ಕರ್ನಾಟಕದ ಎಲ್ಲೆಡೆ ಬಿಎಸ್ಪಿ ಸೋಲು: ಮಾಯಾವತಿ ತೀವ್ರ ಬೇಸರ

By Kannadaprabha NewsFirst Published May 24, 2023, 12:30 AM IST
Highlights

224 ಕ್ಷೇತ್ರಗಳ ವಿಧಾನಸಭೆಯಲ್ಲಿ 113 ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದ ಬಿಎಸ್‌ಪಿ ಕೇವಲ ಶೇ.0.31ರಷ್ಟು ಮತ ಪಡೆದುಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿತ್ತು. ಕಳೆದ ಸಲ ಪಕ್ಷ ಒಬ್ಬ ಶಾಸಕನನ್ನು ಹೊಂದಿತ್ತು.

ಲಖನೌ(ಮೇ.24): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಹುಜನ ಸಮಾಜ ಪಕ್ಷ ಸೋತಿರುವುದರ ಕುರಿತಾಗಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಂಗಳವಾರ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಪಕ್ಷದ ಅಡಿಪಾಯವನ್ನು ಗಟ್ಟಿ ಮಾಡುವಂತೆ ಕರೆ ನೀಡಿದ್ದಾರೆ.

ಚುನಾವಣೆಯಲ್ಲಿ ಪಕ್ಷ ಸೋತ ಕಾರಣ ಮಂಗಳವಾರ ಮಾಯಾವತಿ ಅವರು ಆತ್ಮಾವಲೋಕನ ಸಭೆ ನಡೆಸಿದರು. 224 ಕ್ಷೇತ್ರಗಳ ವಿಧಾನಸಭೆಯಲ್ಲಿ 113 ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದ ಬಿಎಸ್‌ಪಿ ಕೇವಲ ಶೇ.0.31ರಷ್ಟು ಮತ ಪಡೆದುಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸೋಲು ಅನುಭವಿಸಿತ್ತು. ಕಳೆದ ಸಲ ಪಕ್ಷ ಒಬ್ಬ ಶಾಸಕನನ್ನು ಹೊಂದಿತ್ತು.

ಕರ್ನಾಟಕ ಕಾಂಗ್ರೆಸ್‌ನದ್ದು ಜಾತಿವಾದಿ ಸರ್ಕಾರ: ಮಾಯಾವತಿ

‘ಪ್ರತಿ ರಾಜ್ಯದಲ್ಲೂ ಬಿಎಸ್‌ಪಿಯ ಸಿದ್ಧತೆ ಉತ್ತಮವಾಗಿರಬೇಕು. ಚುನಾವಣೆಯ ಸಮಯದಲ್ಲಿ ರಾಜ್ಯದ ಜನರ ಮನಸ್ಥಿತಿ ಏನೇ ಇರಲಿ ಪಕ್ಷ ಸಿದ್ಧವಾಗಿರಬೇಕು. ಬಿಎಸ್‌ಪಿಯ ಸರ್ಕಾರ ರಚನೆಯಾದಾಗ ಮಾತ್ರ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮಾನವೀಯ, ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣಗಳನ್ನು ಮುನ್ನೆಲೆಗೆ ತರಲು ಸಾಧ್ಯ ಎಂದು ಮಾಯಾವತಿ ಹೇಳಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

click me!