ಸಾವು-ನೋವಿನಲ್ಲೂ ಬಿಜೆಪಿ ರಾಜಕಾರಣ ಸರಿಯಲ್ಲ: ಸಚಿವ ಚಲುವರಾಯಸ್ವಾಮಿ

Kannadaprabha News   | Kannada Prabha
Published : Jun 07, 2025, 06:45 PM IST
n chaluvarayaswamy

ಸಾರಾಂಶ

ಆರ್‌ಸಿಬಿ ವಿಜಯೋತ್ಸವ ಆಚರಣೆ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ತೀರಾ ನೋವಿನ ಸಂಗತಿ. ಇಂತಹ ಸಾವು-ನೋವಿನಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ (ಜೂ.07): ಆರ್‌ಸಿಬಿ ವಿಜಯೋತ್ಸವ ಆಚರಣೆ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ತೀರಾ ನೋವಿನ ಸಂಗತಿ. ಇಂತಹ ಸಾವು-ನೋವಿನಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲವೊಮ್ಮೆ ಎಮೋಷನಲಿ ಇಂತಹ ಘಟನೆಗಳು ಆಗುತ್ತದೆ. ಬೇರೆ ಘಟನೆ ಉದಾಹರಣೆ ಕೊಟ್ಟು ಈ ಘಟನೆ ಸಮರ್ಥಿಸಿಕೊಳ್ಳಲ್ಲ. ಆದರೆ, 11ಜನರ ಸಾವು ನಮ್ಮೆಲ್ಲರಿಗೂ ನೋವು ತಂದಿದೆ. ನಾವು ಏನೇ ಮಾಡಿದ್ರು, ಕುಟುಂಬಗಳಿಗೆ ಅವರ ಮಕ್ಕಳು ತಂದು ಕೊಡಲು ಆಗಲ್ಲ. ಎಲ್ಲಿ ಎಡವಿದ್ವಿ? ಯಾವ ತೀರ್ಮಾನದಲ್ಲಿ ತಪ್ಪಾಗಿದೆ ಅನ್ನೋದು ಒಂದು ಕಡೆ.

ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೆಲವು ಮಾಹಿತಿ ಕೊಡುವುದರಲ್ಲಿ ವಿಫಲವಾಗಿದೆ‌ ಅದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕ್ಯಾಬಿನೆಟ್‌ನಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಅಮಾನತು ತೀರ್ಮಾನ ಮಾಡಲಾಗಿದೆ. ಪೊಲೀಸರು ಕೆಟ್ಟವರಲ್ಲ, ಒಳ್ಳೆಯ ಕೆಲಸ ಮಾಡಿದ್ದವರೇ. ಈ ಘಟನೆ ಎಲ್ಲರಿಗೂ ನೋವು ತಂದಿದೆ. ಅಮಾನುತುಗೊಳಿಸುವುದೇ ಅಂತಿಮ ಪರಿಹಾರವಲ್ಲ. ಹಾಗಂತ ಯಾರನ್ನು ಸರಿ ಎನ್ನುವ ಪ್ರಶ್ನೆಯೂ ಇಲ್ಲ. ಇಂತಹ ಸಾವು-ನೋವಲ್ಲ ರಾಜಕಾರಣ ಮಾಡುವವರಿಗೆ ಏನು ಹೇಳಲು ಆಗುತ್ತದೆ. ದೇವರು ಅವರಿಗೆ ಒಳ್ಳೆ ಬುದ್ದಿ ಕೊಡಲಿ ಎಂದು ನುಡಿದರು.

ಬಿಜೆಪಿ-ಜೆಡಿಎಸ್‌ಗೆ ರಾಜಕಾರಣ ಮುಖ್ಯ, ಸಾವು ನೋವು ಮುಖ್ಯವಲ್ಲ. ಸದನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಆಗ ಈ ಹಿಂದೆ ಅವರ ಕಾಲದಲ್ಲಾದ ಘಟನೆಗಳ ಬಗ್ಗೆ ಹೇಳುತ್ತೇವೆ. ಆಗ ಯಾರು ಎ-1, ಎ-2 ಆಗಿದ್ದರು, ಹೇಗೆ ನಡೆದುಕೊಂಡಿದ್ದರು ಎಂದೆಲ್ಲಾ ಹೇಳುತ್ತೇವೆ ಎಂದು ಸವಾಲು ಹಾಕಿದರು. ಈ ಸಂಧರ್ಭದಲ್ಲಿ ಟೀಕೆಗೆ ಟೀಕೆಗೆ ಉತ್ತರವಲ್ಲ. ನಮ್ಮ ಸರ್ಕಾರದ ಬಂದಾಗಿನಿಂದಲೂ ಅವರಿಗೆ ಸಮಾಧಾನ ಇಲ್ಲ. ಕೂತರೇ ನಿಂತರೇ ರಾಜೀನಾಮೆ ಕೇಳುತ್ತಾರೆ. ಜನ ಆಯ್ಕೆ ಮಾಡಿದ್ದಾರೆ, ಅಧಿಕಾರ ಮಾಡುತ್ತಿದ್ದೇವೆ. ಅವರಿಗೆ ಜನರ ಆಯ್ಕೆಯನ್ನು ಗೌರವಿಸುವ ಬುದ್ದಿಯಿಲ್ಲ ಎಂದು ಕಟುವಾಗಿ ಹೇಳಿದರು.

ಎಸ್‌ಎಂಕೆ ದತ್ತಿನಿಧಿಗೆ ಚೆಕ್‌ ವಿತರಣೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ೫ ಲಕ್ಷ ರು.ಗಳ ದತ್ತಿನಿಧಿ ಸ್ಥಾಪಿಸಿದ್ದಾರೆ. ಎಸ್‌ಎಂಕೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಹಾಗೂ ಇತರೆ ಸಮಾಜಮುಖಿ ಕಾರ‍್ಯಕ್ರಮಗಳಿಗೆ ದತ್ತಿಯ ಬಡ್ಡಿ ಹಣವನ್ನು ಬಳಸುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಆಪ್ತರಾದ ಮಂಡ್ಯ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಕಾಂಗ್ರೆಸ್ ಮುಖಂಡ ಕಂಬದಹಳ್ಳಿ ಪುಟ್ಟಸ್ವಾಮಿ ಅವರು ಸಚಿವರು ನೀಡಿದ ೫ ಲಕ್ಷ ರು.ಗಳ ಮೊತ್ತದ ಡಿಡಿಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಹಸ್ತಾಂತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ