ಬೆಳಗಾವಿ ಬೈ ಎಲೆಕ್ಷನ್ ಮುಂಚೆಯೇ ಬಿಜೆಪಿಗೆ ಶಾಕ್: ಕಾಂಗ್ರೆಸ್‌ ಸೇರಿದ ಮುಖಂಡರು

By Suvarna NewsFirst Published Jan 1, 2021, 2:57 PM IST
Highlights

ಒಂದು ಕಡೆ ಕಾಂಗ್ರೆಸ್ ಮುಖಂಡರುಗಳು ಆಡಳಿತರೂಢ ಬಿಜೆಪಿ ಸೇರುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿ ಬಿಜೆಪಿ ಮುಖಂಡರುಗಳು ಕಾಂಗ್ರೆಸ್‌ಗೆ ಜೈ ಎಂದಿದ್ದಾರೆ.

ಬೆಳಗಾವಿ, (ಜ.01): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ.

ಶಾಸಕ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯೆ ಮನಿಷಾ ಸಿಂಧೆ ಇಂದು (ಶುಕ್ರವಾರ) ಕಾಂಗ್ರೆಸ್ ​ಸೇರ್ಪಡೆಯಾದರು.

ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಪಾಶ್ಚಾಪೂರ ಪಂಚಾಯಿತಿಯಿಂದ  ಆಯ್ಕೆಯಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಮನಿಷಾ ಸಿಂಧೆ ಇಂದು (ಶುಕ್ರವಾರ) ಬಿಜೆಪಿ ತೊರೆದು ಕಾಂಗ್ರೆಸ್​​ಗೆ ಸೇರಿದ್ದಾರೆ. 

'ಲಕ್ಷ್ಮಿ ಕಟಾಕ್ಷ' ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಬಣಕ್ಕೆ ಭರ್ಜರಿ ಜಯ 

ಅಲ್ಲದೇ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್​​ ಸೇರಿದ್ದು, ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ಯಾಕಂದ್ರೆ ಬೆಳಗಾವಿ ಲೋಕಸಭಾ ಉಪಚುನಾವನೆ ಹೊತ್ತಲ್ಲೇ ಮುಖಂಡರುಗಳು ಕಾಂಗ್ರೆಸ್ ಸೇರುತ್ತಿರುವುದು ಬಿಜೆಪಿಗೆ ಆಘಾತವಾಗಿದೆ.

ಮತ್ತೊಂದೆಡೆ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ತಂತ್ರಗಾರಿಕೆ ಮಧ್ಯೆಯೂ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಚುನಾಯಿತರಾಗಿದ್ದು ಕಾಂಗ್ರೆಸ್ ಮತ್ತಷ್ಟು ಬಲ ಬಂದಂತಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟೂ 44 ಗ್ರಾಮ ಪಂಚಾಯಿತಿಗಳಿದ್ದು, ಈವರೆಗೆ ಪ್ರಕಟವಾಗಿರುವ ಫಲಿತಾಂಶಗಳ ಪೈಕಿ ಶೇ.75ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ  ತಮ್ಮ ಬೆಂಬಲಿಗರು ಜಯಗಳಿಸಿದ್ದಾಗಿ ಹೆಬ್ಬಾಳಕರ್ ಮಾಹಿತಿ ನೀಡಿದ್ದಾರೆ.

, ಬೆಳಗಾವಿ ಲೋಕಸಭಾ ಉಪಚುನಾವಣೆ ಮುಂಚೆಯೇ ಒಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದೆಡೆ ಸತೀಶ್ ಜಾರಕಿಹೊಳಿ ಪುತ್ರರ ಹವಾ ಶುರುವಾಗಿದೆ.

click me!