ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು: ನಿತೀಶ್‌ಗೆ ಮಾರಕವಾಗಿದ್ದೇನು ಗೊತ್ತಾ?

Published : Nov 11, 2020, 12:27 PM IST
ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು: ನಿತೀಶ್‌ಗೆ ಮಾರಕವಾಗಿದ್ದೇನು ಗೊತ್ತಾ?

ಸಾರಾಂಶ

ನಿತೀಶ್‌ಗೆ ಭಾರಿ ಹೊಡೆತ ಕೊಟ್ಟ ಚಿರಾಗ್‌| ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು| ಜೆಡಿಯುಗೆ ಏಟು ನೀಡುವಲ್ಲಿ ಎಲ್‌ಜೆಪಿ ಯಶಸ್ವಿ

ಪಟನಾ(ನ.11): ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಮುನಿಸಿಕೊಂಡು ಎನ್‌ಡಿಎದಿಂದ ಹೊರನಡೆದಿದ್ದ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ ಅವರ ಜೆಡಿಯು ಪಕ್ಷಕ್ಕೆ ಭಾರಿ ಹೊಡೆತವನ್ನೇ ನೀಡಿದ್ದಾರೆ.

‘ಮೋದಿ ಬಗ್ಗೆ ನಮಗೆ ತಕರಾರಿಲ್ಲ, ಆದರೆ ನಿತೀಶ್‌ರನ್ನು ಬಿಡೋದಿಲ್ಲ’ ಎಂದು ಘೋಷಿಸಿ ಚುನಾವಣೆಗೆ ಕೆಲವೇ ದಿನಗಳಿದ್ದಾಗ 37 ವರ್ಷದ ಸಂಸದ ಚಿರಾಗ್‌ ಬಿಹಾರದಲ್ಲಿ ಎನ್‌ಡಿಎ ತೊರೆದು ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ನಂತರ ಯುವ ಮತದಾರರನ್ನು ಸೆಳೆಯಲು ‘ಬಿಹಾರ ಮೊದಲು ಬಿಹಾರಿ ಮೊದಲು’ ಎಂಬ ಘೋಷಣೆ ಮೊಳಗಿಸಿ, ಬಿಜೆಪಿ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಯು ವಿರುದ್ಧ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅವರಲ್ಲಿ ಈಗ ಜೆಡಿಯು ಅಭ್ಯರ್ಥಿಗಳ ಮತ ಒಡೆದು ಅವರ ಸೋಲಿಗೆ ಕಾರಣರಾಗುವಲ್ಲಿ ಅನೇಕರು ಯಶಸ್ವಿಯಾಗಿದ್ದಾರೆ. ಹೀಗಾಗಿ ಸೀಟು ಗಳಿಕೆಯಲ್ಲಿ ಜೆಡಿಯು 3ನೇ ಸ್ಥಾನಕ್ಕೆ ಕುಸಿದಿದ್ದು, ಚಿರಾಗ್‌ ಜೊತೆಗಿನ ವೈರ ನಿತೀಶ್‌ಗೆ ದುಬಾರಿಯಾಗಿ ಪರಿಣಮಿಸಿದೆ.

ಕೇಂದ್ರ ಸಚಿವರೂ ಆಗಿದ್ದ ಎಲ್‌ಜೆಪಿ ನಾಯಕ, ಚಿರಾಗ್‌ರ ತಂದೆ ರಾಮವಿಲಾಸ್‌ ಪಾಸ್ವಾನ್‌ ಚುನಾವಣೆಯ ಪ್ರಚಾರದ ಸಮಯದಲ್ಲೇ ಮೃತಪಟ್ಟಿದ್ದರು. ಆದರೂ ಎದೆಗುಂದದ ಚಿರಾಗ್‌, ಮುಖ್ಯಮಂತ್ರಿಯ ವಿರುದ್ಧವೇ ತೊಡೆತಟ್ಟಿತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆಂದು ರಾಜಕೀಯ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಂದೆ ರಾಮ್‌ವಿಲಾಸ್‌ ಪಾಸ್ವಾನ್‌ರ ಮತಗಳು ಹೆಚ್ಚಾಗಿ ಇದ್ದುದು ಗ್ರಾಮೀಣ ಭಾಗದಲ್ಲಾಗಿದ್ದರೂ ಚಿರಾಗ್‌ ರಾಜ್ಯಾದ್ಯಂತಹ ಯುವ ಮತದಾರರನ್ನು ಸೆಳೆಯುವ ಯತ್ನ ನಡೆಸಿದ್ದರು. 2013ರಲ್ಲೇ ಪಕ್ಷದ ನಾಯಕತ್ವವನ್ನು ರಾಮ್‌ವಿಲಾಸ್‌ ಪಾಸ್ವಾನ್‌ ಚಿರಾಗ್‌ಗೆ ನೀಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಇವರೇ ಪಕ್ಷವನ್ನು ಮುನ್ನಡೆಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್