Rapid Fire ಪ್ರಶ್ನೆಗೆ ದೀಪ್ಕೆ ಫಟಾಫಟ್​ ಉತ್ತರ: ರಾಹುಲ್​ ಗಾಂಧಿ ಹೆಸರು ಹೇಳ್ತಾರೆಂದು ಕಾಯ್ತಿದ್ದೋರಿಗೆ ಬಿಗ್​ ಶಾಕ್​

Published : Oct 22, 2026, 07:29 PM IST
Abhijeet Dipke

ಸಾರಾಂಶ

ನೀಟ್ ಅಕ್ರಮದ ವಿರುದ್ಧ ಸಿಜೆಪಿ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಭಿಜೀತ್ ದೀಪ್ಕೆ, ರ್ಯಾಪಿಡ್ ಫೈರ್ ಸಂದರ್ಶನದಲ್ಲಿ ಮುಂದಿನ ಯುವ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸದೆ ಮೌನವಹಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ ರಾಹುಲ್ ಗಾಂಧಿ ಅವರನ್ನು ಕೇವಲ 'ಫಿಟ್​ನೆಸ್​'ಗೆ ಹೋಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಕ್ರೋಚ್​ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ನೀಟ್​ ಪರೀಕ್ಷೆಯಲ್ಲಿ ನಡೆದ ಅಕ್ರಮದ ನೆಪ ಇಟ್ಟುಕೊಂಡು ಅಮೆರಿಕದಿಂದ ಭಾರತದ ಶಿಕ್ಷಣ ಕ್ಷೇತ್ರ ಉದ್ಧಾರ ಮಾಡುವುದಾಗಿ ಬಂದ ದೀಪ್ಕೆ, ಈಗ ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದೇ ರೀತಿ ಶಿಕ್ಷಣ ಸುಧಾರಣೆ ಹೆಸರಿನಲ್ಲಿ Gen Zಗಳನ್ನು ಮುಂದು ಮಾಡಿ ಇಡೀ ದೇಶಕ್ಕೆ ಬೆಂಕಿ ಇಟ್ಟಿರುವ ಘಟನೆ ನಡೆಯುತ್ತಿರುವ ನಡುವೆಯೇ, ಭಾರತದಲ್ಲಿಯೂ Gen Z ಹೆಸರಿನಲ್ಲಿ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದೆ.

ಉಲ್ಟಾ ಹೊಡೆದಿರೋ ದೀಪ್ಕೆ

ಇಷ್ಟು ದಿನಗಳವರೆಗೆ ತಾನೇ ನಾಯಕ ಎಂದು ಎಲ್ಲರಿಂದಲೂ ಬಿಂಬಿಸಿಕೊಳ್ಳುತ್ತಿದ್ದ ಅಭಿಜೀತ್​ ದೀಪ್ಕೆ, ದೆಹಲಿಯಲ್ಲಿ ನಡೆದ ದಂಗೆಯ ಪ್ರಕರಣ ಈಗ ದೆಹಲಿ ಕ್ರೈಂಬ್ರ್ಯಾಂಚ್​ ಕೈಗೆ ಹೋಗುತ್ತಲೇ ನಾನೇನಿದ್ದರೂ ನನ್ನ ಸ್ನೇಹಿತರಾದ ಸೌರವ್​ ದಾಸ್ ಮತ್ತು ರಾಂಕಾ ಅವರ ಮಾತು ಕೇಳುವವ. ಅವರೇ ನಿಜವಾದ ನಾಯಕರು. ಎಲ್ಲರೂ ನಾನು ನಾಯಕ ಅಂದುಕೊಂಡಿದ್ದಾರೆ ಎಂದು ಹೇಳಿ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾದವರು. ಏಕೆಂದರೆ, ಇದರ ತನಿಖೆ ನಡೆಸುವ ಉದ್ದೇಶ ಈ ಪ್ರತಿಭಟನೆಯ ಹಿನ್ನೆಲೆ ಏನು, ವಿದೇಶಗಳಿಂದ ಐಷಾರಾಮಿ ವಿಮಾನಗಳಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಬರುವಷ್ಟು ಹಣ ಎಲ್ಲಿಂದ ಬರುತ್ತಿದೆ, ಶಿಕ್ಷಣ ಸುಧಾರಣೆ ಹೆಸರಿನಲ್ಲಿ ನಿಜಕ್ಕೂ ನಡೆಯುತ್ತಿರುವುದುಏನು, ಏನಿದರ ಮರ್ಮ ಎಂಬ ಬಗ್ಗೆ ತನಿಖಾ ಸಂಸ್ಥೆ ಆಳಕ್ಕೆ ಇಳಿದರೆ ಎನ್ನುವ ಭಯ ದೀಪ್ಕೆ ಮುಖದಲ್ಲಿ ಕಾಣಿಸುತ್ತಿದೆ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಒಂದೆಡೆಯಾದರೆ, ಸಿಜೆಪಿಗೆ ಬಲವಾದ ಸಪೋರ್ಟ್​ ಮಾಡ್ತಿರೋದು ಕಾಂಗ್ರೆಸ್​​,

ಇದೀಗ ದೀಪ್ಕೆಗೆ Rapi Fire ಪ್ರಶ್ನೆ ಕೇಳಲಾಗಿದೆ. factify_with_vishal ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಎಲ್ಲಾ ಪ್ರಶ್ನೆಗಳಿಗೂ ಫಟಾಫಟ್​ ಉತ್ತರ ಕೊಟ್ಟಿರೋ ದೀಪ್ಕೆ ಒಂದು ಪ್ರಶ್ನೆಯ ಉತ್ತರ ಮಾಡಿ ತೋರಿಸಿಲ್ಲ. ಇದ್ಯಾಕೆ, ಅವರು ಹೇಳಿದ್ದೇನು ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ! ಅಷ್ಟಕ್ಕೂ ಕಾಂಗ್ರೆಸ್ಸಿನವರು ರಾಹುಲ್​ ಗಾಂಧಿಯೇ ನಮ್ಮ ಮುಂದಿನ ಯುವ ನಾಯಕ ಎಂದು ಹೇಳುತ್ತಿದ್ದರೆ, ದೀಪ್ಕೆ ಮಾತ್ರ ಏನು ಹೇಳಿದ್ರು ಎನ್ನೋ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಅಷ್ಟಕ್ಕೂ ಅವರಿಗೆ ಕೇಳಿದ ಪ್ರಶ್ನೆ ಏನು, ಅವರು ಕೊಟ್ಟ ಉತ್ತರ ಏನು ಎನ್ನೋದು ಇಲ್ಲಿದೆ ನೋಡಿ!

ತುಂಬಾ ಇಷ್ಟಪಡುವ ರಾಜಕಾರಣಿ- ನೆಹರು

ನಿಮಗೆ ನಂಬಿಕೆ ಇಲ್ಲದ ರಾಜಕಾರಣಿ- ನರೇಂದ್ರ ಮೋದಿ

ಜೊತೆಯಲ್ಲಿಯೇ ಪ್ರತಿಭಟನೆ ಮಾಡಲು ಇಷ್ಟಪಡುವ ವ್ಯಕ್ತಿ- ಪ್ರಕಾಶ್​ ರಾಜ್​

ಸಿಜೆಪಿ ಪ್ರತಿಭಟನೆಗೆ ಕರೆಯದೇ ಇರುವ ವ್ಯಕ್ತಿ- ಅಮಿತ್​ ಷಾ

ಹೆಚ್ಚು ಕೇಳಿಸಿಕೊಳ್ಳಬೇಕಾದ ವ್ಯಕ್ತಿ- ಮೋದಿ

ಮುಂದಿನ ಯುವ ನಾಯಕ ಯಾರಾಗಬೇಕು ಎನ್ನುವ ಪ್ರಶ್ನೆ ಕೇಳಿದಾಗ ಬಹುತೇಕ ಮಂದಿ ದೀಪ್ಕೆ, ರಾಹುಲ್​ ಗಾಂಧಿಯ ಹೆಸರು ಹೇಳುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಅದಕ್ಕೆ ಅವರು ಮೌನವಾಗಿದ್ದಾರೆ. ಆ ಪ್ರಶ್ನೆಗೆ ಅವರು ಏನು ಉತ್ತರ ಕೊಟ್ಟರೆಂದು ತೋರಿಸಲಿಲ್ಲ! ಇದರ ಹಿಂದಿರುವ ಉದ್ದೇಶ ಏನು ಎನ್ನುವುದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಹಲವರು. ಅವರು ಬೇರೆ ಯಾರದ್ದೋ ಹೆಸರು ಹೇಳಿರಬೇಕು, ಆ ಬಳಿಕ ಆ ಭಾಗವನ್ನು ಮಾತ್ರ ಡಿಲೀಟ್​ ಮಾಡಿಸಲಾಗಿದೆ ಎಂದೇ ಕಮೆಂಟ್ಸ್​ನಲ್ಲಿ ಹೇಳಲಾಗುತ್ತಿದೆ!

ಈ ಹೆಸರು ಕೇಳಿದ ತಕ್ಷಣ ನಿಮ್ಮ ಮನಸ್ಸಿಗೆ ಬರುವ ಶಬ್ದ ಎನ್ನುವ ಪ್ರಶ್ನೆಗೆ ಅಭಿಜೀತ್​ ದೀಪ್ಕೆ ಹೀಗೆಂದರು:

ನರೇಂದ್ರ ಮೋದಿ- ಹೆಚ್ಚು ಮಾತನಾಡ್ತಾರೆ

ರಾಹುಲ್ ಗಾಂಧಿ- ಫಿಟ್​ನೆಸ್​ ಎಂದಷ್ಟೇ ಹೇಳಿದರೇ ವಿನಾ ರಾಜಕಾರಣದಲ್ಲಿ ಇವರ ಪಾತ್ರ ಎಂದೋ, ಮುಂದಿನ ಪ್ರಧಾನಿ ಎಂದೋ ಅಥವಾ ಇನ್ನೇನೋ ಹೇಳದೇ ಇರುವುದು ಕೂಡ ಎಲ್ಲರಿಗೂ ಕುತೂಹಲ ಮೂಡಿಸಿದೆ!

ನೇಹಾ ಬೋರಾ- ಭಯಪಡದ ವ್ಯಕ್ತಿ

ಗ್ಯಾನೇಶ್​ ಕುಮಾರ್​- ರಾಜೀನಾಮೆ ನೀಡಿ

ಭಗತ್​ ಸಿಂಗ್​- ಲೆಜೆಂಡ್​

ಧ್ರುವ್ ರಾಠಿ- ನನಗೆ ಇವರ ಬಗ್ಗೆ ಹೇಳಲು ಸರಿಯಾದ ಪದ ಇಲ್ಲ ಎನ್ನುತ್ತಲೇ ಇವರು ಗೇಮ್​ ಚೇಂಜರ್​ ಎಂದರು.

ಸೋನಂ ವಾಂಗ್ಚು- ರಾಷ್ಟ್ರವನ್ನು ಎಚ್ಚರಿಸಲು ಜೀವವನ್ನು ಪಣಕ್ಕಿಟ್ಟವರು

ಬಿ.ಆರ್​.ಅಂಬೇಡ್ಕರ್​- ಈ ನೆಲದಲ್ಲಿ ಹುಟ್ಟಿದ ಮಹಾನ್​ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆಶಿ ವಿರುದ್ಧ ಪತ್ರ ಸಮರ ಸಾರಿದ ಹೆಚ್‌ಡಿಕೆ, ಮಂಡ್ಯದಲ್ಲಿ ಬೃಹತ್ ಯೋಜನೆಗೆ ಹಿಂದೇಟು, ಜಾಗ ಕೊಡ್ತಿಲ್ಲ ಎಂದು ಆಕ್ರೋಶ
ಮೈಸೂರು ದಸರಾ ವಿವಾದಕ್ಕೆ ಬಿಗ್ ಟ್ವಿಸ್ಟ್‌! ಸಚಿವರನ್ನು ತಡೆದ ಎಸ್‌ಪಿ ರಿಷ್ಯಂತ್ ವಿರುದ್ಧ ತನಿಖೆಗೆ ಆದೇಶಿಸಿದ್ರಾ ಸಿಎಂ?