ಬಾಲಕನ ಹತ್ಯೆಯಾದಾಗ ತಾವು ಎಲ್ಲಿ ರಿಲ್ಯಾಕ್ಸ್ ಮಾಡ್ತಿದ್ರಿ, ಎಚ್‌ಡಿಕೆಗೆ VHP ತಿರುಗೇಟು

By Suvarna News  |  First Published Apr 1, 2022, 7:50 PM IST

* ಕುಮಾರಸ್ವಾಮಿ ಹಾಗೂ ವಿಶ್ವ ಹಿಂದೂ ಪರಿಷತ್ ನಡುವೆ ಜಟಾಪಟಿ
* ಕುಮಾರಸ್ವಾಮಿ ಹೇಳಿಕೆಗಳಿಗೆ ತಿರುಗೇಟು ಕೊಟ್ಟ ವಿಎಚ್‌ಪಿ
* ಟ್ವೀಟ್ ಮೂಲಕ ಕುಮಾರಸ್ವಾಮಿಗ್ ಪ್ರಶ್ನೆಗಳು ಸುರಿಮಳೆ


ಬೆಂಗಳೂರು, (ಏ.01): ಹಿಂದೂ (Hindu) ಸಂಘಟನೆಗಳ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ VHP ಕರ್ನಾಟಕ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ವಿಶ್ವ ಹಿಂದೂ ಪರಿಷತ್​ ಕರ್ನಾಟಕ,  ಮಾನ್ಯ Self Declared ಮಾತೃ ಹೃದಯಿ ಎಚ್​.ಡಿ ಕುಮಾರಸ್ವಾಮಿಯವರೇ, ಚುನಾವಣೆಗಳಲ್ಲಿ ಸೋತಮೇಲೆ ತಾವು ಹತಾಶರಾಗಿರುವುದು ಹಾಗೂ ಕಳೆದ ಬಾರಿ ತಾವು ಯಾವ “Brothers”ವೋಟ್‌ಗಳನ್ನು ನಂಬಿಕೊಂಡಿದ್ದೀರೋ ಅವರು ನಿಮಗೆ ಕೈ ಕೊಟ್ಟರೆಂದು ಅವರನ್ನು ಓಲೈಸಲು ಹಿಂದೂ ಸಮಾಜ ಹಾಗು ಸಂಘಟನೆಗಳ ವಿರುದ್ಧ ತಾವು ಈ ರೀತಿ ಹೇಳಿಕೆ ನೀಡುತ್ತಿರುವುದು ಕಾಣಿಸುತ್ತಿದೆ ಎಂದು  ಕಿಡಿಕಾರಿದೆ.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಹೌದು ನಿಮ್ಮ ಕರ್ನಾಟಕ ನಿಮ್ಮ ಜಹಗೀರಲ್ಲವೆಂಬುದನ್ನು ತಾವು ಮರೆಯಬಾರದು! ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗ ತಮಗೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನಿಸಲಿಲ್ಲವೇ! 2/10

— VHP Karnataka (@karvhp)

Tap to resize

Latest Videos

VHP, ಬಜರಂಗದಳ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ

ಸರ್ವ ಜನಾಂಗದ ಶಾಂತಿಯ ತೋಟ ಹೌದು.. ನಿಮ್ಮ ಕರ್ನಾಟಕ ನಿಮ್ಮ ಜಹಗೀರಲ್ಲವೆಂಬುದನ್ನು ತಾವು ಮರೆಯಬಾರದು! ಈ ಹಿಂದೆ ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗ ತಮಗೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಅನ್ನಿಸಲಿಲ್ಲವೇ ಎಂದು  ವಿಶ್ವ ಹಿಂದೂ ಪರಿಷತ್ ಪ್ರಶ್ನಿಸಿದೆ.

ಇನ್ನು ಯಾವುದು ನೆಮ್ಮದಿಯ ಮನಸ್ಸುಗಳನ್ನು ಕೆಡಿಸುವುದು ಕುಮಾರಸ್ವಾಮಿಯವರೇ! ಹಿಜಾಬ್ ಆದೇಶವನ್ನು ಧಿಕ್ಕರಿಸಿ ಬಂದ್ ಗೆ ಕರೆ ನೀಡುವುದಾ? ಅಥವಾ ಹಿಜಾಬ್ ಇಸ್ಲಾಮ್ ಅಂಗವಲ್ಲವೆಂದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕುವುದಾ? ಟಾಂಗ್ ಕೊಟ್ಟಿದೆ.

ಕೊರೋನಾ ಕಾಲದಲ್ಲಿ ನಾವೂ ಸೇವೆ ಮಾಡಿದ್ದೀವಿ ಎಂಬುದು ತಮಗೆ ಜ್ಞಾನೋದಯವಾಗಿರುವುದು ಒಳ್ಳೆಯ ಸಂಗತಿ , ನಾವೇನು ತೋಟದಲ್ಲಿ ರಿಲ್ಯಾಕ್ಸ್ ಮಾಡ್ತಿರಲಿಲ್ಲ! ನಿಮಗೆ ಯಾಕೆ ಹೀಗೆ ತಡವಾಗಿ ಜ್ಞಾನೋದಯವಾಗುವುದು ಎಂದು ನಮಗೂ ತಮ್ಮ ಮೇಲೆ ಮರುಕವಿದೆ. 144 ಸೆಕ್ಷನ್ ಉಲ್ಲಂಘನೆಯಾಗಿದ್ದರ ಬಗ್ಗೆ ತಾವು ಸದನದಲ್ಲಿ ಯಾಕೆ ಮಾತನಾಡಲಿಲ್ಲ! ನಿಮಗೂ ಗೊತ್ತಿದೆ ಹರ್ಷನ ಕೊಲೆ ಹಿಂದೂ ಎನ್ನುವ ಒಂದೇ ಕಾರಣಕ್ಕೆ ಆಗಿದೆ ಎಂದು! ಮುದ್ಧ ಬಾಲಕನ ಹತ್ಯೆಯಾದಾಗ ತಾವು ಎಲ್ಲಿ ರಿಲ್ಯಾಕ್ಸ್ ಮಾಡ್ದುತ್ತಿದ್ದಿರಿ ಎಂಬುದು ನಮಗೆ ತಿಳಿದಿಲ್ಲ ಬಿಡಿ.

ಕೊರೋನಾ ಕಾಲದಲ್ಲಿ ನಾವೂ ಸೇವೆ ಮಾಡಿದ್ದೀವಿ ಎಂಬುದು ತಮಗೆ ಜ್ಞಾನೋದಯವಾಗಿರುವುದು ಒಳ್ಳೆಯ ಸಂಗತಿ , ನಾವೇನು ತೋಟದಲ್ಲಿ ರಿಲ್ಯಾಕ್ಸ್ ಮಾಡ್ತಿರಲಿಲ್ಲ! ನಿಮಗೆ ಯಾಕೆ ಹೀಗೆ ತಡವಾಗಿ ಜ್ಞಾನೋದಯವಾಗುವುದು ಎಂದು ನಮಗೂ ತಮ್ಮ ಮೇಲೆ ಮರುಕವಿದೆ. 4/10

— VHP Karnataka (@karvhp)

 

ಸರ್! ನಿಮ್ಮ ತರಹ ಹೇಳಿಕೆಗಳನ್ನು ಬದಲಾಯಿಸಲು ನಮಗೇ ಸಾಧ್ಯವಿಲ್ಲ ಬಿಡಿ! ಆದರೂ ಧರ್ಮಗುರುಗಳ ಗೌರವ ನೀಡದವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಇಲ್ಲವೇ! ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚುವವರ ಪರ ನೀವು ನಿಲ್ಲುತ್ತೀರಾ?  

ಸರ್! ತಮಗೆ ಸಂವಿಧಾನದ ಅರಿವಿಲ್ಲವೆಂದು ನಮಗೆ ಈಗ ತಿಳಿಯುತ್ತಿದೆ! ಹಲಾಲ್ ಸರ್ಟಿಫಿಕೇಟ್ ನೀಡಲು ಯಾವ ಕಾನೂನಿನಡಿ ಮಸೀದಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ! FSSAI ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿರುವುದು ಆಹಾರ ಪದಾರ್ಥ ಗುಣಮಟ್ಟ ಹಾಗು ಸುರಕ್ಷತೆಯನ್ನು ಕಾಪಾಡಲು ಎಂದು ತಮಗೆ ತಿಳಿದಿಲ್ಲವಾ? 

ಹಿಜಾಬ್ ಆದೇಶದ್ಲಲೂ ತಮಗೆ ಗೊತ್ತಿದೆಯಲ್ಲವೇ ಯಾರು ಸಂವಿಧಾನದ ವಿರುದ್ಧ ನಿಂತವರು ಎಂದು! ಅಹ್! ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯನ್ನು ಒಮ್ಮೆ ಓದಿ! ತಮಗೆ ತಿಳಿಯುವುದು ಯಾವುದು ಸಾಂವಿಧಾನಿಕ ಯಾವುದು ಅಸಂವಿಧಾನಿಕ! 

ಕೊನೆಯಾದಾಗಿ ಯಾರು ಭಯೋತ್ಪಾದಕರು ಯಾರು ಅಲ್ಲ ಅಂತ ನಿರ್ಧರಿಸೊಕ್ಕೆ ನೀವೇನು ಜಡ್ಜ್ ಅಲ್ಲ ಬಿಡಿ ಕುಮಾರಣ್ಣ! ಚುನಾವಣೆಗಳು ಬರುತ್ತವೆ , ಹೋಗುತ್ತವೆ! ಧರ್ಮ ಶಾಶ್ವತವಾಗಿರುವುದು ! ಕೇವಲ ವೋಟ್ಗಳಿಗೆ ಹೀಗೆಲ್ಲ ಹೇಳಿಕೆಗಳನ್ನು ನೀಡಿ ನಿಮ್ಮ ಗೌರವಕ್ಕೆ ನೀವೇ ಯಾಕೆ ಧಕ್ಕೆ ತಂದುಕೊಳ್ಳುವಿರಿ? ಹೀಗೆ ವಿಶ್ವ ಹಿಂದೂ ಪರಿಷತ್​ ಕರ್ನಾಟಕ, ಕುಮಾರಸ್ವಾಮಿ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುವ ಮೂಲಕ ತಿರುಗೇಟು ನೀಡಿದೆ.

ಕೊನೆಯಾದಾಗಿ ಯಾರು ಭಯೋತ್ಪಾದಕರು ಯಾರು ಅಲ್ಲ ಅಂತ ನಿರ್ಧರಿಸೊಕ್ಕೆ ನೀವೇನು ಜಡ್ಜ್ ಅಲ್ಲ ಬಿಡಿ ಕುಮಾರಣ್ಣ! ಚುನಾವಣೆಗಳು ಬರುತ್ತವೆ , ಹೋಗುತ್ತವೆ! ಧರ್ಮ ಶಾಶ್ವತವಾಗಿರುವುದು ! ಕೇವಲ ವೋಟ್ಗಳಿಗೆ ಹೀಗೆಲ್ಲ ಹೇಳಿಕೆಗಳನ್ನು ನೀಡಿ ನಿಮ್ಮ ಗೌರವಕ್ಕೆ ನೀವೇ ಯಾಕೆ ಧಕ್ಕೆ ತಂದುಕೊಳ್ಳುವಿರಿ? 10/10

— VHP Karnataka (@karvhp)
click me!