ಅಧಿಕಾರ ಹಂಚಿಕೆ: ಮುಖ್ಯಮಂತ್ರಿ, ಡಿಸಿಎಂ ಇಬ್ಬರೂ ನಮಗೆ ಮುಖ್ಯ, ಸಚಿವ ಭೈರತಿ ಸುರೇಶ್

Published : Jan 22, 2025, 05:30 AM IST
ಅಧಿಕಾರ ಹಂಚಿಕೆ: ಮುಖ್ಯಮಂತ್ರಿ, ಡಿಸಿಎಂ ಇಬ್ಬರೂ ನಮಗೆ ಮುಖ್ಯ, ಸಚಿವ ಭೈರತಿ ಸುರೇಶ್

ಸಾರಾಂಶ

ನಮ್ಮ ಗಮನ ಪಾಲಿಟಿಕ್ಸ್ ಅಲ್ಲ ರಾಜ್ಯದ ಅಭಿವೃದ್ದಿಯಷ್ಟೇ, ಸಿಎಂ ಹಾಗೂ ಡಿಸಿಎಂ ಇಬ್ಬರೂ ಸೇರಿ ರಾಜ್ಯವನ್ನು ಪ್ರಗತಿ ಕೊಂಡೋಯ್ಯುತ್ತಿದ್ದೇವೆ ಎಂದು ಹೇಳಿದ ಸಚಿವ ಬಿ.ಎಸ್.ಸುರೇಶ್

ಕೋಲಾರ(ಜ.22):  ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಪಾಲಿಟಿಕ್ಸ್ ನಡೆಯುತ್ತಿಲ್ಲ, ಪವರ್ ಶೇರಿಂಗ್, ಪವರ್ ಕೇರಿಂಗ್ ಯಾವುದೂ ಇಲ್ಲ, ಬರೀ ರಾಜ್ಯದ ಅಭಿವೃದ್ದಿ ಮಾತ್ರಗೆ ಹೊತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.

ನಗರದ ಗಂಗಮ್ಮನ ಪಾಳ್ಯ ಸರ್ಕಾರಿ ಕಿರಿಯ ಶಾಲೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಗಮನ ಪಾಲಿಟಿಕ್ಸ್ ಅಲ್ಲ ರಾಜ್ಯದ ಅಭಿವೃದ್ದಿಯಷ್ಟೇ, ಸಿಎಂ ಹಾಗೂ ಡಿಸಿಎಂ ಇಬ್ಬರೂ ಸೇರಿ ರಾಜ್ಯವನ್ನು ಪ್ರಗತಿ ಕೊಂಡೋಯ್ಯುತ್ತಿದ್ದೇವೆ ಎಂದು ಹೇಳಿದರು.

ಮುಡಾ ಹಗರಣ: ಸಚಿವ ಬೈರತಿ ಸುರೇಶ್ ಕಚೇರಿಗೂ ಬಂತು ಇ.ಡಿ ನೋಟಿಸ್‌

ಹೈಕಮಾಂಡ್‌ ಸೂಚನೆ ಪಾಲನೆ

ಊಟಕ್ಕೆ ಸೇರುವುದು ಸಹ ಡಿನ್ನರ್ ಪಾಲಿಟಿಕ್ಸಾ, ಡಿನ್ನರ್ ಮಾಡುವುದಕ್ಕೆ ನಮ್ಮಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಪ್ರತ್ಯೇಕ ಸಭೆಗಳನ್ನ ಮಾಡದಂತೆ ಎಐಸಿಸಿ ಸೂಚನೆ ನೀಡಿದೆ, ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

ಡಿಸಿಎಂ ಒಂಟಿಯಾಗಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳು ಎಷ್ಟು ಮುಖ್ಯಾನೋ ಡಿಸಿಎಂ ಸಹ ಅಷ್ಟೇ ಮುಖ್ಯ, ಅಧಿಕಾರ ಹಂಚಿಕೆ ಕುರಿತು ನನಗೆ ಗೊತ್ತಿಲ್ಲ, ಯಾರಿಗೆ ಯಾವ್ಯಾವ ಸ್ಥಾನ, ಅಧಿಕಾರ ಕೊಡಬೇಕು ಅನ್ನೋದು ಹೈ ಕಮಾಂಡ್‌ಗೊತ್ತು, ನಾವೆಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರುತ್ತೇವೆ ಎಂದು ತಿಳಿಸಿದರು.

ಲೋಕಾಯುಕ್ತ ತನಿಖೆಯಲ್ಲಿ ಹಸಕ್ಷೇಪ ಮಾಡಿಲ್ಲ, ನಾನು ಯಾವ ತಪ್ಪು ಮಾಡಿಲ್ಲ, ಯಾರಿಗೂ ಹೆದರಲ್ಲ: ಬೈರತಿ ಸುರೇಶ್

ಸಂಪುಟ ವಿಸ್ತರಣೆ ಇಲ್ಲ

ಸಚಿವ ಸ್ಥಾನದ ಆಕಾಂಕ್ಷೆಗಳು ಕೋಲಾರಲ್ಲೂ ಇದ್ದಾರೆ, ಕೋಲಾರದಲ್ಲಿ ನಾಲ್ಕು ಜನ ಶಾಸಕರು ಹಾಗೂ ಇಬ್ಬರು ಪರಿಷತ್ ಸದಸ್ಯರಿದ್ದಾರೆ, ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದ ಸಚಿವರು, ಒಬ್ಬರಿಗೆ ಒಂದೇ ಹುದ್ದೆ ಕುರಿತು ಪ್ರತಿಕ್ರಿಯಿಸದೆ ನುಣಚಿಕೊಂಡರು.

ಕೋಲಾರ ರಿಂಗ್ ರೋಡ್ ನೀಡಿದ್ದ ಅನುದಾನ ಕೇಂದ್ರ ಸರ್ಕಾರ ವಾಪಾಸ್ ಪಡೆದಿದೆ, ರಾಜ್ಯದ ಅನುದಾನದಲ್ಲೆ ರಿಂಗ್ ರೋಡ್ ನಿರ್ಮಾಣ ಮಾಡ್ತೇವೆ, ಮುಂದಿನ ಬಜೆಟ್ ನಲ್ಲಿ ಕೋಲಾರಕ್ಕೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಲಾಗುವುದು ಎಂದು ಸಚಿವ ಸುರೇಶ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ