"ನೀವು ತಹಶಿಲ್ದಾರ್ ಆಗಿ ತಮ್ಮ ಕಾರನ್ನು ದುರ್ಬಳಕೆ ಮಾಡಿಕೊಳ್ತಿದ್ದೀರಿ, ಅಲ್ಲದೇ ಖಾಸಗಿ ಸಂಘ ಸಂಸ್ಥೆಗಳಿಗೆ ಜಮೀನು ಮಂಜುರು ಮಾಡುವ ವಿಚಾರದಲ್ಲಿ ತಾರತಮ್ಯ ಮಾಡ್ತೀದ್ದೀರಿ' ಎಂದು ತಹಶೀಲ್ದಾರ್ ವಿರುದ್ದ ಶಾಸಕ ರಘುಮೂರ್ತಿ ಗರಂ ಆದ್ರು. ನೀವು ಬೇಕು ಅಂತಲೇ ನನ್ನನ್ನು ಟಾರ್ಗೆಟ್ ಮಾಡ್ತಿದ್ದೀರಿ, ಅದ್ಯಾವನಿಗೆ ಕಂಪ್ಲೆಂಟ್ ಕೊಡ್ತೀರ ಕೊಡ್ರಿ ನೋಡೋಣ' ಎಂದು ಶಾಸಕರಿಗೆ ಕೈ ತೋರಿಸಿ ಮಾತನಾಡಿ ಸಭೆಯಿಂದ ಅರ್ಧಕ್ಕೆ ಹೊರ ನಡೆದ ತಹಸೀಲ್ದಾರ್.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜ.20) : ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದೆರಡು ತಿಂಗಳು ಗಳಿಂದ ಅಲ್ಲಿನ ಶಾಸಕ ಹಾಗೂ ತಹಶೀಲ್ದಾರ್ ಮಧ್ಯೆ ಶೀತಲ ಸಮರ ನಡೆಯುತ್ತಲೇ ಇತ್ತು. ಒಂದಲ್ಲ ಒಂದು ವಿಚಾರಕ್ಕೆ ಇಬ್ಬರು ಕಿರಿಕಿರಿ ಮಾಡಿಕೊಳ್ಳುತ್ತಲೇ ಇದ್ರು. ಆದ್ರೆ ಯಾವತ್ತೂ ಕೂಡ ಮುನ್ನೆಲೆಗೆ ಬಂದು ಬಹಿರಂಗವಾಗಿ ಸಭೆಯಲ್ಲಿ ಮಾತಿನ ಚಕಮಕಿ ಮಾಡಿರಲಿಲ್ಲ. ಆದ್ರೆ ನಿನ್ನೆ ಚಳ್ಳಕೆರೆ ಪಟ್ಟಣದ ತಾಲ್ಲೂಕು ಆಫೀಸ್ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರ ನಡುವಿನ ಅಸಮಾಧಾನ ಸ್ಫೋಟಗೊಂಡಿದೆ ಅದಕ್ಕೆ ಮುಖ್ಯ ಕಾರಣ ರಾಜಕೀಯ.
ಹೌದು ಇನ್ನೇನು ವಿಧಾನಸಭಾ ಚುನಾವಣೆ(Assembly election)ಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಆದ್ರೆ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿ ಕಣಕ್ಕೆ ಇಳಿಯುತ್ತಾರೆ ಎಂಬುದು ಬಹುತೇಕ ಆಯಾ ಕ್ಷೇತ್ರದ ಜನರಿಗೆ ತಿಳಿದೇ ಇದೆ. ಆದ್ರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ(Challakere assembly constituency)ದಲ್ಲಿ ಕಳೆದ ಎರಡು ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಶಾಸಕ ರಘುಮೂರ್ತಿ(MLA Raghumurthy) ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅವರ ವಿರುದ್ದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ, ಗೆಲುವು ಕಬ್ಬಿಣದ ಕಡಲೆಯೇ ಎಂದರೆ ತಪ್ಪಾಗಲಿಕ್ಕಿಲ್ಲ. ಅದಕ್ಕೆ ಉತ್ತರ ಕೊಡುವಂತಿದೆ ಹಾಲಿ ಶಾಸಕ ರಘುಮೂರ್ತಿ ಅವರು ಚಳ್ಳಕೆರೆ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಸಾಕು ಅಂತಾರೆ ಜನರು.
ಚಳ್ಳಕೆರೆಯಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ; ಜಿಲ್ಲೆಗೆ ಸಚಿವರಿದ್ದೂ ಏನು ಪ್ರಯೋಜನ?
ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಶಾಸಕ ರಘುಮೂರ್ತಿ ವಿರುದ್ದ ಸ್ಪರ್ಧಿಸಲು ಓರ್ವ ಸರ್ಕಾರಿ ಅಧಿಕಾರಿ ಕಣಕ್ಕಿಳಿಯುವ ಪ್ಲಾನ್ ಮಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಇದೇ ಚಳ್ಳಕೆರೆ ಕ್ಷೇತ್ರಕ್ಕೆ ತಹಶೀಲ್ದಾರ್ ಆಗಿ ಆಗಮಿಸಿರೋ ಎನ್ ರಘುಮೂರ್ತಿ(Thahsildar N Raghumurthy) ಚುನಾವಣಾ ಅಖಾಡಕ್ಕೆ ಇಳಿಯಲು ತೆರೆಮರೆಯಲ್ಲಿ ಮಾಸ್ಟರ್ ಪ್ಲಾನ್(Masterplan) ಮಾಡ್ತಿದ್ದಾರೆ. ಇತ್ತ ಸರ್ಕಾರಿ ಹುದ್ದೆಗೂ ರಾಜೀನಾಮೆ ನೀಡದೇ, ಅತ್ತ ಅಧಿಕೃತವಾಗಿ ಚುನಾವಣಾ ಆಖಾಡಕ್ಕೆ ಧುಮುಕದೇ ಸರ್ಕಾರಿ ಹುದ್ದೆಯಲ್ಲಿ ಇದ್ರು ಕೂಡ ಗ್ರಾಮಗಳಿಗೆ ಸಮಸ್ಯೆ ನೆಪದಲ್ಲಿ ಭೇಟಿ ಮಾಡುವುದು. ಜನರನ್ನ ತಮ್ಮತ್ತ ಸೆಳೆಯಲು ಏನೆಲ್ಲಾ ಪ್ಲಾನ್ ಮಾಡಬೇಕೋ ಅದನ್ನೆಲ್ಲಾ ತಹಶೀಲ್ದಾರ್ ರಘುಮೂರ್ತಿ ಮಾಡ್ತಿದ್ದಾರೆ ಎಂದು ಶಾಸಕ ರಘುಮೂರ್ತಿ ಅವರು ಆಪ್ತ ವಲಯಗಳಲ್ಲಿ ಚರ್ಚೆ ಆಗುತ್ತಲೇ ಇತ್ತು.
ಆದರೂ ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿಲ್ಲ ಶಾಸಕ ರಘುಮೂರ್ತಿ ತಮ್ಮ ಬೆಂಬಲಿಗರ ಮೂಲಕ ಅಧಿಕಾರಿಗಳ ಗಮನಕ್ಕೆ ದೂರು ಸಲ್ಲಿಸಿದ್ರು. ಓರ್ವ ಅಧಿಕಾರಿ ಚುನಾವಣಾ ಸಂಬಂಧ ತಿರುಗಾಟ ಮಾಡ್ತಿರೋದು ಎಷ್ಟು ಸರಿ ಎಂದು ದೂರು ಸಲ್ಲಿಸಿದ್ರು ಯಾವುದೇ ಉಪಯೋಗ ಆಗಿರಲಿಲ್ಲ. ಆದ್ರೆ ನಿನ್ನೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರ ನಡುವಿನ ಅಸಮಾಧಾನ ಸ್ಪೋಟಗೊಂಡಿದ್ದು ಕ್ಷೇತ್ರದ ಜನರಿಗೆ ಮನವರಿಕೆ ಆಗಿದೆ.
"ನೀವು ತಹಶಿಲ್ದಾರ್ ಆಗಿ ತಮ್ಮ ಕಾರನ್ನು ದುರ್ಬಳಕೆ ಮಾಡಿಕೊಳ್ತಿದ್ದೀರಿ, ಅಲ್ಲದೇ ಖಾಸಗಿ ಸಂಘ ಸಂಸ್ಥೆಗಳಿಗೆ ಜಮೀನು ಮಂಜುರು ಮಾಡುವ ವಿಚಾರದಲ್ಲಿ ತಾರತಮ್ಯ ಮಾಡ್ತೀದ್ದೀರಿ' ಎಂದು ತಹಶೀಲ್ದಾರ್ ವಿರುದ್ದ ಶಾಸಕ ರಘುಮೂರ್ತಿ ಗರಂ ಆದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ರಘುಮೂರ್ತಿ ನೀವು ಬೇಕು ಅಂತಲೇ ನನ್ನನ್ನು ಟಾರ್ಗೆಟ್ ಮಾಡ್ತಿದ್ದೀರಿ, ಅದ್ಯಾವನಿಗೆ ಕಂಪ್ಲೆಂಟ್ ಕೊಡ್ತೀರ ಕೊಡ್ರಿ ನೋಡೋಣ' ಎಂದು ಶಾಸಕರಿಗೆ ಕೈ ತೋರಿಸಿ ಮಾತನಾಡಿ ಸಭೆಯಿಂದ ಅರ್ಧಕ್ಕೆ ಹೊರ ನಡೆದರು. ಇದ್ರಿಂದ ಇನ್ನೂ ಕೋಪಗೊಂಡ ಶಾಸಕರು ನನಗೆ ಕೈ ತೋರಿಸಿ ಮಾತನಾಡುವುದನ್ನು ಬಿಡಬೇಕು. ನೀವು ಎಲ್ಲದಕ್ಕೂ ತಯಾರಾಗಿದ್ದಿರಿ ಎಂದು ನಮಗೆ ಗೊತ್ತಿದೆ ಎಂದು ಗರಂ ಆದರು.
Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ
ಒಟ್ಟಾರೆ ಅದೇನೆ ಇರ್ಲಿ ಇತ್ತ ಅಧಿಕಾರಿ ಆಗಿರೋ ಎನ್. ರಘುಮೂರ್ತಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ನೇರ ನೇರ ಚುನಾವಣಾ ಅಖಾಡಕ್ಕೆ ಇಳಿದು ಫೈಟ್ ಮಾಡುವುದು ಸರಿ. ಅದನ್ನು ಬಿಟ್ಟು ಅಧಿಕಾರ ಅವಧಿಯಲ್ಲಿ ರಾಜಕೀಯ ಮಾಡಲು ಹೋದ್ರೆ ಇದೇ ಆಗೋದು ಅಂತಿದ್ದಾರೆ ಸ್ಥಳೀಯರು.