ಬೆಂಗಳೂರು: EVM ಬಂದ ನಂತರ ಬಿಎಸ್‌ಪಿಗೆ ಸೋಲಾಯಿತು: ಮಾಯಾವತಿ!

By Gowthami K  |  First Published May 5, 2023, 6:38 PM IST

ಬಿಎಸ್ ಪಿ ಅಭ್ಯರ್ಥಿಗಳ ಪರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರಚಾರ ನಡೆಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಎಸ್ ಪಿ ಚುನಾವಣಾ ಪ್ರಚಾರ ಸಭೆ‌ ನಡೆಸಿದ್ದಾರೆ.


ಬೆಂಗಳೂರು (ಮೇ.5): ಬಿಎಸ್ ಪಿ ಅಭ್ಯರ್ಥಿಗಳ ಪರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಪ್ರಚಾರ ನಡೆಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಎಸ್ ಪಿ ಚುನಾವಣಾ ಪ್ರಚಾರ ಸಭೆ‌ ನಡೆಸಿದ್ದಾರೆ. ರಾಜ್ಯದಲ್ಲಿ ಅಖಂಡ ಶ್ರೀನಿವಾಸ್  ಮೂರ್ತಿ ಸೇರಿದಂತೆ 131 ಅಭ್ಯರ್ಥಿಗಳು ಬಿಎಸ್ ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದು,  ಅಭ್ಯರ್ಥಿ ಪರ ಮತಯಾಚನೆ ನಡೆಸಿದ ಮಾಯಾವತಿ, EVM ಬಗ್ಗೆ ಮತ್ತೆ ಅಪಸ್ವರ ಎತ್ತಿದ್ದಾರೆ. ಈ ಹಿಂದೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುತ್ತಿತ್ತು. ಆಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. EVM ಬಂದ ನಂತರ ನಮಗೆ ಅವಕಾಶ ಸಿಕ್ಕಿಲ್ಲ. ಇದಕ್ಕೆ ಬೇಜರಾಗುವ ಅಗತ್ಯವಿಲ್ಲ. ಒಂದಲ್ಲ ಒಂದು ದಿನ EVM ಮತ್ತೆ ಸ್ಟಾಪ್ ಆಗಲಿದೆ. EVM ವ್ಯವಸ್ಥೆಯ ಸತ್ಯಂಶ ಹೊರಗಡೆ ಬರಲಿದೆ. ಬೇರೆ ಬೇರೆ ದೇಶಗಳಲ್ಲೂ ಈ ರೀತಿಯಾಗಿದೆ. EVM ವ್ಯವಸ್ಥೆ ಅಂತ್ಯವಾಗಲಿದೆ ಎಂದಿದ್ದಾರೆ.

2014 ರಲ್ಲಿ ಕಾಂಗ್ರೆಸ್ ಸೋಲಿಗೆ ಭ್ರಷ್ಟಾಚಾರ ಕಾರಣ ಅಂತ ಅಂದುಕೊಂಡಿದ್ದೆವು. ಆದರೆ ನೈಜ ಕಾರಣವೇ ಬೇರೆ. EVM ದುರ್ಬಳಕೆಯಿಂದಲೇ ಕಾಂಗ್ರೆಸ್ ಗೆ ಸೋಲಾಯ್ತು ಬಿಜೆಪಿ ಅಧಿಕಾರಕ್ಕೆ ಬಂತು ಎಂದಿದ್ದಾರೆ.

Tap to resize

Latest Videos

ಕಳೆದ ಬಾರಿ ಅತಿ ಹೆಚ್ಚು ಮತಗಳಿಂದ ಗೆದ್ದ ಅಖಂಡ ಶ್ರೀನಿವಾಸ್ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಅಖಂಡ ಶ್ರೀನಿವಾಸ್ ಮೂರ್ತಿಗೆ ಕಾಂಗ್ರೆಸ್ ಮೋಸ ಮಾಡಿದೆ. ಈ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರು. ಇಂತಹ ಸಮಯದಲ್ಲಿ ನಾವು ಪಕ್ಷಕ್ಕೆ ಆಹ್ವಾನ ನೀಡಿದೆವು. ಬಿಎಸ್ ಪಿ ಪಕ್ಷ ಇರುವಾಗ ನೀವು ಯಾಕೆ ಚಿಂತೆ ಮಾಡ್ತೀರಾ ಎಂದು ಹೇಳಿದೆವು. ಈ ಹಿನ್ನೆಲೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಬಿಎಸ್ ಪಿ ಪಕ್ಷಕ್ಕೆ ಬಂದಿದ್ದಾರೆ. ಆನೆ ಗುರುತಿಗೆ ಮತ ನೀಡುವ ಮೂಲಕ ಅಖಂಡರನ್ನ ಗೆಲ್ಲಿಸಿ ಎಂದು ಮಾಯಾವತಿ ಮನವಿ ಮಾಡಿದ್ದಾರೆ.

ಬಿಜೆಪಿಗೆ ಯಾವುದೇ ಅಜೆಂಡಾ ಇಲ್ಲ. ಬಿಜೆಪಿ ಕೇವಲ ಧಾರ್ಮಿಕ ಭಾವನೆಯನ್ನ ಚುನಾವಣೆಗೆ ಬಳಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ಬರ್ತಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸಹ ಕಣದಲ್ಲಿದ್ದಾರೆ. ಪಕ್ಷದಿಂದ ಯಾವುದೇ ಭೇದ ಭಾವ ಇಲ್ಲದೆ ಟಿಕೆಟ್ ನೀಡಲಾಗಿದೆ ಎಂದರು.

Karnataka election 2023: ಇನ್ನೂ ಈಡೇರದ ಭರವಸೆ, ಬಿಸರಳ್ಳಿ ಗ್ರಾಮಸ್ಥರಿಂದ ಮತದಾನ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದೆ ಆದ್ರೆ ಈ ಎರಡು ಸರ್ಕಾರಗಳ ವಿರುದ್ಧ ಜನರಿದ್ದಾರೆ. ಕೇಂದ್ರದಲ್ಲಿರುವ ಸರ್ಕಾರ ಎಲ್ಲಾ ವಿಪಕ್ಷಗಳನ್ನ ಮಣಿಸುವ ಕೆಲಸ ಮಾಡ್ತಿದ್ದಾರೆ. ರಾಜ್ಯದಲ್ಲೂ ಸಹ ಇದನ್ನೇ ಮುಂದುವರೆಸಿದೆ‌. ಸಂವಿಧಾನ ಶಿಲ್ಪ ಡಾ. ಬಿಆರ್ ಅಂಬೇಡ್ಕರ್ ವಿಚಾರಧಾರೆಯ ಮೂಲಕ ನಾವು ಚುನಾವಣೆಯನ್ನ ಎದುರಿಸುತ್ತಿದ್ದೇವೆ‌. ದೇಶದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ಸರಿಯಾಗಿ ಮಾನ್ಯತೆ ಸಿಗುತ್ತಿಲ್ಲ. ಈಗಿನ ಬಿಜೆಪಿ ಸರ್ಕಾರವಿರಲಿ ಹಿಂದಿನ ಕಾಂಗ್ರೆಸ್ ಸರ್ಕಾರವಾಗಲಿ ಎರಡು ಸರ್ಕಾರಗಳು ದಲಿತರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ರಾಜ್ಯದಲ್ಲಿ ಸಹ ಸರಿಯಾದ ಕ್ರಮದಲ್ಲಿ ಮೀಸಲಾತಿ ಹಂಚಿಕೆಯಾಗಿಲ್ಲ.

Modi Bengaluru Roadshow: ಮೋದಿ ರೋಡ್‌ ಶೋ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ದೇಶದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಟ್ಟಿದೆ. ಇವತ್ತು ಸಹ ಇವರ ಆರ್ಥಿಕ ಪರಿಸ್ಥಿತಿ ಮೇಲೆ ಬರಲೇ ಇಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ನಮ್ಮನ್ನ ಆಶೀರ್ವಾದಿಸಿದರು. ಅಲ್ಲಿ ನಾವು  ಉತ್ತಮ ಆಡಳಿತ ನೀಡಿದೆವು. ಬಿಎಸ್ ಪಿ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಶಕ್ತಿ ವೃದಿಯಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

click me!