ಬಿಜೆಪಿ ಪರ ಸುಳ್ಳು ಭಾಷಣ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಮಹಿಳೆ ಬಗ್ಗೆ ಅಗೌರವವಾಗಿ ಕಮೆಂಟ್ ಮಾಡಿರುವುದು ಸರಿಯಲ್ಲ. ಕೂಡಲೇ ಅವರು ಮಹಿಳೆ ಬಳಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಶಿವಮೊಗ್ಗ (ಸೆ.2) : ಬಿಜೆಪಿ ಪರ ಸುಳ್ಳು ಭಾಷಣ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಮಹಿಳೆ ಬಗ್ಗೆ ಅಗೌರವವಾಗಿ ಕಮೆಂಟ್ ಮಾಡಿರುವುದು ಸರಿಯಲ್ಲ. ಕೂಡಲೇ ಅವರು ಮಹಿಳೆ ಬಳಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚಕ್ರವರ್ತಿ ಸೂಲಿಬೆಲೆ(Chakravarthy sulibele) ಒಬ್ಬ ಬಾಡಿಗೆ ಭಾಷಣಕಾರ. ಆದರೆ ಒಂದು ಹೆಣ್ಣಿನ ಬಗ್ಗೆ ಹೀಯಾಳಿಸುವುದು ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ಫೇಸ್ಬುಕ್ ಖಾತೆಯಿಂದ ಒಂದು ಹೆಣ್ಣನ್ನು ಅಗೌರವಿಸುವಂತಹ ಹೇಳಿಕೆ ಬಂದಾಗಲೂ ಕೂಡ ಅದಕ್ಕೆ ವಿಷಾದ ವ್ಯಕ್ತಪಡಿಸದೆ ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ; ಚಕ್ರವರ್ತಿ ಸೂಲಿಬೆಲೆ ವಿಚಾರಣೆ
ಮಲೆನಾಡಿನಲ್ಲಿ ರಾಜಕೀಯವಾಗಿ ಬಿಜೆಪಿಯಾಗಲಿ, ಜೆಡಿಎಸ್ ಆಗಲಿ, ಕಾಂಗ್ರೆಸ್ ಆಗಲಿ ನಾವೆಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಹೆಣ್ಣಿನ ಬಗ್ಗೆ ಗೌರವ ಇಟ್ಟುಕೊಂಡಿವೆ. ಆದರೆ, ಸೂಲಿಬೆಲೆ ಎಂಬ ವ್ಯಕ್ತಿ ಹೆಣ್ಣಿಗೆ ಗೌರವ ಕೊಟ್ಟಿಲ್ಲ. ಅವಮಾನ ಮಾಡಿದ ಮಹಿಳೆಗೆ ವಿಷಾದ ಹೇಳಿ ಕ್ಷಮೆ ಕೋರಬೇಕು ಒಂದು ಆಗ್ರಹಿಸಿದರು.
ಸೂಲಿಬೆಲೆ ವಿರುದ್ಧ ದೂರು ಕೊಟ್ಟ ಕೆಪಿಸಿಸಿ ಸಾಮಾಜಿಕ ಜಾಲತಾಣ(Social media)ದ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್ (Saugandhika Raghunath)ಮಾತನಾಡಿ, ಒಂದು ಹೆಣ್ಣಿನ ಬಗ್ಗೆ ಅಗೌರವ ಕೊಡುವವರು ಯಾರೇ ಆಗಲಿ ಅವರನ್ನು ಉನ್ನತ ಮನುಷ್ಯ ಎಂದು ಹೇಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಕ್ಕೆ ಅವರ ಹೆಸರಿನ ಖಾತೆಯಿಂದ ನನ್ನನ್ನು ತೀರಾ ಕೆಳಮಟ್ಟದಲ್ಲಿ ಮತ್ತು ಅಶ್ಲೀಲವಾಗಿ ಕಾಮೆಂಟ್ಸ್ ಹಾಕಲಾಗಿದೆ. ಹೀಗಿದ್ದರೂ ಕೂಡ ಇದು ತಪ್ಪು ಎಂದು ಅವರು ಒಪ್ಪಿಕೊಳ್ಳಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬೇಕಾದಷ್ಟು ಅನಗತ್ಯ ಪೋಸ್ಟ್ ಬರುತ್ತವೆ ನಿಜ. ಆದರೆ, ಒಂದು ಹೆಣ್ಣಿನ ಇಡೀ ಕುಟುಂಬವನ್ನು ಹೀಯಾಳಿಸಲಾಗಿದೆ. ಆದ್ದರಿಂದಲೇ ದೂರು ಕೊಟ್ಟಿದ್ದೇನೆ. ಸೂಲಿಬೆಲೆ ಅವರು ಒಂದು ವಿಷಾದ ವ್ಯಕ್ತಪಡಿಸಿದ್ದರೆ ಅದು ಮುಗಿದುಹೋಗುತ್ತಿತ್ತು ಎಂದರು.
ಸರ್ಕಾರವನ್ನು ಟೀಕಿಸಿದರೆ ಕೇಸ್ ಹಾಕುತ್ತಿದ್ದಾರೆ: ಸೂಲಿಬೆಲೆ ಟೀಕೆ