ಕೋಲಾರ ಪ್ರವಾಸದಲ್ಲಿರುವ ಬಿ.ವೈ ವಿಜಯೇಂದ್ರ ಅವರು ವರುಣಾದಲ್ಲಿ ಸ್ಪರ್ಧೆ ಕುರಿತು ಮಾತನಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಚರ್ಚೆ ನಡೆಯುತ್ತಿದೆ. ನಾನು ಶಿಕಾರಿಪುರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಶಿಕಾರಿಪುರ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಕೋಲಾರ (ಮಾ.26): ಕೋಲಾರ ಪ್ರವಾಸದಲ್ಲಿರುವ ಬಿ.ವೈ ವಿಜಯೇಂದ್ರ ಅವರು ವರುಣಾದಲ್ಲಿ ಸ್ಪರ್ಧೆ ಕುರಿತು ಮಾತನಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಚರ್ಚೆ ನಡೆಯುತ್ತಿದೆ. ನಾನು ಶಿಕಾರಿಪುರದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಶಿಕಾರಿಪುರ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡಿಲ್ಲ. 224 ಕ್ಷೇತ್ರದ ಅಭ್ಯರ್ಥಿ ಬಗ್ಗೆ ತೀರ್ಮಾನವಾಗಿಲ್ಲ. ಪಕ್ಷ ತೀರ್ಮಾನ ಮಾಡಿದ ಬಳಿಕ ಹೇಳುತ್ತೇನೆ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಪ್ರಧಾನಿ ಮೋದಿ ವೋಟಿಗೋಸ್ಕರ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ: ಸಿದ್ದರಾಮಯ್ಯ
ಕಾಂಗ್ರೆಸ್ ವರಿಷ್ಠ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಉಪನಾಮ ಕುರಿತು ಕೋಲಾರದಲ್ಲಿ ನೀಡಿದ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಅವರಿಗೆ 2 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಅವರ ಸಂಸದ್ ಸದಸ್ಯ ಸ್ಥಾನವನ್ನು ಶುಕ್ರವಾರ ಅನರ್ಹಗೊಳಿಸಲಾಗಿತ್ತು. ಈ ಬಗ್ಗೆ ಕೋಲಾರದಲ್ಲಿ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಅನರ್ಹ ಕುರಿತು ಜನರ ಮುಂದೆ ಹೇಳಿಕೊಳ್ಳೋದಕ್ಕೆ ಏನೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಂತ ಕನಸು ಕಾಣುತ್ತಿದ್ದಾರೆ. ಹಿಂದೆ ಮಾಡಿರುವ ಸಾಧನೆ ಹೇಳಿಕೊಳ್ಳೋದಕ್ಕೆ ಏನೂ ಇಲ್ಲ. ಗ್ಯಾರಂಟಿ ಕಾರ್ಡ್ ಗಳನ್ನು ಕೊಡುತ್ತಾ ಬರ್ತಿದ್ದಾರೆ. 50-60 ವರ್ಷ ಆಡಳಿತ ಮಾಡಿದ್ದು ಸಾಕಾಗಲಿಲ್ವಾ? ನಿಮ್ಮ ಗ್ಯಾರಂಟಿ ಕಾರ್ಡ್ ನಂಬೋದಕ್ಕೆ ಜನರು ಮೂರ್ಖರಲ್ಲ. ನೀಡಿದ ಭರವಸೆ ಪೂರ್ಣ ಮಾಡಿದಕ್ಕೆ ಬಿಜೆಪಿ ಗೆ ಜನ ವೋಟು ಹಾಕ್ತಾರೆ. ರಾಹುಲ್ ಗಾಂಧಿ ಹೇಳಿಕೆ ಕೇವಲ ಒಬ್ಬ ನಾಯಕನ ವಿರುದ್ಧ ಆಗಿರಲಿಲ್ಲ. ಒಂದು ಸಮುದಾಯದ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಹಿಂದುಳಿದ ಸಮುದಾಯದ ವಿರುದ್ಧ ಟೀಕೆ ಮಾಡಿ ಅವಮಾನ ಮಾಡಿದ್ದಾರೆ. ಇದಕ್ಕಾಗಿ ನ್ಯಾಯಾಲಯ ಅವರಿಗೆ ಶಿಕ್ಷೆ ನೀಡಿದೆ. ಸಹಜವಾಗಿ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ.
ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಭಿನ್ನಮತ!
ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವುದಕ್ಕೆ ಮುಂದಾಗಿದ್ದ ಕಾಂಗ್ರೆಸ್
ಬಿಜೆಪಿ ಪಕ್ಷ ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದೆ. ಕಾಂಗ್ರೆಸ್ ನ ಪೊಳ್ಳು ಭರವಸೆಗೆ ಮೂರು ಕಾಸಿನ ಬೆಲೆ ಇಲ್ಲ. ಹಿಂದೆ 5 ವರ್ಷ ಕಾಂಗ್ರೆಸ್ ಸಂಪೂರ್ಣ ಆಡಳಿತ ನಡೆಸಿದೆ. ವಿವಿಧ ಭಾಗ್ಯಗಳನ್ನು ಕೊಟ್ಟಿದ್ದೇವೆ ಅಂತ ತಮ್ಮ ಬೆನ್ನು ತಟ್ಟಿಕೊಂಡಿತ್ತು. ಅಧಿಕಾರಕ್ಕೆ ಬರೋದಿಲ್ಲ ಅಂತ ತಿಳಿದು ಸಮಾಜಗಳ ನಡುವೆ ವಿಷ ಬೀಜ ಬಿತ್ತಿತ್ತು. ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವುದಕ್ಕೆ ಮುಂದಾಗಿದ್ದು ರಾಜ್ಯದ ಜನತೆ ಮರೆತಿಲ್ಲ. ರಾಜ್ಯದ ಇತಿಹಾಸದಲ್ಲಿ ಆ ರೀತಿ ನಡೆದಿರಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆ ಮಟ್ಟಕ್ಕೆ ಇಳಿದಿದ್ದು ಜನ ಇನ್ನು ಮರೆತಿಲ್ಲ. ವಿಶ್ವನಾಯಕನಾಗಿ ಹೊರ ಹೊಮ್ಮಿರುವ ಮೋದಿ ಮೇಲೆ ಜನರಿಗೆ ವಿಶ್ವಾಸವಿದೆ ಎಂದಿದ್ದಾರೆ ಬಿ.ವೈ ವಿಜಯೇಂದ್ರ.