ಬಿಜೆಪಿಯವರಿಗೆ ಕೇಸರಿ ಪತ್ರ ಬೇಕಿದ್ದರೂ ಕೊಡುವೆ: ಸಿಎಂ

By Web DeskFirst Published Sep 4, 2018, 11:04 AM IST
Highlights

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಬಿಜೆಪಿ ಒಂದು ಒಂದು ರೀತಿಯಲ್ಲಿ ಆರೋಪ ವ್ಯಕ್ತಪಡಿಸುತ್ತಿದೆ. ಶ್ವೇತ ಪತ್ರ ಹೊರಡಿಸಲು ಆಗ್ರಹಿಸುತ್ತಿದೆ. ಅಯ್ಯೋ ಶ್ವೇತ ಪತ್ರವೇಕೆ, ಕೇಸರಿ ಪತ್ರ ಕೊಡಲೂ ಸಿದ್ಧವೆಂದು ಕುಹಕವಾಡಿ ಮಾತನಾಡಿದ್ದಾರೆ.

ಬೆಂಗಳೂರು: ಉತ್ತರ ಕರ್ನಾಟಕಕ್ಕೆ ನಾನು ಭೇಟಿ ನೀಡಿಲ್ಲ ಎಂಬುದಾಗಿ ಬಿಜೆಪಿ ನಾಯಕರು ಏನೇನೋ ಹೇಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆ ಪಕ್ಷದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಹಾಗೂ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಆರಂಭದಲ್ಲಿ ಯಾವ್ಯಾವ ಜಿಲ್ಲೆಗಳಿಗೆ ಹೋಗಿದ್ದರು ಎಂಬುದರ ಕುರಿತು ದಾಖಲೆ ಸಮೇತ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ರಾಜ್ಯದ ಪ್ರಗತಿ ಕುರಿತು ಬಿಜೆಪಿ ನಾಯಕರಿಗೆ ಶ್ವೇತ ಪತ್ರವೇಕೆ, ಕೇಸರಿ ಬಣ್ಣ ಬಯಸಿದರೂ ಆ ಬಣ್ಣದಲ್ಲೇ ಬೇಕಾದರೆ ಮಾಹಿತಿ ಕೊಡುತ್ತೇನೆ ಎಂದು ವ್ಯಂಗ್ಯವಾಗಿ ತಿವಿದರು. ನಮ್ಮ ಮೈತ್ರಿ ಸರ್ಕಾರದ 100 ದಿನಗಳ ಉತ್ತಮ ಆಡಳಿತಕ್ಕೆ ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್‌ಡಿ ಕುಮಾರಸ್ವಾಮಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಲವರು ಸರ್ಕಾರ ಪತನವಾಗಲಿದೆ ಎಂದು ಪ್ರಚಾರ ಮಾಡುತ್ತಿರುವುದು ನಾವು ರಾಜ್ಯದ ಅಭಿವೃದ್ಧಿಗೆ ಕೊಡುವ ಸೂಚನೆಗಳನ್ನು ಅಧಿಕಾರಿಗಳು ಪಾಲಿಸದಿರಲಿ ಎಂಬ ಭಾವನೆ ಮೂಡಿಸಲು. ನಮಗೆ ಅಧಿಕಾರಿಗಳಿಗೆ ಹೇಗೆ ಚಾಟಿ ಬೀಸಬೇಕು ಎಂಬುದು ಗೊತ್ತಿದೆ ಎಂದು ಇದೇ ವೇಳೆ ಹೇಳಿದರು.

click me!