ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ತೆರೆಬಿದ್ದಿದೆ.
ಕಲಬುರಗಿ, (ಜ.09): ಮೊದಲ ಬಾರಿಗೆ ಬಿಜೆಪಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಬ್ಯಾಂಕ್ನ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಾಂಗ್ರೆಸ್ ಬಹುಮತವಿದ್ದರು ಕೂಡ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ.
ಮತ್ತೊಂದೆಡೆ ಹಾಲಿ 6 ನಿರ್ದೇಶಕರ ಪೈಕಿ ಇಬ್ಬರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಗುಪ್ತ ಮತದಾನದಲ್ಲಿ ಬಿಜೆಪಿ ಬೆಂಬಲಿಗರಿಗೆ ಮತ ಚಲಾಯಿಸಿದ್ದು ಇದು ಅನೇಕ ಚರ್ಚೆಗೆ ಕಾರಣವಾಗಿದೆ. ಸದ್ಯ ಇದ್ದ 6 ಜನರ ಪೈಕಿ ಕೈಗೆ ಕೈಕೊಟ್ಟು ಕಮಲ ಹಿಡಿದವರು ಯಾರು ಎನ್ನುವ ಪ್ರಶ್ನೆ ಮೂಡಿದೆ.
undefined
ಕಲಬುರಗಿಯಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್, ಬಿಜೆಪಿಗೆ ಭಾರೀ ಮುಖಭಂಗ
ಕಾಂಗ್ರೆಸ್ ಬೆಂಬಲಿಗರ ಜೊತೆಯೇ ಅನೇಕ ದಿನಗಳಿಂದ ಇದ್ದು, ಅವರ ಜೊತೆಯೇ ಓಡಾಡಿ ಇದೀಗ ಅವರಿಗೆ ಕೈಕೊಟ್ಟವರು ಯಾರು ಎನ್ನುವುದನ್ನು ತಿಳಿಯಲು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರು ಹರಸಾಹಸ ಪಡುವಂತಾಗಿದೆ.
ಕಲಬುರಗಿ ಡಿಸಿಸಿ ಬ್ಯಾಂಕ್ಗೆ ಕಳೆದ 2020 ರ ನವೆಂಬರ್ 29 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. 16 ನಿರ್ದೇಶಕ ಬಲದ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು 9 ಮ್ಯಾಜಿಕ್ ಸಂಖ್ಯೆಯಾಗಿತ್ತು.
ಕಾಂಗ್ರೆಸ್ ಬೆಂಬಲಿತ 9 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದರಿಂದ ಸುಲಭವಾಗಿ ಬ್ಯಾಂಕ್ನ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದರು. ಆದರೆ ಡಿಸಿಸಿ ಬ್ಯಾಂಕ್ನ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸಿದ್ದ ಬಿಜೆಪಿ ಬೆಂಬಲಿಗರು ರಾಜ್ಯದಲ್ಲಿ ತಮ್ಮ ಸರ್ಕಾರ ಇರುವುದನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ತಂತ್ರ ರೂಪಿಸಿದ್ದರು.
ಕಳೆದ ಡಿಸೆಂಬರ್ 11ರಂದು ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಘೋಷಿಸಲಾಗಿತ್ತು. ಆದರೆ ಗ್ರಾಮ ಪಂಚಾಯತಿ ಚುನಾವಣೆಯ ನೆಪವನ್ನು ಹೇಳಿ ಅದನ್ನು ಮುಂದೂಡಿಸುವಲ್ಲಿ ಮೊದಲ ಹಂತದಲ್ಲಿಯೇ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು.