ಕೆಪಿಸಿಸಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ: ಖರ್ಗೆ

By Kannadaprabha NewsFirst Published Jan 25, 2020, 8:16 AM IST
Highlights

ಕೆಪಿಸಿಸಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ: ಖರ್ಗೆ| ಅಧ್ಯಕ್ಷ ಹುದ್ದೆ ನೀಡಿ ಎಂದು ನಾನು ಕೇಳಿಲ್ಲ| ವದಂತಿಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್‌ ಹಿರಿಯ ನಾಯಕ

ನವದೆಹಲಿ[ಜ.25]: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಆಸಕ್ತಿ ಇಲ್ಲ. ನಾನು ಆ ಹುದ್ದೆಗೆ ಆಸಕ್ತ ಎಂದು ಯಾರಾದರೂ ಪ್ರಚಾರ ಮಾಡಿದ್ದರೆ ಅದು ಸುಳ್ಳು.

- ಹೀಗಂತ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದಿಂದಲೇ ದಿಢೀರ್ ದೆಹಲಿಗೆ ಡಿಕೆಶಿ: ಕುತೂಹಲ ಕೆರಳಿಸಿದ ಕೆಪಿಸಿಸಿ ಹುದ್ದೆ

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ನಾನು ಕೇಳಿಲ್ಲ. ಈ ಬಗ್ಗೆ ಯಾರೇ ಪ್ರಚಾರ ಮಾಡಿದ್ದರೂ ಅದು ಸುಳ್ಳು. ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರವೇ ಹೈಕಮಾಂಡ್‌ ನೇಮಕ ಮಾಡಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಹುದ್ದೆಗೆ ತೀವ್ರ ಲಾಬಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ದಲಿತ ಮುಖಂಡರು ಇತ್ತೀಚೆಗೆ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷರಾಗುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದರು ಎಂದು ವದಂತಿ ಹಬ್ಬಿಸಲಾಗಿತ್ತು. ಈ ವದಂತಿಗೆ ಸ್ಪಷ್ಟನೆ ನೀಡಿರುವ ಅವರು ಕೆಪಿಸಿಸಿ ಹುದ್ದೆಗೆ ತಾವು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದ ಮೂವರು ಕಾಂಗ್ರೆಸಿಗರ ಅಮಾನತು

ವೇಣು ಭೇಟಿ ಮಾಡಿದ ಖರ್ಗೆ:

ಈ ನಡುವೆ ಕೆಪಿಸಿಸಿ ಹುದ್ದೆಗೆ ಹೊಸ ಅಧ್ಯಕ್ಷರ ನೇಮಕ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿಯ ಸಂಘಟನಾ ಮತ್ತು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಎಐಸಿಸಿ ಕಚೇರಿಯಲ್ಲಿ ಈ ಸಭೆ ನಡೆದಿದೆ. ಸಭೆಯ ವಿವರಗಳು ತಿಳಿದುಬಂದಿಲ್ಲ.

click me!