ಸಿಎಂ ಸಿದ್ದರಾಮಯ್ಯ ದಲಿತರ ಚರ್ಮದಿಂದ ಚಪ್ಪಲಿ ಮಾಡ್ಕೊಂಡು ಮೆರೆಯುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ

By Govindaraj SFirst Published Jul 31, 2024, 7:56 PM IST
Highlights

ಸರ್ಕಾರ ಹಗರಣದಲ್ಲಿ ಸಿಲುಕಿ ನರಳಾಡುತ್ತಿದ್ದು, ಮೂಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಸ್ಥರು ಪಾಲುದಾರರಾಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜು.31): ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ದಿನಕ್ಕೊಂದು ಹಗರಣ ಹೊರಗಡೆ ಬರುತ್ತಿವೆ. ಇದರಿಂದ ಸರ್ಕಾರಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಸರ್ಕಾರ ಹಗರಣದಲ್ಲಿ ಸಿಲುಕಿ ನರಳಾಡುತ್ತಿದ್ದು, ಮೂಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬಸ್ಥರು ಪಾಲುದಾರರಾಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

Latest Videos

ದಲಿತರ ಚರ್ಮದಿಂದ ಚಪ್ಪಲಿ ಮಾಡ್ಕೊಂಡು ಸಿಎಂ ಮೆರೆಯುತ್ತಿದ್ದಾರೆ: ಯಾದಗಿರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ದಲಿತರ ಹಣವನ್ನು ಸರ್ಕಾರ ಲೂಟಿ ಮಾಡ್ತಿದೆ. ಮೂಡಾ ಹಗಣರದಲ್ಲಿನ ನಿವೇಶನದ ಜಮೀನು ದಲಿತರ ಹೆಸರಿನಲ್ಲಿವೆ. ಮೂಡಾ ನಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಇದರಲ್ಲಿ ಪಾಲುದಾರರಾಗಿದ್ದಾರೆ. ಇದೊಂದು ಸಾವಿರಾರು ಕೋಟಿ ರೂ. ಹಗರವಾಗಿದೆ. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ವರ್ಗಗಳ 187 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ. 

ರಸ್ತೆ ಪಕ್ಕ ಹೊರಟಿದ್ದವನಿಗೆ ತಿವಿದ ಬಿಡಾಡಿ‌ ದನ, ವೃದ್ಧ ಸ್ಥಳದಲ್ಲೇ ಸಾವು: ಗದಗ ಬೆಟಗೇರಿ ನಗರಸಭೆ ವಿರುದ್ಧ ಜನರ ಆಕ್ರೋಶ!

ಚಂದ್ರಶೇಖರ್ ಎಂಬ ಅಧೀಕ್ಷಕರು ಆತಂಕದಿಂದ ಪ್ರಾಣತ್ಯಾಗ ಮಾಡಿದ್ದಾರೆ. ಇದೆಲ್ಲದಕ್ಕೂ ಮುಖ್ಯಮಂತ್ರಿಯವರ ಬಳಿ ಉತ್ತರವಿಲ್ಲ ಎಂದು ಟೀಕಿಸಿದರು. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದು, ಅವರನ್ನು ಬಂಧಿಸಲಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಹುಡುಕುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಸಹಿಸಿಕೊಂಡು ಕುಳಿತಿರಲು ಅಸಾಧ್ಯ. ಜೊತೆಗೆ SCP-TSP ಹಣವನ್ನು ಗ್ಯಾರೆಂಟಿಗೆ ಬಳಸಲಾಗಿದೆ‌. ಹಾಗಾಗಿ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಸರ್ಕಾರವಾಗಿದೆ. ಇದೆಲ್ಲವನ್ನು ಸಹಿಸಿಕೊಂಡು ಕುಳಿತಿರಲಿ ಅಸಾಧ್ಯ. ಅದಕ್ಕಾಗಿ ಬಿಜೆಪಿ ಹೋರಾಟಕ್ಕೆ ಮುಂದಾಗಿದೆ ಎಂದರು.

ಸರ್ಕಾರ ದಲಿತರಿಗೆ ಅಂಗೈನಲ್ಲಿ ಆಕಾಶ ತೋರಿಸುತ್ತಿದೆ: ದಲಿತರಿಗೆ ಅಂಗೈಯಲ್ಲೇ ಆಕಾಶ ತೋರಿಸಿದ್ದು ಕಾಂಗ್ರೆಸ್ ಪಕ್ಷ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದಲಿತರನ್ನು ದಾರಿ ತಪ್ಪಿಸಿ ಮತ ಸೆಳೆದಿದ್ದರು. ಅಲ್ಲದೆ, 136 ಸೀಟು ಗೆದ್ದಿದ್ದಾಗಿ ಬೀಗಿದ್ದರು. ಈಗ ದಲಿತರ ಹಣ ಲೂಟಿ ಹೊಡೆದು ದ್ರೋಹ ಬಗೆದಿದೆ. ನೀವು ಮಾಡಿದ ಹಗರಣಗಳು ನಿಮ್ಮನ್ನು ಸುಮ್ಮನೆ ಬಿಡುತ್ತವೆಯೇ? ಇ.ಡಿ. ಕಾನೂನಾತ್ಮಕವಾಗಿ ಬಂದಿದೆ. ಉದ್ಧಟತನದ ಮಾತಿಗೆ ನಾವು ಜಗ್ಗುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆಂದು ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.

ಬೀದರ್‌ನಲ್ಲಿ ಅದ್ದೂರಿಯಾಗಿ ನಡೆದ ಖಾಶೆಂಪೂರ್ ಗ್ರಾಮ ದೇವತೆ ಜಾತ್ರಾ ಮಹೋತ್ಸವ!

ಸಿಎಂ ಕುರ್ಚಿಗೆ ಆಯಸ್ಸು ಕಡಿಮೆ: ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವರ್ಗದವರ ಸಿಎಂ.‌ಕೇವಲ ಅಹಿಮನದ ವರ್ಗಕ್ಕೆ ಮಾತ್ರ ಸಿಮಿತವಲ್ಲ. ಸರ್ವ ಜಾತಿಗೂ ಸಿಎಂ ಆಗಿದ್ದಾರೆ. ಬಿಜೆಪಿ ಯಾರನ್ನು ಟಾರ್ಗೆಟ್ ಮಾಡ್ತಿಲ್ಲ. ಸಿದ್ದರಾಮಯ್ಯ ಅವರ ಮೊಂಡುತನದ ಮಾತಿಗೆ ಉತ್ತರ ಕೊಡುವುದಿಲ್ಲ. ಅಹಿಂದ ಸಿಎಂ ಅಪಪ್ರಚಾತ ಮಾಡ್ತಿದ್ದಾರೆಂದು ಸಿದ್ದರಾಮಯ್ಯ ಹೇಳ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಸಿಎಂ ಕುರ್ಚಿಗೆ ಆಯಸ್ಸು ಕಡಿಮೆ ಇದೆ. ಈ ಸರ್ಕಾರ ಬಹಳ ದಿನ ಇರಲ್ಲ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕಾನೂನಾತ್ಮಕವಾಗಿ ಇಳಿಯುವ ಕಾಮ ಬಂದ್ರೆ ಅಧಿಕಾರದಿಂದ ಇಳಿಯಬೇಕಾಗುತ್ತದೆ‌. ಇದಕ್ಕಾಗಿ ಬಿಜೆಪಿ ಹೋರಾಟ ನಡೆಸಲಾಗ್ತಿದೆ. ನೀವು ಸಿಕ್ಕಿಬಿದ್ರೆ ಅಧಿಕಾರ ಕಳೆದುಕೊಳ್ತಿರಿ ಎಂದು ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

click me!