
ಬೆಂಗಳೂರು (ನ.01): ಈ ಬಾರಿ ವಿಜಯೇಂದ್ರ ಅವರ ಆಟ ನಡೆಯುತ್ತೋ, ನಮ್ಮ ಆಟ ನಡೆಯುತ್ತೋ ಎಂದು ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
"
ಬೆಂಗಳೂರಿನಲ್ಲಿ ಮತನಾಡಿದ ಕುಮಾರಸ್ವಾಮಿ, ಈಗಾಗಲೇ ವಿಜಯೇಂದ್ರ ಅವರ ಡ್ರಾಮಾ ಹಳಸಿದೆ. ವಿಜಯೇಂದ್ರನವರ ಆಟ ನಡೆಯುತ್ತಿರುವುದು ಹಣದಿಂದ. ವಿಜಯೇಂದ್ರ ದೊಡ್ಡ ಸಾಧನೆ ಮಾಡಿದ್ದಾರಾ?. ಇದು ಎಲ್ಲಾ ಸಮಯದಲ್ಲೂ ಉಪಯೋಗಕ್ಕೆ ಬರುವುದಿಲ್ಲ. ಅವರ ಡ್ರಾಮ ನಡೆಯುತ್ತೋ, ನಮ್ಮ ಡ್ರಾಮ ನಡೆಯುತ್ತೋ ಎಂದು ಚುನಾವಣೆ ಫಲಿತಾಂಶದಂದು ನೋಡೋಣ ಎಂದು ಸವಾಲು ಹಾಕಿದರು.
'ಸಿದ್ದರಾಮಯ್ಯಗೆ ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡುವ ಭೀತಿ'
ಅವರ ತಂದೆಯ ಸಹಿಯನ್ನು ಇವರೇ ಮಾಡಿಕೊಂಡು ಏನೇನು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅವರ ತಂದೆ ಹೆಸರಲ್ಲಿ ದುಡ್ಡು ಹೊಡೆದಿದ್ದಾರೆ. ಅದನ್ನು ತಂದು ಈಗ ಇಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಇದರಿಂದ ಏನೋ ಚುನಾವಣಾ ತಂತ್ರ ಮಾಡ್ತೀನಿ ಎಂದು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಶಿರಾ ಅಭಿವೃದ್ಧಿ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್‌ಡಿಕೆ, ಆಪರೇಷನ್ ಕಮಲದ ಹೆಸರಿನಲ್ಲಿ ಚುನಾವಣೆ ಮಾಡಿದ್ದೀರಿ. ಎಷ್ಟು ಕ್ಷೇತ್ರಗಳನ್ನು ನೀವು ಅಭಿವೃದ್ಧಿ ಮಾಡಿದ್ದೀರಿ? ನಿಮ್ಮ ಪಾಕೆಟ್ ತುಂಬಿಸಿಕೊಳ್ಳಲು ಅಭಿವೃದ್ಧಿ ಹೆಸರಲ್ಲಿ ಮತ ಕೇಳುತ್ತಿದ್ದೀರಿ. ತಾಲ್ಲೂಕಿನ ಅಭಿವೃದ್ಧಿ ಮಾಡುವುದು ಇವರ ಜಾಯಮಾನದಲ್ಲೇ ಇಲ್ಲ ಎಂದು ಟಾಂಗ್ ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.