಾದ್‌ ಕೂಡ ದ.ಕ. ಕ್ಷೇತ್ರದತ್ತ ದೃಷ್ಟಿನೆಟ್ಟಿದ್ದಾರೆ.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಮಾಜಿ ಸಂಸದ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮತ್ತೊಮ್ಮೆ ದ.ಕ.ದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇವರಲ್ಲದೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಕೂಡ ಟಿಕೆಟ್‌ ಆಕಾಂಕ್ಷಿಗಳ ಸಾಲಿನಲ್ಲಿ ಇದ್ದಾರೆ. ಈ ಮಧ್ಯೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕು ಎನ್ನುವ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಹಾಲಿ ಸಚಿವ ಯು.ಟಿ.ಖಾದರ್‌ ಅಥವಾ ಬೇರೆ ಯಾರಿಗಾದರೂ ಟಿಕೆಟ್‌ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳು ಬೇಡಿಕೆಯನ್ನು ಮುಂದೊಡ್ಡಿವೆ. ಆದರೆ ಬಹುಸಂಖ್ಯಾತ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡುವ ಸಾಹಸಕ್ಕೆ ಕಾಂಗ್ರೆಸ್‌ ಕೈಹಾಕದು ಎನ್ನುವುದು ಕಾಂಗ್ರೆಸ್‌ನ ಒಂದು ಪಂಗಡದ ಅಭಿಮತ. ಸಿಪಿಎಂ ಪ್ರತ್ಯೇಕವಾಗಿ ಸ್ಪರ್ಧಿಸುವುದೇ ಅಥವಾ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದೇ ಎಂಬ ಜಿಜ್ಞಾಸೆಯಲ್ಲಿ ಇದೆ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಮಾತ್ರ ಸಿಪಿಎಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ.

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

91ರಿಂದ ಬಿಜೆಪಿಯದೇ ಅಧಿಪತ್ಯ

ಬಿಜೆಪಿ-ಕಾಂಗ್ರೆಸ್‌ ಎದುರಾಳಿ ದ.ಕ. ಲೋಕಭಾ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆದಿದೆ. 1991ರಿಂದ ನಿರಂತರವಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಬರುತ್ತಿದ್ದಾರೆ. ಇಲ್ಲಿ ಜೆಡಿಎಸ್‌ ಮತ್ತು ಸಿಪಿಎಂ ಪಕ್ಷಗಳ ಪ್ರಾಬಲ್ಯ ಸ್ವಲ್ಪಮಟ್ಟಿಇದ್ದರೂ ನೇರ ಸ್ಪರ್ಧೆಯ ಎದುರು ನಗಣ್ಯ ಎನಿಸಿವೆ. ಇಷ್ಟಾ​ದರೂ ಕಾಂಗ್ರೆ​ಸ್‌ನ ಜನಾ​ರ್ದನ ಪೂಜಾರಿ ಅವ​ರಿಗೆ ಇಲ್ಲಿಂದ ಸ್ಪರ್ಧಿ​ಸುವ ಉತ್ಸಾಹ ಬತ್ತು​ವುದೇ ಇಲ್ಲ. ಸಂಸತ್‌ ಚುನಾವಣೆಗೆ ಹಲವು ಬಾರಿ ಸ್ಪರ್ಧಿಸಿ ಸೋಲು, ಗೆಲುವು ರುಚಿಕಂಡ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಈಗ ಸೀಟು ಆಕಾಂಕ್ಷೆಯ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಇದ್ದಷ್ಟುಉತ್ಸಾಹ ಬೇರೆಯವರಲ್ಲಿ ಇಲ್ಲವಾದರೂ ಒಂದು ಕೈ ನೋಡೋಣ ಎಂದು ಟಿಕೆಟ್‌ಗಾಗಿ ಹೈಕಮಾಂಡ್‌ ಬಾಗಿಲು ತಟ್ಟುವವರಿಗೆ ಇಲ್ಲಿ ಕೊರತೆ ಇಲ್ಲ.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

ಬಿಜೆಪಿ ಶಾಸ​ಕ​ರದ್ದೆ ಪ್ರಾಬಲ್ಯ

ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಸುಳ್ಯ, ಪುತ್ತೂರು, ಬೆಳಂಗಡಿ, ಬಂಟ್ವಾಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗೂ ಮೂಡುಬಿದಿರೆ ಈ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರು ಗೆದ್ದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ.ಖಾದರ್‌ ಮಾತ್ರ ಅಧಿಕಾರದಲ್ಲಿ ಜಿಲ್ಲಾ ಕಾಂಗ್ರೆಸ್‌ಗೆ ಟಾನಿಕ್‌ ಆಗಿದ್ದಾರೆ. ಇವರನ್ನು ನೆಚ್ಚಿಕೊಂಡು ಕಾಂಗ್ರೆಸ್‌ ಲೋಕಸಭಾ ಚುನಾವಣೆಗೆ ಧುಮುಕಬೇಕಾಗಿದೆ. ಅದಕ್ಕಾಗಿ ಹೆದ್ದಾರಿ ಹೋರಾಟದ ಸಭೆಯಲ್ಲೇ ಸಚಿವ ಖಾದರ್‌ ಚುನಾವಣೆ ಘೋಷಣೆಗೂ ಮೊದಲೇ ಚುನಾವಣೆ ಎದುರಿಸಲು ಪ್ರಚಾರ ಕಣಕ್ಕೆ ಇಳಿಯುವಂತೆ ಕರೆ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

ಲೋಕಸಭಾ ಚುನಾವಣೆ: ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ ಬಾಗಲಕೋಟೆ

ರೇಸ್‌ನಲ್ಲಿ ಯಾರು?

ಬಿಜೆಪಿ: ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಮೋನಪ್ಪ ಭಂಡಾರಿ, ಕ್ಯಾ.ಬ್ರಿಜೇಶ್‌ ಚೌಟ, ಕ್ಯಾ.ಗಣೇಶ್‌ ಕಾರ್ಣಿಕ್‌.

ಕಾಂಗ್ರೆಸ್‌: ಜನಾರ್ದನ ಪೂಜಾರಿ, ಬಿ.ಕೆ. ಹರಿಪ್ರಸಾದ್‌, ವಿನಯ ಕುಮಾರ್‌ ಸೊರಕೆ, ಯು.ಟಿ.ಖಾದರ್‌, ಐವಾನ್‌ ಡಿಸೋಜಾ.

-ಆತ್ಮಭೂಷಣ್‌

click me!