ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಲಿಂಗಾಯತರನ್ನು ಏಕೆ ಪ್ರೀತಿಸುತ್ತದೆ?. ಚುನಾವಣೆ ವೇಳೆ ಮಾತ್ರ ಲಿಂಗಾಯತರ ಮೇಲೆ ಕಾಂಗ್ರೆಸ್‌ಗೆ ಎಂದೂ ಕಾಣದ ಪ್ರೀತಿ ಮತ್ತು ಗೌರವ ಹುಟ್ಟುವುದು ಏಕೆ?. ಹಿಂದೆ ವೀರೇಂದ್ರ ಪಾಟೀಲ್ ಅಥವಾ ನಿಜಲಿಂಗಪ್ಪ ಅವರನ್ನು ಅವಮಾನಿಸುವಾಗ ಈ ಪ್ರೀತಿ ಎಲ್ಲಿ ಹೋಗಿತ್ತು?. ಈ ಹಿಂದೆ ನೀವು ಸಮುದಾಯವನ್ನು ಇಬ್ಭಾಗ ಮಾಡಲು ಹೊರಟಾಗ ಅಣ್ಣ ಬಸವಣ್ಣನವರ ಬೋಧನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಮರೆತು ಬಿಟ್ಟಿರಾ ಎಂದು ಪ್ರಶ್ನಿಸಿದ ಬಿ.ವೈ.ವಿಜಯೇಂದ್ರ
ಬೆಂಗಳೂರು(ಏ.24): ‘ನಿಮ್ಮ ಹಿಂದಿನ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಉದ್ದೇಶದಿಂದ ನೀವು ಕೂಡಲಸಂಗಮಕ್ಕೆ ಹೋಗಿದ್ದರೆ ಸರಿ. ಇಲ್ಲದಿದ್ದರೆ ನಿಮ್ಮ ಬೂಟಾಟಿಕೆ ಬಸವಣ್ಣನ ಅನುಯಾಯಿಗಳಿಗೆ ತಿಳಿಯುತ್ತದೆ. ನಿಮ್ಮ ಕುತಂತ್ರಗಳಿಗೆ ರಾಜ್ಯದ ಜನತೆ ಎಂದಿಗೂ ಬಲಿಯಾಗುವುದಿಲ್ಲ’ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಭಾನುವಾರ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದರು. ಅವರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸೇರಿ ಕಾಂಗ್ರೆಸ್‌ನ ಹಲವು ನಾಯಕರು ಕೂಡ ಭೇಟಿ ನೀಡಿದ್ದರು. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ವಿಜಯೇಂದ್ರ, ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸರಮಾಲೆಯನ್ನೇ ಕೇಳಿದ್ದಾರೆ.
‘ಡ್ಯಾಂ ಕೀ’ ಶೆಟ್ಟರ್, ಸವದಿ ಕೈಯಲ್ಲಿತ್ತು: ಡಿ.ಕೆ.ಶಿವಕುಮಾರ್
ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಲಿಂಗಾಯತರನ್ನು ಏಕೆ ಪ್ರೀತಿಸುತ್ತದೆ?. ಚುನಾವಣೆ ವೇಳೆ ಮಾತ್ರ ಲಿಂಗಾಯತರ ಮೇಲೆ ಕಾಂಗ್ರೆಸ್‌ಗೆ ಎಂದೂ ಕಾಣದ ಪ್ರೀತಿ ಮತ್ತು ಗೌರವ ಹುಟ್ಟುವುದು ಏಕೆ?. ಹಿಂದೆ ವೀರೇಂದ್ರ ಪಾಟೀಲ್ ಅಥವಾ ನಿಜಲಿಂಗಪ್ಪ ಅವರನ್ನು ಅವಮಾನಿಸುವಾಗ ಈ ಪ್ರೀತಿ ಎಲ್ಲಿ ಹೋಗಿತ್ತು?. ಈ ಹಿಂದೆ ನೀವು ಸಮುದಾಯವನ್ನು ಇಬ್ಭಾಗ ಮಾಡಲು ಹೊರಟಾಗ ಅಣ್ಣ ಬಸವಣ್ಣನವರ ಬೋಧನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಮರೆತು ಬಿಟ್ಟಿರಾ ಎಂದು ಪ್ರಶ್ನಿಸಿದ್ದಾರೆ.
1989ರ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ ಕಾಂಗ್ರೆಸ್ 178 ಸೀಟುಗಳನ್ನು ಗೆದ್ದು, ದಿಗ್ವಿಜಯ ಸಾಧಿಸಿತ್ತು. ಆದರೆ, ಅಂದಿನ ಜನಪ್ರಿಯ ಲಿಂಗಾಯತ ಸಿಎಂ ಬಗ್ಗೆ ಕಾಂಗ್ರೆಸ್ ನಾಯಕತ್ವ ದುರಹಂಕಾರ ಪ್ರದರ್ಶಿಸಿತ್ತು. ಲಿಂಗಾಯತ ನಾಯಕರ ತಿರಸ್ಕಾರ ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ್ನು ಧೂಳಿಪಟ ಮಾಡಿತ್ತು ಎಂದು ಹಳೆಯ ಸಂಗತಿಗಳನ್ನು ನೆನಪಿಸಿದ್ದಾರೆ.
ಬೀದರ್: ಭಾಲ್ಕಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ..!
ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಮುಳುಗುವ ಜೀವಕ್ಕೆ ಹುಲ್ಲುಕಡ್ಡಿಯ ಆಸರೆ ಎಂಬಂತಿದೆ ಕಾಂಗ್ರೆಸ್‌ನ ಪರಿಸ್ಥಿತಿ. 2023ರ ಚುನಾವಣೆಯ ಈ ವೇಳೆ ಎಲ್ಲಾ ಭರವಸೆಗಳನ್ನು ಕಳೆದುಕೊಂಡು ಹತಾಶೆಯಿಂದ ಅಡ್ಡದಾರಿ ಹಿಡಿದಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.