ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಬಂಧುಗಳಿಗೆ ಪತ್ರ ಬರೆದ ಚಿಕ್ಕಮಗಳೂರು ವಿಚಾರಣಾಧೀನ ಖೈದಿಗಳು!

By Govindaraj S  |  First Published Apr 30, 2023, 10:42 PM IST

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಖೈದಿಗಳು ಇಂದು ತಮ್ಮ ಬಂಧುಗಳಿಗೆ ಪತ್ರ ಬರೆಯುವ ಮೂಲಕ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಕೋರಿಕೊಂಡರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.30): ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಖೈದಿಗಳು ಇಂದು ತಮ್ಮ ಬಂಧುಗಳಿಗೆ ಪತ್ರ ಬರೆಯುವ ಮೂಲಕ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಕೋರಿಕೊಂಡರು. ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲಾ ಖೈದಿಗಳು ಅಂಚೆ ಪತ್ರದಲ್ಲಿ ಮತದಾನದ ಮಹತ್ವದ ಬಗ್ಗೆ ಬರೆದು ಬಂಧುಗಳು, ಸಂಬಂಧಿಕರು, ಸ್ನೇಹಿತರ ವಿಳಾಸಕ್ಕೆ ಕಳಿಸಿಕೊಟ್ಟರು.

Tap to resize

Latest Videos

undefined

ಪ್ರತಿ ಮತವೂ ಬಹಳ ಪ್ರಾಮುಖ್ಯತೆ: ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಚುನಾವಣೆ ನಡೆಯುವುದಷ್ಟೇ ಮುಖ್ಯವಲ್ಲ, ಮತದಾನದಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ. ಪ್ರತಿ ಮತವೂ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಈ ಕಾರಣಕ್ಕೆ ಪ್ರತಿಯೊಬ್ಬ ನಾಗರೀಕರೂ ನಿರ್ಭೀತಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು.ಮತ ಎನ್ನುವುದು ನಮ್ಮ ಹಕ್ಕಷ್ಟೇ ಅಲ್ಲ, ಅದು ನಮ್ಮ ಜವಾಬ್ದಾರಿ ಸಹ ಆಗಿರುತ್ತದೆ. ಅದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಮತ ಹಾಕಬೇಕಿದೆ. 

ಇದು ನನಗೆ ಕೊನೆ ಚುನಾವಣೆ ಇನ್ನೊಂದು ಅವಕಾಶ ಕೊಡಿ: ಎನ್‌.ಮಹೇಶ್‌

ಎಷ್ಟೋ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಇದ್ದರೂ ಸಹ ನಮ್ಮಷ್ಟು ಸದೃಢವಾದ ಮತ್ತು ಪ್ರಬುದ್ಧತೆ ಬಂದಿಲ್ಲ. ನಮ್ಮದೇಶ ಅದಕ್ಕೆಲ್ಲಾ ಮಾದರಿ ಆಗಿದೆ. ಇದಕ್ಕೆಲ್ಲಾ ಮತದಾನದ ಮೂಲಕ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳವುದೇ ಆಗಿರುವುದರಿಂದ ಮೇ.10ರಂದು ಪ್ರತಿಯೊಬ್ಬರೂ ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು. ಈ ಕಾರಣಕ್ಕಾಗಿ ಖೈದಿಗಳಿಂದ ಪತ್ರ ಬರೆಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಯಿತು ಎಂದರು.

ಕನಿಷ್ಟ ಶೇ.85 ರಷ್ಟು ಮತದಾನದ ಗುರಿ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ, ಜಿ.ಪಂ. ಸಿಇಓ ಡಾ.ಜಿ.ಪ್ರಭು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಸರ್ವ ನಾಗರೀಕರ ಮತಕ್ಕಿರುವ ಮೌಲ್ಯ ಒಂದೇ ಆಗಿರುತ್ತದೆ. ಪ್ರಧಾನ ಮಂತ್ರಿ ಮತಕ್ಕೆ ಮೌಲ್ಯ ಹೆಚ್ಚು ಎನ್ನುವ ಬೇಧ ಭಾವವನ್ನು ನಮ್ಮಲ್ಲಿ ಮಾಡಿಲ್ಲ ಎಂದು ಹೇಳಿದರು. ಈ ಬಾರಿ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸುವಂತಾಗಬೇಕು ಎನ್ನುವ ಕಾರಣಕ್ಕೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಕನಿಷ್ಟ ಶೇ.85 ರಷ್ಟು ಮತದಾನ ಆಗಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಇದರ ಭಾಗವಾಗಿ ಕಾರಾಗೃಹದ ಸುಮಾರು 250 ಖೈದಿಗಳಿಂದ ಸಂಬಂಧಿಗಳಿಗೆ ಪತ್ರ ಬರೆಸುತ್ತಿದ್ದೇವೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಯಾವುದೋ ಕಾರಣಕ್ಕೆ ಇಲ್ಲಿ ಬಂಧಿಗಳಾಗಿರುವವರು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಅವರ ನಡೆ, ನುಡಿ, ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಸಾಧ್ಯವಿರುತ್ತದೆ ಎಂದರು. ತಮ್ಮ ಪತ್ರವನ್ನಾಧರಿಸಿ ತಮ್ಮೆಲ್ಲಾ ಬಂಧುಗಳು, ಸಂಬಂಧಿಕರು ಚುನಾವಣಾ ಹಬ್ಬದಲ್ಲಿ ಭಾಗವಹಿಸಿದರೆ ಈ ಸಣ್ಣ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. 

ವರುಣದಲ್ಲಿ ಅಭಿವೃದ್ಧಿ ಇಬ್ಬರೂ ನೋಡೋಣ ಬನ್ನಿ: ಸಿದ್ದುಗೆ ಸೋಮಣ್ಣ ಸವಾಲ್‌

ಒಟ್ಟಾರೆ ದೇಶ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಮೇಟಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಇಲಾಕೆ ಜಿಲ್ಲಾ ಅಧಿಕಾರಿ ಚೈತ್ರ, ಕಡೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ, ನಗರಸಭೆ ಆಯುಕ್ತ ಉಮೇಶ್ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!