* ಪುರಸಭೆ ಮತಗಟ್ಟೆ ಪ್ರವೇಶ ಘಟನೆ
* ಹಾಲಿ, ಮಾಜಿ ಶಾಸಕರ ವಿರುದ್ಧ ಪ್ರಕರಣ
* ಚಪ್ಪಲಿ ಹಿಡಿದು ಅವಾಚ್ಯ ಶಬ್ದ ಬಳಸಿದ ಶಾಸಕ ಭೀಮಾ ನಾಯ್ಕ ವಿಡಿಯೋ ವೈರಲ್
ಹೊಸಪೇಟೆ(ಡಿ.29): ಹಗರಿಬೊಮ್ಮನಹಳ್ಳಿ ಪುರಸಭೆ(Hagaribommanahalli Municipality) ಮತದಾನದ ವೇಳೆ ನಿಯಮ ಮೀರಿ ಮತಗಟ್ಟೆ ಪ್ರವೇಶಿಸಿದ್ದ ಘಟನೆಗೆ ಸಂಬಂಧಿಸಿ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಿ ಶಾಸಕ ಭೀಮಾ ನಾಯ್ಕ(Bhima Naik) ಮತ್ತು ಮಾಜಿ ಶಾಸಕ ನೇಮಿರಾಜ ನಾಯ್ಕ(Nemiraj Naik) ಸೇರಿದಂತೆ ಬೆಂಬಲಿಗರ ವಿರುದ್ಧ ದೂರು(Complaint) ದಾಖಲಾಗಿದೆ. ಪುರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಗಲಾಟೆ ವಾಗ್ವಾದ ನಡೆದಿತ್ತು. ಬೆಂಬಲಿಗರಷ್ಟೇ ಅಲ್ಲದೇ ಸ್ವತಃ ಹಾಲಿ, ಮಾಜಿ ಶಾಸಕರು ಮತಗಟ್ಟೆಗೆ ಬಂದಿದ್ದರು. ಪರಸ್ಪರ ನಿಂದನೆ ಮಾಡಿಕೊಳ್ಳುವ ಮೂಲಕ ಬೆಂಬಲಿಗರ ಜತೆಗೆ ನೇರ ಕಾದಾಟಕ್ಕೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಇಬ್ಬರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ(Violation of Code of Conduct) ಪ್ರಕರಣ ದಾಖಲಿಸಿದ್ದಾರೆ.
undefined
'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'
ನಿಯಮ ಮೀರಿ ಪ್ರವೇಶ:
ರಾಮನಗರ ಮತಗಟ್ಟೆಯಲ್ಲಿ ಹಗರಿಬೊಮ್ಮನಹಳ್ಳಿಯ ಮಾಜಿ-ಹಾಲಿ ಶಾಸಕರು ನಿಯಮ ಮೀರಿ ಪ್ರವೇಶ ಮಾಡಿದ್ದಾರೆ. ಜತೆಗೆ ಅವರ ಪಕ್ಷದ ಕಾರ್ಯಕರ್ತರು ಸಹ ಬೂತ್‌ಗಳಲ್ಲಿ ಹೋಗಿದ್ದು, ಗಲಾಟೆ ಕೂಡ ಆಗಿದೆ. ನಾವು ಹಾಲಿ-ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸ್ ಮಾಡಿದ್ದೇವೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ವೇಳೆ ಪೊಲೀಸರು(Police) ಗುಂಪು ಚದುರಿಸಿದ್ದಾರೆ. 25 ಜನರನ್ನು ಗುರುತಿಸಿ ಎಫ್‌ಐಆರ್(FIR) ಹಾಕಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದರು.
ಶಾಸಕರು ಚಪ್ಪಲಿ ಹಿಡಿದ ವಿಡಿಯೋ ವೈರಲ್
ಹೊಸಪೇಟೆ: ಹಗರಿಬೊಮ್ಮನಹಳ್ಳಿ ಪುರಸಭೆಯ ಚುನಾವಣೆ ಮತದಾನದ(Voting) ವೇಳೆ ನಡೆದ ಗಲಾಟೆಯಲ್ಲಿ ಶಾಸಕ ಭೀಮಾ ನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಮಧ್ಯೆ ನಡೆದ ವಾಗ್ವಾದದ ವೇಳೆ ಶಾಸಕರು ಚಪ್ಪಲಿ ಹಿಡಿದ ವಿಡಿಯೋ ವೈರಲ್ ಆಗಿದೆ.
ಗಲಾಟೆ ವೇಳೆ ಶಾಸಕ ಭೀಮಾ ನಾಯ್ಕ ಚಪ್ಪಲಿ ಹಿಡಿದು ಮಾಜಿ ಶಾಸಕ ನೇಮಿರಾಜ ನಾಯ್ಕಗೆ ಅವಾಚ್ಯವಾಗಿ ಬೈಯುವ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ವಿಡಿಯೋ ಹರಿದಾಡುತ್ತಿದೆ. ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ಅಪಪ್ರಚಾರ: ನೇಮಿರಾಜ್ ನಾಯ್ಕ್
ಬಿಜೆಪಿಯಿಂದ ನನಗೂ ಕರೆ ಬಂದಿತ್ತು : ಸ್ಫೋಟಕ ಹೇಳಿಕೆ ನೀಡಿದ ಕೈ ಶಾಸಕ
ಗಲಾಟೆ ವೇಳೆ ಶಾಸಕ ಭೀಮಾ ನಾಯ್ಕ ಚಪ್ಪಲಿ ಹಿಡಿದು ಮಾಜಿ ಶಾಸಕ ನೇಮಿರಾಜ ನಾಯ್ಕಗೆ ಅವಾಚ್ಯವಾಗಿ ಬೈಯುವ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ(Social Media) ವಿಡಿಯೋ ಹರಿದಾಡುತ್ತಿದೆ. ಶಾಸಕರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ನನಗೂ ಆ ಪಕ್ಷದಿಂದ ಕರೆ ಬಂದಿತ್ತು. ಹಣ, ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನದ ಆಮಿಷವನ್ನೂ ಬಿಜೆಪಿ ಮುಖಂಡರು ಒಡ್ಡಿದ್ದರು ಎಂದು ಶಾಸಕ ಎಸ್. ಭೀಮಾನಾಯ್ಕ್ ಹೇಳಿದ್ದರು.
ಬಿಜೆಪಿ ಮುಖಂಡರು ನನಗಾಗಿ ವಾಹನ ಕೂಡ ಕಳಿಸಿದ್ದರು. ಆದರೆ, ನನ್ನ ಪತ್ನಿ ಗೀತಾಬಾಯಿಯೊಂದಿಗೆ ಚರ್ಚಿಸಿ, ಜೆಡಿಎಸ್‌ನಲ್ಲಿರುವಾಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿರುವುದು ಮತ್ತು ಮರು ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಟಿಕೆಟ್ ನೀಡಿ ಸಹಕರಿಸಿದ್ದರು. ಇದೆಲ್ಲವನ್ನು ಸ್ಮರಿಸಿಕೊಂಡು ಯಾವುದೇ ಆಮಿಷಗಳಿಗೆ ಒಳಗಾಗುವುದು ಬೇಡ ಎಂದು ತೀರ್ಮಾನಿಸಿದೆ. ಸಿದ್ದರಾಮಯ್ಯನವರಿಗಾಗಿಯೇ ಪಕ್ಷದಲ್ಲಿ ಉಳಿದುಕೊಂಡೆ ಎಂದು ಸ್ಪಷ್ಟಪಡಿಸಿದ್ದರು.