ಯಡಿಯೂರಪ್ಪನವರ ರಾಜಕಾರಣದ ಜೊತೆಗಾರ ಕೊರೋನಾದಿಂದ ನಿಧನ

By Suvarna News  |  First Published Sep 25, 2020, 5:35 PM IST

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕಾರಣದ ಆರಂಭದ ಜೊತೆಗಾರ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.


ಶಿವಮೊಗ್ಗ, (ಸೆ.25): ಯಡಿಯೂರಪ್ಪನವರ ರಾಜಕಾರಣದ ಆರಂಭದ ದಿನದಿಂದಲೂ ಜೊತೆಗಿದ್ದ ದಾನೇರ್ ರುದ್ರಪ್ಪ ಅವರು ನಿಧನರಾಗಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ  ದಾನೇರ್ ರುದ್ರಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು (ಶುಕ್ರವಾರ) ಕೊನೆಯುಸೆರೆಳೆದಿದ್ದಾರೆ.

Tap to resize

Latest Videos

ಮಹಾಮಾರಿ ಕೊರೋನಾಗೆ ಬಿಪಿ, ಶುಗರ್‌ ರೋಗಿಗಳೇ ಅಧಿಕ ಬಲಿ!
 
ರಾಜಕಾರಣದ ಆರಂಭದ ದಿನದಿಂದಲೂ ಯಡಿಯೂರಪ್ಪನವರ ಜೊತೆಗಿದ್ದ ದಾನೇರ್ ರುದ್ರಪ್ಪನವರು ತೊಗರ್ಸಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು.

 ಅಲ್ಲದೇ, ಶಿಕಾರಿಪುರ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಗಿ ಹಾಗೂ ಪಟ್ಟಣದ ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ನಡೆಯಿತ್ತಿರುವ ಸೇವಾ ವಿಕಾಸ ಶಾಲೆಯ ಅಧ್ಯಕ್ಷರಾಗಿ ದಾನೇರ್ ರುದ್ರಪ್ಪನವರು ಸೇವೆ ಸಲ್ಲಿಸಿದ್ದರು.

ಬಿ.ಎಸ್.ಯಡಿಯೂರಪ್ಪನವರ ರಾಜಕಾರಣದ ಆರಂಭದ ದಿನದಿಂದಲೂ ಯಡಿಯೂರಪ್ಪನವರ ಜೊತೆಗಿದ್ದ ದಾನೇರ್ ರುದ್ರಪ್ಪ ನವರು ಕೋವಿಡ್ ಸೋಂಕಿಗೆ ತುತ್ತಾಗಿ,...

Posted by Raghavendra B Y Vijayendra on Friday, September 25, 2020

ಮೊನ್ನೇ ಅಷ್ಟೇ ಬಿಜೆಪಿ ರಾಜ್ಯಸಭಾ ಸದಸ್ಯರಾದ ಅಶೋಕ್ ಗಸ್ತಿ, ತದನಂತ ಕೇಂದ್ರ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ ಹಾಗೂ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಇದೇ ಕೊರೋನಾ ಮಹಾಮಾರಿ ಬಲಿ ಪಡೆದುಕೊಂಡಿದೆ. ಇದೀಗ ಬಿಎಸ್‌ವೈ ಅವರ ಜೊತೆಗಾರ ದಾನೇರ್ ರುದ್ರಪ್ಪ ಸಹ ಕೊರೋನಾಗೆ ಉಸಿರು ಚೆಲ್ಲಿದ್ದಾರೆ.

click me!