ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ: ಬಗರ್‌ಹುಕುಂ ಸಭೆ ಬಳಿಕ ಪ್ರದೀಪ್ ಈಶ್ವರ್ ಸ್ಪಷ್ಟನೆ

Published : Dec 24, 2025, 09:49 AM IST
Pradeep Eshwar

ಸಾರಾಂಶ

ಫಾರಂ 57ಲ್ಲಿ 13970 ಅರ್ಜಿಗಳು ಬಾಕಿ ಇವೆ. ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಅರ್ಹರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ಚಿಕ್ಕಬಳ್ಳಾಪುರ (ಡಿ.24): ಬಗರ್‌ಹುಕುಂ ಅಕ್ರಮ ಸಕ್ರಮಕ್ಕೆ ಸಲ್ಲಿಸಿರುವ ಫಾರ್ಮ್ 53- 2792 ಫಾರಂಗಳು, ಫಾರಂ 57ಲ್ಲಿ 13970 ಅರ್ಜಿಗಳು ಬಾಕಿ ಇವೆ. ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಅರ್ಹರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಗರದ ತಾಲೂಕು ಕಚೇರಿಯ ತಹಸಿಲ್ದಾರ್ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಪ್ರಥಮ ಬಗರ್ ಹುಕುಂ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು15 ವರ್ಷಗಳಿಂದ ಬಗರ್ ಹುಕುಂ ಸಮಿತಿಗೆ ಸರಿಯಾದ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಹೊಸದಾಗಿ ಬಗರ್ ಹುಕುಂ ಸಮಿತಿ ಮಾಡಿ ಅಧ್ಯಕ್ಷನಾಗಿ ನೇಮಕ ಆಗಿರುವುದರಿಂದ ಸೇಮವಾರ ಪ್ರಥಮ ಸಭೆಯನ್ನು ನಡೆಸಿದ್ದಾಗಿ ತಿಳಿಸಿದರು.

ಹೋಬಳಿ ಮಟ್ಟದ ಅರ್ಜಿಗಳು: ಇದರಲ್ಲಿ ಕಸಬಾ ಹೋಬಳಿಯಲ್ಲಿ 634 ಅರ್ಜಿಗಳು ಫಾರಂ 53ರಲ್ಲಿ ಬಂದಿದೆ. ನಂದಿಹೋಬಳಿಯಲ್ಲಿ 1048 ಬಂದಿದೆ. ಮಂಡಿಕಲ್ಲುಹೋಬಳಿಯಲ್ಲಿ 548 ಬಂದಿದ್ದು, ಫಾರಂ 57 ನಲ್ಲಿ ಕಸಬಾ ಹೋಬಳಿಯಲ್ಲಿ 2909 ನಂದಿ ಹೋಬಳಿಯಲ್ಲಿ 3786 .ಮಂಡಿಕಲ್ಲು ಹೋಬಳಿಯಲ್ಲಿ 4819 ಮಂಚೆನಹಳ್ಳಿ ಫಾರಂ 53ರಲ್ಲಿ 512 ಮತ್ತು ಫಾರಂ 57. 2656 ಅರ್ಜಿ ಗಳು ಬಂದಿವೆ. ಫಾರಂ 53 ಮತ್ತು ಫಾರಂ 57 ಅರ್ಜಿಗಳನ್ನು ವಿಲೇವಾರಿ ಮಾಡಿ ರೈತರಿಗೆ ಕೊಡಬೇಕು ಜಮೀನು ಕೊಡಬೇಕಾಗಿದೆ . ನಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆ. ದಲ್ಲಾಳಿ ಮಧ್ಯ ವರ್ತಿಗಳಿಗೆ ಯಾರು ಕೂಡ ನಂಬ ಬೇಡಿ ರೈತರಿಗೆ ಮನವಿ ಮಾಡಿದರು.

ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಪ್ರದೀಪ್ ಈಶ್ವರ್, ನಾನು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ , ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ, ಪಕ್ಷ ಏನು ಹೇಳುತ್ತೊ ಅದು ಮಾಡುತ್ತೇನೆ. ಮುಂದಿನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ಇದೆ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ ಎಂದರು.

ಒಂದು ವೇಳೆ ಸಚಿವ ಸ್ಥಾನ ನೀಡದೆ ನಮ್ಮ ಸ್ನೇಹಿತರಿಗೆ ಕೊಟ್ಟರೂ ನಾನು ಅವರ ಪ್ರಮಾಣ ವಚನಕ್ಕೆ ಹೋಗುತ್ತೇನೆ. ಡಾ.ಎಂ.ಸಿ.ಸುಧಾಕರ್, ಎಸ್.ಎನ್.ಸುಬ್ಬಾರೆಡ್ಡಿ ಇವರುಗೆ ಯಾರಿಗೆ ಸಚಿವ ಸ್ಥಾನ ಸಿಕ್ಕಿದರೂ ಜೊತೆಯಾಗಿ ಕೆಲಸ ಮಾಡುತ್ತೇವೆ. ಡಾ.ಎಂ.ಸಿ.ಸುಧಾಕರ್ ಅವರನ್ನೇ ಮುಂದುವರಿಸಿದರೆ, ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು ಈ ವೇಳೆ ತಹಸೀಲ್ದಾರ್ ರಶ್ಮಿ, ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ, ದರಕಾಸ್ತು ಸಮಿತಿ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂಧಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾರನ್ನು ಮೆಚ್ಚಿಸಲು ಈ ಕರಾಳ ಶಾಸನ ಅನುಷ್ಠಾನ?: ಶಾಸಕ ಅಶ್ವತ್ ನಾರಾಯಣ್ ಲೇಖನ
ಪ್ರಿಯಾಂಕಾ ಗಾಂಧಿ ಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ: ಪತಿ ರಾಬರ್ಟ್‌ ಸ್ಫೋಟಕ ನುಡಿ