ಮೆಡಿಕಲ್ ಕಾಲೇಜನ್ನು ರಾಜಕೀಯ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ. ಸುಧಾಕರ್, ಡಿಕೆಶಿಯನ್ನು ಮಣಿಸಲು ಮೊದಲ ಭಾಗವಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯಲ್ಲಿ ಏನೆಲ್ಲ ಆಯ್ತು ಎನ್ನುವ ಡಿಟೇಲ್ಸ್ ಈ ಕೆಳಗಿನಂತಿದೆ.
ಬೆಂಗಳೂರು, [ಅ.29]: ಮೆಡಿಕಲ್ ಕಾಲೇಜು ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ. ಸುಧಾಕರ್ ನಡುವೆ ರಾಜಕೀಯ ಪ್ರತಿಷ್ಠೆಗೆ ಸಾಕ್ಷಿಯಾಗಿದೆ. ಮೆಡಿಕಲ್ ಕಾಲೇಜ್ ನಮ್ಮ ಕ್ಷೇತ್ರಕ್ಕೆ ಬೇಕೇ ಬೇಕು ಎಂದು ಇಬ್ಬರು ನಾಯಕರು ತೊಡೆತಟ್ಟಿದ್ದಾರೆ.
ಕನಕಪುರದಲ್ಲಿಯೇ ಮೆಡಿಕಲ್ ಕಾಲೇಜ್ ನಿರ್ಮಾಣವಾಗಲೇಬೇಕು. ಇಲ್ಲದಿದ್ದಲ್ಲಿ ಡಿಕೆಶಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇತ್ತ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಸಹ ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರದಲ್ಲಿಯೇ ಆಗ್ಬೇಕು. ಇಲ್ಲವಾದಲ್ಲಿ ರಾಜಕೀಯ ನಿವೃತ್ತಿ ಎಂದು ಡಿಕೆಶಿ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
undefined
ಇದರ ಮುಂದುವರಿದ ಭಾಗವಾಗಿ ಡಾ.ಕೆ. ಸುಧಾಕರ್ ಇಂದು[ಮಂಗಳವಾರ] ದಿಢೀರ್ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಸುಧಾಕರ್, ನೀವು ಹೇಳಿದಂತೆ ಚಿಕ್ಕಬಳ್ಳಾಪುರದಲ್ಲಿಯೇ ಮೆಡಿಕಲ್ ಕಾಲೇಜು ಮುಂದುವರಿಸುವಂತೆ ಮನವಿ ಪತ್ರ ನೀಡುವ ಮೂಲಕ ಸಿಎಂ ಮೇಲೆ ಒತ್ತಡ ಹೇರಿದರು.
ಮೆಡಿಕಲ್ ಕಾಲೇಜು ಕಿಚ್ಚು: ಡಿಕೆಶಿ-ಸುಧಾಕರ್ ಮಧ್ಯೆ ಕಿಡಿ ಇಟ್ಟ ಯಡಿಯೂರಪ್ಪ..!
ಸುಧಾಕರ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ, ಚಿಕ್ಕಬಳ್ಳಾಪುರದಲ್ಲಿಯೇ ಮೆಡಿಕಲ್ ಕಾಲೇಜು ಮುಂದುವರಿಸಲಾಗುವುದು ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಆರಂಭಿಕವಾಗಿ ಸುಧಾಕರ್ ಅವರಿಗೆ ಗೆಲುವು ಸಿಕ್ಕಂತಾಗಿದೆ.
ಏನಿದು ಮೆಡಿಕಲ್ ಕಾಲೇಜು ವಿವಾದ..?
ಈ ಮೊದಲು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ನೀಡಲಾಗಿತ್ತು. ಆದ್ರೆ ಬದಲಾದ ರಾಜಕೀಯ ಚಿತ್ರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕನಕಪುರಕ್ಕೆ ನೀಡಲಾಗಿದ್ದ ಮೆಡಿಕಲ್ ಕಾಲೇಜನ್ನ ಯಡಿಯೂರಪ್ಪ ಅವರು ಸುಧಾಕರ್ ಅವರ ಕ್ಷೇತ್ರವಾಗಿರುವ ಚಿಕ್ಕಬಳ್ಳಾಪುರಕ್ಕೆ ಟ್ರಾನ್ಸ್ ಫರ್ ಮಾಡಿದ್ದರು. ಇದೀಗ ಇದಕ್ಕೆ ಕೆಂಡಾಮಂಡಲಾಗಿರುವ ಡಿಕೆಶಿ, ಕನಕಪುರದಲ್ಲಿಯೇ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ನನ್ನ ಪ್ರಾಣ ಬೇಕಿದ್ದರೆ ಹೋಗಲಿ. ಆದ್ರೆ, ಮೆಡಿಕಲ್ ಕಾಲೇಜು ಬಿಟ್ಟುಕೊಡುವುದಿಲ್ಲ ಎಂದು ಡಿಕೆಶಿ ಗುಡುಗಿದ್ದಾರೆ.
ಡಿಕೆಶಿಗೆ ಸುಧಾಕರ್ ಡಿಚ್ಚಿ
ಡಿಕೆಶಿ ಹೇಳಿಕೆಗೆ ಇಂದು [ಮಂಗಳವಾರ] ಪ್ರತಿಕ್ರಿಯಿಸಿರುವ ಸುಧಾಕರ್, ಪ್ರಾಣ ಕೊಡುವುದುಬೇಡ. ಮೆಡಿಕಲ್ ಕಾಲೇಜು ಇರುವುದು ಪ್ರಾಣ ಉಳಿಸುವುದಕ್ಕೆ. ಚಿಕ್ಕಬಳ್ಳಾಪುರದಲ್ಲಿಯೇ ಮೆಡಿಕಲ್ ಕಾಲೇಜು ಮಾಡಿಯೇ ತೀರುತ್ತೇನೆಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಇಲ್ಲವಾದಲ್ಲಿ ರಾಜಕೀಯ ನಿವೃತ್ತೊ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮೆಡಿಕಲ್ ಕಾಲೇಜು ಉಳಿಸಿಕೊಂಡು ಡಿಕೆಶಿಗೆ ಡಿಚ್ಚಿ ಕೊಡಲು ಸುಧಾಕರ್ ದಿಢೀರ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರದಲ್ಲಿಯೇ ಮೆಡಿಕಲ್ ಕಾಲೇಜು ಆಗಬೇಕೆಂದು ಮನವಿ ಪತ್ರ ಸಲ್ಲಿಸಿಬಂದಿದ್ದಾರೆ.