ಬೈ ಎಲೆಕ್ಷನ್: ಮಸ್ಕಿ, ಬಸವಕಲ್ಯಾಣ ಕ್ಷೇತ್ರಕ್ಕೆ ಬಿಗ್ ಗಿಫ್ಟ್ ಕೊಟ್ಟ ಸಿಎಂ

By Suvarna News  |  First Published Nov 24, 2020, 7:49 PM IST

ಇನ್ನೇನು ಶೀಘ್ರದಲ್ಲಿಯೇ ಮಸ್ಕಿ, ಬಸವಕಲ್ಯಾಣ ಉಪಚುನಾವಣೆ ಘೋಷಣೆಯಾಗಲಿದ್ದು, ಕ್ಷೇತ್ರದ ಮತದಾರರ ಓಲೈಕೆಗೆ ಈಗಾಗಲೇ ಬಿಜೆಪಿ ಮುಂದಾಗಿದೆ. 


ಬೆಂಗಳೂರು (ನ.24):  ಬೀದರ್ ಜಿಲ್ಲೆಯ ಬಸವಕಲ್ಯಾಣ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದೆ. ಇನ್ನೂ ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ. ಅದಕ್ಕೂ ಮೊದಲೇ ಈ ಎರಡು ಕ್ಷೇತ್ರಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.  

ಪ್ರತಿ ಕ್ಷೇತ್ರಕ್ಕೆ 7500 ಮನೆಗಳ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದಾರೆ. ದೇವರಾಜು ಅರಸು ವಸತಿ ಯೋಜನೆಯಡಿ 2500 ಮನೆ ಹಾಗೂ ಪಿಎಂ ಆವಾಜ್​ ಯೋಜನೆಯಡಿ 5000 ಮನೆ ನಿರ್ಮಾಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಮತದಾರರ ಓಲೈಕೆಗೆ ಸರ್ಕಾರ ಮುಂದಾಗಿದೆ.

Latest Videos

undefined

ಉಪಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಮಸ್ಕಿಗೆ ದೀಪಾವಳಿ ಗಿಫ್ಟ್

ಈಗಾಗಲೇ ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣಾ ಗೆಲುವಿನಲ್ಲಿರುವ ಬಿಜೆಪಿಗೆ ಈ ಚುನಾವಣೆ ಕೂಡ ಪ್ರತಿಷ್ಠೆಯಾಗಿದೆ. ಈ ಹಿನ್ನಲೆಯಲ್ಲಿ ಮನೆ ಆಫರ್ ನೀಡಿದೆ. ಇತ್ತೀಚೆಗೆಷ್ಟೇ ಮಸ್ಕಿಗೆ ಆಗಮಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಕ್ಷೇತ್ರಕ್ಕೆ 6000 ಮನೆ ನೀಡುವುದಾಗಿ ಘೋಷಣೆ ಮಾಡಿ ಹೋಗಿದ್ದರು. ಅದರಂತೆ ಇದೀಗ ಸಿಎಂ ಬಿಎಸ್‌ವೈ ಆದೇಶ ಹೊರಡಿಸಿದ್ದಾರೆ.

click me!