ಪ್ರತಿಪಕ್ಷದಿಂದಲ್ಲ, ನಮ್ಮವರಿಂದಲೇ ಬೆನ್ನಿಗೆ ಚೂರಿ: ಬಿ.ಕೆ.ಹರಿಪ್ರಸಾದ್‌

By Kannadaprabha NewsFirst Published Dec 7, 2023, 11:30 PM IST
Highlights

ತಾವು ರಾಜಕೀಯದಲ್ಲಿ ಇದ್ದು 49 ವರ್ಷವಾಗಿದೆ, ಎಂದೂ ಕೂಡ ಪ್ರತಿಪಕ್ಷದಿಂದ ನನಗೆ ಯಾವುದೇ ತೊಂದರೆ ಆಗಲಿಲ್ಲ, ಇ.ಡಿ, ಐಟಿ ದಾಳಿ ಆಗಲಿಲ್ಲ, ಆದರೆ ನಮ್ಮವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ಆಯಿತು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 

ವಿಧಾನ ಪರಿಷತ್‌ (ಡಿ.07): ತಾವು ರಾಜಕೀಯದಲ್ಲಿ ಇದ್ದು 49 ವರ್ಷವಾಗಿದೆ, ಎಂದೂ ಕೂಡ ಪ್ರತಿಪಕ್ಷದಿಂದ ನನಗೆ ಯಾವುದೇ ತೊಂದರೆ ಆಗಲಿಲ್ಲ, ಇ.ಡಿ, ಐಟಿ ದಾಳಿ ಆಗಲಿಲ್ಲ, ಆದರೆ ನಮ್ಮವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ಆಯಿತು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 

ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಧನ್ಯವಾದ ಹೇಳಲು ಅವಕಾಶ ಸಿಗದ ಕಾರಣ ಇಂದು ಸಭಾಪತಿಗಳಿಂದ ವಿಶೇಷ ಅನುಮತಿ ಪಡೆದು ಮಾತನಾಡಿದ ಅವರು, ಪ್ರತಿಪಕ್ಷದ ನಾಯಕನಾಗಿದ್ದ ವೇಳೆ ಬಿಜೆಪಿಯ ಸಿದ್ಧಾಂತ, ತತ್ವದ ವಿರುದ್ಧ ಇದ್ದೇನೆ, ಆದರೆ ವ್ಯಕ್ತಿಗತವಾಗಿ ಯಾರ ವಿರುದ್ಧ ಅಲ್ಲ, ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ ಸದಸ್ಯರು ಸಹ ತಮಗೆ ಸಹಕರಿಸಿದರು. ಹಾಗೇ ನೋಡಿದರೆ ಪ್ರತಿಪಕ್ಷದಿಂದ ನನಗೆ ಯಾವುದೇ ತೊಂದರೆ ಆಗಿಲ್ಲ, ಆದರೆ ನಮ್ಮವರು ಎನಿಸಿಕೊಂಡವರಿಂದಲೇ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯಿತು ಎಂದರು.

Latest Videos

ಪಂಚರಾಜ್ಯ ಚುನಾವಣೆ-ಕಾಂಗ್ರೆಸ್ಸಿಗೆ ಕರ್ನಾಟಕವೇ ಎಟಿಎಂ: ವಿಶ್ವೇಶ್ವರ ಹೆಗಡೆ ಕಾಗೇರಿ

ಈ ಮಾತು ಹೇಳುತ್ತಿದ್ದಂತೆ ಜಿಜೆಪಿಯ ಎನ್‌. ರವಿಕುಮಾರ್‌ ಅವರು ಕೊನೆಗೂ ಸತ್ಯವನ್ನು ನೀವು ಹೇಳಿದಿರಿ ಎಂದರೆ, ಜೆಡಿಎಸ್‌ನ ಎಸ್.ಎಲ್‌. ಭೋಜೆಗೌಡ ಅವರು ಹರಿಪ್ರಸಾದ್‌ ತಮ್ಮ ಹೃದಯದ ಅಂತರಾಳದ ಮನಸಿನ ನೋವು ಹೇಳಿಕೊಂಡಿದ್ದಾರೆ ಎಂದು ಕಾಲು ಎಳೆದರು. ಇದಕ್ಕೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಮತ್ತಿತರರು ನೀವು (ಬಿಜೆಪಿ ಸದಸ್ಯರು) ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ತಿರುಗೇಟು ನೀಡಿದರೆ ಮತ್ತೊಬ್ಬ ಸದಸ್ಯರು ಯತ್ನಾಳ ಅವರು ಹೊರಗಡೆ ಎಷ್ಟೊಂದು ಮಾತನಾಡುತ್ತಿದ್ದಾರೆ, ಮೊದಲು ಆ ಬಗ್ಗೆ ಹೇಳಿ ಎಂದು ತಿರುಗೇಟು ನೀಡಿದರು.

ಶಾಲಾ ಬಾಂಬ್‌ ಬೆದರಿಕೆ ಹಿಂದೆ ಬಿಜೆಪಿ ಕೈವಾಡ: ‘ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಗಳ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿರುವುದರಿಂದ ಹಿಂದೆ ಬಿಜೆಪಿ ಕೈವಾಡ ಇದೆ. ಬಿಜೆಪಿ ಯಾವಾಗ ಸೋಲುತ್ತದೆಯೋ ಅಥವಾ ಮುಂದೆ ಸೋಲಲಿದೆ ಎಂದು ಗೊತ್ತಾಗುತ್ತದೋ.. ಆಗ ಹೀಗೆಲ್ಲಾ ಆಗುತ್ತದೆ’ ಎಂದು ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವಾಗ ಸೋಲುತ್ತದೆ ಎಂಬುದು ಗೊತ್ತಾಗುತ್ತದೆಯೋ ಆಗ ಏನಾದರೂ ಒಂದು ಆಗುತ್ತದೆ. ಗೋಧ್ರಾ ಹತ್ಯಾಕಾಂಡ, ಪುಲ್ವಾಮಾದಂತಹ ಘಟನೆಗಳು ನಡೆಯುತ್ತವೆ. 

ಶಾಸಕ ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ: ವಿ.ಸೋಮಣ್ಣ

ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿರುವುದು ಸಹ ಇದರ ಭಾಗವೇ. ಜನರ ಗಮನ ಬೇರೆಡೆ ಸೆಳೆಯಲು ಇಂತಹ ತಂತ್ರ ಮಾಡುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಡಿ.ಕೆ. ಶಿವಕುಮಾರ್ ವಿರುದ್ಧ ಕಾನೂನು ಬಾಹಿರವಾಗಿ ವಹಿಸಿದ್ದ ಸಿಬಿಐ ತನಿಖೆಯನ್ನು ಸರ್ಕಾರ ಹಿಂಪಡೆದಿದೆ. ಇದೇ ರೀತಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ 25 ಪ್ರಕರಣಗಳು ಇದ್ದವು. ಅದರಲ್ಲಿ ಒಂದು ಕೊಲೆ ಪ್ರಕರಣವೂ ಇತ್ತು. ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಮೊದಲ ಸಚಿವ ಸಂಪುಟದಲ್ಲೇ ಪ್ರಕರಣಗಳನ್ನು ಹಿಂಪಡೆದರು. ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

click me!