
ನವದೆಹಲಿ[ಜ.25]: ರಾಜಕೀಯ ಪಕ್ಷಗಳು ಅಪರಾಧ (ಕ್ರಿಮಿನಲ್) ಹಿನ್ನೆಲೆಯುಳ್ಳ ಸ್ಪರ್ಧಾಕಾಂಕ್ಷಿಗಳಿಗೆ ಚುನಾವಣಾ ಟಿಕೆಟ್ ನೀಡಬಾರದು ಎಂದು ಸೂಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಭಾರತೀಯ ಚುನಾವಣಾ ಆಯೋಗ ಮನವಿ ಮಾಡಿದೆ.
2018ರ ಸೆಪ್ಟೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶವೊಂದನ್ನು ನೀಡಿ, ‘ಚುನಾವಣೆಗೆ ನಿಲ್ಲುವ ಮುನ್ನ ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳು ಹಾಗೂ ಹಿನ್ನೆಲೆಯನ್ನು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಬೇಕು ಹಾಗೂ ಟೀವಿ, ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡಿ ಕ್ರಿಮಿನಲ್ ಹಿನ್ನೆಲೆಯನ್ನು ಘೋಷಿಸಿಕೊಳ್ಳಬೇಕು’ ಎಂದು ಸೂಚಿಸಿತ್ತು.
EVM ನಿರ್ವಹಣೆಯಲ್ಲಿ ಉತ್ತಮ ಸಾಧನೆಗೈದ ಕರ್ನಾಟಕಕ್ಕೆ ಪ್ರಶಸ್ತಿ..!
ಆದರೆ 2018ರಲ್ಲಿ ನೀಡಿದ ಕೋರ್ಟ್‌ನ ಈ ಆದೇಶವು ರಾಜಕೀಯದಲ್ಲಿ ಅಪರಾಧೀಕರಣ ತಗ್ಗಿಸಲು ನೆರವಾಗುತ್ತಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ ಚುನಾವಣಾ ಆಯೋಗ, ‘ಇದರ ಬದಲು ಕ್ರಿಮಿನಲ್ ಹಿನ್ನೆಲೆಯಿರುವವರಿಗೆ ಟಿಕೆಟ್ ನೀಡಬಾರದು ಎಂದು ರಾಜಕೀಯ ಪಕ್ಷಗಳಿಗೇ ಸೂಚಿಸಬೇಕು’ ಎಂದು ಕೋರಿತು.
ಇದನ್ನು ಪರಿಗಣಿಸಿದ ನ್ಯಾ| ರೋಹಿನ್ಟನ್ ನಾರಿಮನ್ ಹಾಗೂ ನ್ಯಾ| ರವೀಂದ್ರ ಭಟ್ ಅವರಿದ್ದ ಪೀಠ, ‘ರಾಜಕೀಯ ಅಪರಾಧೀಕರಣ ತಡೆಯಲು ಏನು ಮಾಡಬೇಕೆಂಬ ಬಗ್ಗೆ 1 ವಾರದಲ್ಲಿ ನಿಯಮಗಳ ಚೌಕಟ್ಟು ಸಿದ್ಧಪಡಿಸಿ ನಮಗೆ ನೀಡಿ’ ಎಂದು ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.