ಹಿಂದೂ ಧರ್ಮದ ಚಿಂತನೆಗಳ ಮೇಲೆ ರಾಹುಲ್ ಗಾಂಧಿ ಬೆಳೆದಿಲ್ಲ: ಚಕ್ರವರ್ತಿ ಸೂಲಿಬೆಲೆ

By Govindaraj S  |  First Published Jul 3, 2024, 4:40 PM IST

ರಾಹುಲ್ ಗಾಂಧಿ ಅವರ ಒಟ್ಟಾರೆ ಮಾತು ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ಹಿಂದೂಗಳು ಅಂದ್ರೆ ಹಿಂಸೆಯನ್ನು ಪ್ರಚೋದಿಸುವವರು ಅನ್ನೋ ಮಾತು ಹೇಳಿದ್ದಾರೆ ಎಂದು ಹೊಸಪೇಟೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 


ವಿಜಯನಗರ (ಜು.03): ರಾಹುಲ್ ಗಾಂಧಿ ಅವರ ಒಟ್ಟಾರೆ ಮಾತು ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ಹಿಂದೂಗಳು ಅಂದ್ರೆ ಹಿಂಸೆಯನ್ನು ಪ್ರಚೋದಿಸುವವರು ಅನ್ನೋ ಮಾತು ಹೇಳಿದ್ದಾರೆ ಎಂದು ಹೊಸಪೇಟೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಹಿಂದೂ ಧರ್ಮಕ್ಕೆ ರಾಹುಲ್ ಗಾಂಧಿ ಅವಮಾನ ವಿಚಾರವಾಗಿ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಎಂಪಿಯಾಗಿ ಮಾತಾಡಿದ್ರೆ ಸಿರಿಯಸ್ಸಾಗಿ ತಗೋತಿರಲಿಲ್ಲ. ವಿರೋಧ ಪಕ್ಷದ ನಾಯಕನಾಗಿ ಇಡೀ ಹಿಂದೂ ಸಮಾಜದ ಬಗ್ಗೆ ಮಾತಾಡಿರೋದು ಸಹಿಸದೇ ಇರುವಂತ ಮಾತುಗಳು ಯಾವ ಶಿವನ ಬಗ್ಗೆ ಮಾತಾಡ್ತೋರೋ ಅದೇ ಶಿವನ ಕೈಯಲ್ಲಿ ತ್ರಿಶೂಲ ಇದೆ. 

ದುಷ್ಟರಿಗೆ ಶಿಕ್ಷೆ ಕೊಡ್ತೀವಿ ಅನ್ನೋ ಎಚ್ಚರಿಯನ್ನು ಕೊಡಲು ಶಿವನ ಕೈಯಲ್ಲಿ ತ್ರಿಶೂಲ ಇದೆ. ಅಹಿಂಸ ಪರಮೋಧರ್ಮ ಹಿಂದೂ ಧರ್ಮದ ಪರಮವಾಕ್ಯ. ಹಿಂದೂ ಧರ್ಮದ ಚಿಂತನೆಗಳ ಮೇಲೆ ರಾಹುಲ್ ಗಾಂಧಿ ಬೆಳೆದಿಲ್ಲ. ಅವರಿಗೆ ಹಿಂದೂ ಧರ್ಮದ ಪರಿಕಲ್ಪನೆ ಇಲ್ಲ, ಹೀಗಾಗಿ ಈ ರೀತಿಯ ಅಪದ್ಧದ ಮಾತುಗಳನ್ನಾಡಿದ್ದಾರೆ. ಅದೇ ಕಾರಣಕ್ಕೆ ಮೋದಿಯವರು ಹೇಳಿದ ಪ್ರಕಾರ 99 ಅಂಕಗಳನ್ನ ಪಡೆದು ಕುಣಿತಿರುವ ಕಿಡ್ ತರ ಆಡ್ತಿದ್ದಾರೆ ಅಂತಾ ನನಗೂ ಅನ್ನಿಸುತ್ತೆ. ರಾಹುಲ್ ಗಾಂಧಿ ಹೇಳಿಕೆ ಅದು ಬಾಲಿಶ ಅಂತಾ ತಳ್ಳಬಹುದು ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

Tap to resize

Latest Videos

undefined

ಹರಿಕಥೆಯನ್ನು ಉಳಿಸಿ, ಬೆಳೆಸಿ, ಪೋಷಿಸಬೇಕು: ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯ ಸತ್ವವನ್ನು ಕೊಂಡೊಯ್ಯಬಲ್ಲ ಈ ವಿಶಿಷ್ಟ ಮಾಧ್ಯಮ ಹರಿಕಥೆಗೆ ಪ್ರಸ್ತುತ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನಾವೆಲ್ಲ ಸಹಕರಿಸಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಮೈಸೂರಿನಲ್ಲಿ ನಡೆದ ಶ್ರೀಲಲಿತ ಉಳಿಯಾರ್ ಅವರ 501ನೇ ಹರಿಕಥಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು. ಆಧುನಿಕ ವಿಕಾಸದ ಓಟದ ಬರದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಮರೆಯಾಗಬಾರದು. ತರುಣರಿಗೆ ಪ್ರಾಣಶಕ್ತಿ ಆಗಿರುವಂತಹ ಮುಖ್ಯಪ್ರಾಣವೇ ಮಾದರಿ ಆಗಬೇಕೆ ಹೊರತು ಮೈಕಲ್ ಜಾಕ್ಸನ್, ಶಾರುಖ್ ಖಾನ್, ಸಲ್ಮಾನ್ ಖಾನ್ ಮುಂತಾದವರಲ್ಲ ಎಂದರು.

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ರಾಮಕಾರ್ಯ ಮತ್ತು ರಾಷ್ಟ್ರ ಕಾರ್ಯ ಬೇರೆ ಬೇರೆ ಅಲ್ಲ. ಹಾಗಿರುವಾಗ ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ ವಿಶಿಷ್ಟ ಮಾಧ್ಯಮವಾಗಿರುವ ಈ ಹರಿಕಥೆಗೆ ಪೂರಕವಾದ ಆಶ್ರಯ, ಪ್ರೋತ್ಸಾಹ, ಸಹಕಾರವನ್ನು ನೀಡಿದಾಗ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಕೊಂಡೊಯ್ಯಲು ಸಾಧ್ಯವಾದೀತು ಎಂದರು. ಗಾಳಿಪಟದಲ್ಲಿ ಅದರ ದಾರ ಮತ್ತು ಪಟಕ್ಕಿರುವ ನಂಟಿನಂತೆ ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರ ಒಂದನೊಂದು ಅವಲಂಬಿಸಿರುತ್ತದೆ ಎಂದು ಅವರು ವಿಶ್ಲೇಷಿಸಿದರು.

click me!