Karnataka Election result 2023: ರಾಜ್ಯದ ಸಿಎಂ ಯಾರಾಗಬೇಕು? ಬಿ ವೈ ವಿಜಯೇಂದ್ರ ಏನಂದ್ರು?

By Gowthami K  |  First Published May 15, 2023, 8:27 PM IST

ಬಿಜೆಪಿ ಸೋಲಿನ ಬಗ್ಗೆ ಹಲವಾರು ರೀತಿ ಚರ್ಚೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಸೋಲಿನ‌ ಬಗ್ಗೆ ಪಕ್ಷದ ಹಿರಿಯರು ವರಿಷ್ಠರು ಕುಳಿತು ಸಮಗ್ರವಾಗಿ ಅವಲೋಕನ ಮಾಡಲಿದ್ದಾರೆ  ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.


ವರದಿ : ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ತುಮಕೂರು (ಮೇ.15): ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆದು ಬಳಿಕ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಕುಟುಂಬ ಸಮೇತ ಮಠಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಇನ್ನು ಮಾಧ್ಯಮದವರು ರಾಜ್ಯದ ಹಿತ ದೃಷ್ಠಿಯಿಂದ ಯಾರಾಗಬೇಕು ಮುಂದಿನ ಸಿಎಂ ನಿಮ್ಮ ವೈಯಕ್ತಿಕವಾಗಿ ಹೇಳಿ ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ಪಕ್ಷದವರು ಯೋಚನೆ ಮಾಡ್ತಾರೆ ನಾನ್ಯಾಕೆ ಅದರ ಬಗ್ಗೆ ಯಾಕೆ ಯೋಚನೆ ಮಾಡಲಿ ಎಂದು ಹೇಳಿದರು. 

Latest Videos

undefined

ಸಿದ್ದಲಿಂಗ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ನನ್ನ ಮೊದಲ ಚುನಾವಣೆಯಲ್ಲಿಯೆ ಶಿಕಾರಿಪುರ ಕ್ಷೇತ್ರದ ಮತದಾರರು ಆಶಿರ್ವಾದ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಶ್ರಮ ಪಟ್ಟು ನಾನು ವಿಧಾನಸಭೆಗೆ ಪ್ರವೇಶ ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಪೂಜ್ಯರ ಆಶಿರ್ವಾದ ಪಡೆಯೋದು ನಮ್ಮ ಧರ್ಮ ಹಾಗಾಗಿ ಬಂದು ಆಶಿರ್ವಾದ ಪಡೆದಿದ್ದೇನೆ.‌ ಇದೀಗ ಯಡಿಯೂರು ದೇವಸ್ಥಾನ ತೆರಳಿ ಮನೆ ದೇವರು ಸಿದ್ದಲಿಂಗೇಶ್ವರನಿಗೆ ಹೋಗಿ ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಸೋಲಿನ ಬಗ್ಗೆ ಹಲವಾರು ರೀತಿ ಚರ್ಚೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಸೋಲಿನ‌ ಬಗ್ಗೆ ಪಕ್ಷದ ಹಿರಿಯರು ವರಿಷ್ಠರು ಕುಳಿತು ಸಮಗ್ರವಾಗಿ ಅವಲೋಕನ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು, ಪಕ್ಷವನ್ನು ಪುನರ್ ಸಂಘಟನೆ ಹೇಗೆ ಮಾಡಬೇಕು ಎಂಬುದರ‌ ಚರ್ಚೆ ನಡೆಯಲಿದೆ, ‌ಪಕ್ಚಕ್ಕೆ ಹಿನ್ನಡೆಯಾಗಿದೆ ಅದಕ್ಕೆ ಸಾಕಷ್ಟು ಕಾರಣಗಳಿವೆ, ಕಾರಣಗಳ ಕುರಿತು ಚರ್ಚೆ ನಡೆಯಲಿದೆ. ಬಿಎಸ್ ವೈ ಇನ್ನೂ ಗಟ್ಟಿ ಇದ್ದಾರೆ ಅವರು ಇನ್ನೂ ಕೂಡ ಪಕ್ಷ ಸಂಘಟನೆ ಮಾಡಲಿದ್ದಾರೆ. ನಮ್ಮಂತ ಯುವಕರು ಶಾಸಕರು ತುಂಬಾ ಜನ ಗೆದ್ದಿದ್ದಾರೆ ನಾವೆಲ್ಲಾ ಹೊಗ್ಗಟ್ಟಾಗಿ ಪಕ್ಷವನ್ನ ಮೊತ್ತೊಮ್ಮೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

Udupi Election Results 2023: ಕಾಂಗ್ರೆಸ್ ಹಿರಿಯ ನಾಯಕರ ರಾಜಕೀಯ ನಿವೃತ್ತಿಗೆ

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ. ಈ ಸೋಲು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಮಾನದಂಡಗಳು ಬೇರೆ ಬೇರೆ, ಈ ಸೋಲನ್ನು ಒಪ್ಪಿಕೊಂಡಿದ್ದೇವೆ, ಸೋಲಿನಿಂದ ಪಾಠ ಕಲಿತು ಎಚ್ಚೆತ್ತು ಕೆಲಸ ಮಾಡಿ ನರೇಂದ್ರ ಮೋದಿಯವರ ಕೈ ಬಲ ಪಡಿಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಮೋದಿಯವರ ಕೈ ಬಲ ಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Karnataka Election Results 2023: ಬೆಳಗಾವಿಯಲ್ಲಿ ಬಿಜೆಪಿ ಯಡವಟ್ಟು, ಮಾಮನಿ ಕುಟುಂಬ ಸೋತಿದ್ದೇಗೆ?

ಬಿಜೆಪಿಗೆ ಲಿಂಗಾಯತರು ಕೈ ಕೊಟ್ಟಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ,  ಯಾವುದೇ ಒಂದು ಜಾತಿ ಆಧಾರದ ಮೇಲೆ ಚುನಾವಣೆ ಮಾಡುವುದಕ್ಕೆ ಆಗಲ್ಲ ಗೆಲ್ಲುವುದಕ್ಕೂ ಆಗಲ್ಲ, ಶಿಕಾರಿಪುರ ಕ್ಷೇತ್ರದಲ್ಲಿ ಲಿಂಗಾಯತರು ಸೇರಿದಂತೆ ಹಾಲುಮತ ಸಮಾಜ, ಎಸ್ಸಿ ಎಸ್ಟಿ ಸಮಾಜಗಳು ಸೇರಿ ನನ್ನನ್ನ ಗೆಲ್ಲಿಸಿರೋದು ಎಂದು ಹೇಳಿದರು.

click me!