
ಲಖನೌ(ಏ.02): ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ನೀಡಿದ ಹೇಳಿಕೆಯಿಂದ ಇದೀಗ ಕೋರ್ಟ್, ಜೈಲು ಶಿಕ್ಷೆ ಎಂದು ಅಲೆಯುವಂತಾಗಿದೆ. ರಾಹುಲ್ ಗಾಂಧಿ ಪ್ರಕರಣ ರಾಜಕಾರಣಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕಿತ್ತು. ಆದರೆ ಇದೀಗ ಮತ್ತೊರ್ವ ಕಾಂಗ್ರೆಸ್ ನಾಯಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಹೇಳಿಕೆ ನೀಡಿದ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಚೌಧರಿ ವಿರುದ್ದ ಪ್ರಕರಣ ದಾಖಲಾಗಿದೆ. ಚೌಧರಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿನ್ ಚೌಧರಿ ನೀಡಿದ ಹೇಳಿಕೆ ಬಿಜೆಪಿ ನಾಯಕರನ್ನು ಕೆರಳಿಸಿತ್ತು. ಅದಾನಿ ಪ್ರಕರಣದಲ್ಲಿ ಮೋದಿ ಕೈವಾಡ ಕುರಿತು ಹೇಳಿಕೆ ನೀಡುವಾಗ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಹೇಳಿಕೆ ನೀಡಲಾಗಿದೆ. ಈ ಅಕ್ಷೇಪಾರ್ಹ ಹೇಳಿಕೆ ವಿರುದ್ಧ ಉತ್ತರ ಪ್ರದೇಶ ಬಿಜೆಪಿ ಯುವಮೋರ್ಚಾ ನಾಯಕ ಅಕ್ಷಿತ್ ಅಗರ್ವಾಲ್ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಡೀಶನಲ್ ಸೂಪರಿಡೆಂಟ ಆಫ್ ಪೊಲೀಸ್ ಶ್ರಿಶ್ ಚಂದ್ರ, ತನಿಖ ನಡೆಸುವುದಾಗಿ ಹೇಳಿದ್ದಾರೆ.
21ನೇ ಶತಮಾನದ ಕೌರವರು ಹೇಳಿಕೆ, ಅನರ್ಹ ಸಂಸದ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಕೇಸ್!
ಅದಾನಿ ಪ್ರಕರಣ ಕುರಿತು ಸಚಿನ್ ಚೌಧರಿ ಬಿಜೆಪಿ ವಿರುದ್ದ ಹಲವು ಆರೋಪ ಮಾಡಿದ್ದಾರೆ. ಸತ್ಯಕ್ಕೆ ದೂರವಾದ ಮಾತುಗಳನ್ನೇ ಹೇಳಿದ್ದಾರೆ. ಅದಾನಿ, ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಸಚಿನ್ ಚೌಧರಿ ಎಲ್ಲೆ ಮೀರಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದಾರೆ. ಈ ರೀತಿಯ ಅಕ್ಷೇಪಾರ್ಹ ಹೇಳಿಕೆ ವಿರುದ್ದ ಪ್ರಕರಣ ದಾಖಲಿಸಿದ್ದೇನೆ ಎಂದು ಅಕ್ಷಿತ್ ಅಗರ್ವಾಲ್ ಹೇಳಿದ್ದಾರೆ.
ಸಚಿನ್ ಚೌಧರಿ ನೀಡಿರುವ ಹೇಳಿಕೆ ವಿಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಟೀಕಿಸುವ ಭರದಲ್ಲಿ ಏನು ಬೇಕಾದರೂ ಹೇಳಬಹುದು ಅನ್ನೋ ಕಾಂಗ್ರೆಸ್ ಮನಸ್ಥಿತಿಯನ್ನು ಅಂತ್ಯಗೊಳಿಸುತ್ತೇವೆ. ಕಾನೂನಿನ ಚೌಕಟ್ಟು ಮೀರಬಾರದು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಕಾಂಗ್ರೆಸ್ ನಾಯಕರು ಕಾನೂನಿಗಿಂತ ಹೊರತಲ್ಲ. ಕೋರ್ಟ್ ಆದೇಶಕ್ಕೆ ಗೌರವ ಕೊಡದ ಕಾಂಗ್ರೆಸ್‌ನಿಂದ ಇದಕ್ಕಿಂತ ಹೆಚ್ಚೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ.
ರಾಹುಲ್ ಗಾಂಧಿ ಬಳಿಕ, ಇನ್ನೊಬ್ಬ ರಾಹುಲ್ ಗಾಂಧಿಯನ್ನು ಅನರ್ಹ ಮಾಡಿದ ಚುನಾವಣಾ ಆಯೋಗ!
ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿಚಾರಣೆಗೆ ನೋಟಿಸ್ ನೀಡಿದಾಗ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನೀಡಿದೆ. ಒಂದು ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ವಿಚಾರಣೆಗೆ ನೋಟಿಸ್ ನೀಡುವುದು, ವಿಚಾರಣೆ ನಡೆಸುವುದು ಸಾಮಾನ್ಯ. ವಿಚಾರಣೆ ನಡೆ ಸರಿ ಇಲ್ಲ ಎಂದೆನಿಸಿದರೆ, ಕೋರ್ಟ್ ಮೂಲಕ ನ್ಯಾಯ ಪಡೆದುಕೊಳ್ಳಬಹುದು. ಆದರೆ ಕಾಂಗ್ರೆಸ್ ಭಾರಿ ಪ್ರತಿಭಟನೆ ಮಾಡಿತ್ತು. ಇದೀಗ ಸೂರತ್ ಕೋರ್ಟ್ ತೀರ್ಪು ನೀಡಿದ ಬಳಿಕ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಇದಕ್ಕೆ ಅದಾನಿ ಪ್ರಕರಣದ ತೇಪೆ ಹಚ್ಚುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ರಾಹುಲ್ ಅನರ್ಹರಾಗಿದ್ದು ಕೋರ್ಟ್ ತೀರ್ಪಿನಿಂದ. ಇದರಲ್ಲಿ ಬಿಜೆಪಿ ಪಾತ್ರವಿಲ್ಲ.ಆದರೆ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತಕ್ಷ ಬೆಲೆ ತೆರಬೇಕಾಗುತ್ತದೆ ಎಂದು ಅಕ್ಷಿತ್ ಅಗರ್ವಾಲ್ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.