ಬಿಜೆಪಿ ಮುಖಂಡರು ಪಾಕಿಸ್ತಾನ ಮತ್ತು ಕಾಂಗ್ರೆಸ್ ಪಕ್ಷವನ್ನು ದೂರುವುದನ್ನು ಬಿಟ್ಟರೆ ಬೇರಾವ ಕೆಲಸ ಮಾಡುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಟೀಕಿಸಿದರು.
ಅಳ್ನಾವರ (ಜೂ.7) : ಬಿಜೆಪಿ ಮುಖಂಡರು ಪಾಕಿಸ್ತಾನ ಮತ್ತು ಕಾಂಗ್ರೆಸ್ ಪಕ್ಷವನ್ನು ದೂರುವುದನ್ನು ಬಿಟ್ಟರೆ ಬೇರಾವ ಕೆಲಸ ಮಾಡುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಟೀಕಿಸಿದರು.
ಪಟ್ಟಣದ ಉಮಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆದರೆ ವಿಧಾನಸಭೆ ಚುನಾವಣೆ ವೇಳೆ ಹಿಂದಿನ ಒಂದೇ ದಿನ 3.5 ಸಾವಿರ ಕೋಟಿ ಹಣ ಖರ್ಚು ಮಾಡಿದರೂ ಅವರಿಗೆ ಅಧಿಕಾರಕ್ಕೆ ಬರಲಿಕ್ಕಾಗಲಿಲ್ಲ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಐದು ಗ್ಯಾರಂಟಿಗಳ ಬಗ್ಗೆ ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಇನ್ನೇರಡು ತಿಂಗಳಲ್ಲಿ .60 ಸಾವಿರ ಕೋಟಿ ವೆಚ್ಚದಲ್ಲಿ 5 ಗ್ಯಾರಂಟಿಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲ್ಲಿದ್ದು 1.50 ಕೋಟಿ ಯಜಮಾನಿಯರು ಗೃಹಲಕ್ಷ್ಮೇ ಫಲಾನುಭವಿಗಳಾಗಲಿದ್ದಾರೆ ಎಂದರು.
undefined
ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಅಧಿಕಾರಿಗಳ ಜೊತೆ ಮೋದಿ ಸಭೆ, ಘಟನಾ ಸ್ಥಳಕ್ಕೆ ಸಂತೋಷ್ ಲಾಡ್ ಭೇಟಿ
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಸರ್ಕಾರಗಳು ಅಧಿಕಾರದಲ್ಲಿದ್ದಾಗ ವಿದ್ಯುತ್ ದರ ಹೆಚ್ಚಳವಾಗಿದೆ. ನಾವು 5 ಕೋಟಿ ಜನಕ್ಕೆ ವಿದ್ಯುತ್ ಉಚಿತವಾಗಿ ನೀಡುತ್ತಿರುವದನ್ನು ವಿರೋಧಿಸುವದರ ಸಲುವಾಗಿ ಈ ರೀತಿ ಪ್ರತಿಭಟಣೆಗಳನ್ನು ಮಾಡಿಸುತ್ತಿದ್ದಾರೆ. ಕೇಂದ್ರದ ಚುನಾವಣೆ ವೇಳೆ ಪ್ರತಿಯೊಬ್ಬ ನಾಗರಿಕನಿಗೂ ತಲಾ .5 ಲಕ್ಷ ಮತ್ತು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಮಾಡುವದಾಗಿ ಮೋದಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದರು. 2014ರಲ್ಲಿ 55 ಲಕ್ಷ ಕೋಟಿ ಇರುವ ದೇಶದ ಸಾಲ ಈಗ .165 ಕೋಟಿಗೆ ಬಂದು ನಿಂತಿದೆ. ಈ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧಾರವಾಡ: ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಚಿವ ಲಾಡ್ ಫುಲ್‌ಕ್ಲಾಸ್..!
ಈ ವೇಳೆ ರೂಪೇಶ ಗುಂಡಕಲ್ಲ, ಸುರೇಶಗೌಡ ಕರಿಗೌಡರ, ಮಲ್ಲನಗೌಡ ಪಾಟೀಲ, ನಿಂಗಪ್ಪ ಬೇಕ್ವಾಡಕರ, ಅಮೂಲ ಗುಂಜಿಕರ, ಸುವರ್ಣ ಕಡಕೋಳ, ಭಾಗ್ಯವತಿ ಕುರುಬರ, ಮುಸ್ತಾಕಹ್ಮದ ತೇಗೂರ, ಪರಶುರಾಮ ಬೇಕನೆಕರ, ಹಸನ್‌ಅಲಿ ಶೇಖ, ಶ್ರೀಕಾಂತ ಗಾಯಕವಾಡ, ಸತ್ತಾರ ಭಾತಖಂಡೆ ಇದ್ದರು.