ಶಿರಾ, ಆರ್‌ಆರ್‌ ನಗರ ಬೈ ಎಲೆಕ್ಷನ್ ರಿಸಲ್ಟ್: ಪಕ್ಷದ ಆಂತರಿಕ ವರದಿ ತೆರೆದಿಟ್ಟ ಸಿಟಿ ರವಿ

By Suvarna NewsFirst Published Nov 3, 2020, 7:46 PM IST
Highlights

ಉಪಸಮರದ ಅಖಾಡದಲ್ಲಿ ಶಿರಾ ಮತ್ತು ಆರ್​ ಆರ್​ ನಗರ ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಾಗಿದೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದ್ದು, ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿದೆ.

ಚಿಕ್ಕಮಗಳೂರು, (ನ.03):  ತೀವ್ರ ಕುತೂಹಲ ಮೂಡಿಸಿರುವ ಆರ್‌ಆರ್‌ ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಅಂತ್ಯವಾಗಿದ್ದು, ಲಿತಾಂಶ ಇದೇ ನವೆಂಬರ್ 10ರಂದು ಪ್ರಕಟವಾಗಲಿದೆ.

ಇನ್ನು ಫಲಿತಾಂಶಕ್ಕೂ ಮುನ್ನವೇ ಮೂರು ಪಕ್ಷಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.  ಇದರ ಮಧ್ಯೆ ಪಕ್ಷದ ಆಂತರಿಕ ವರದಿ ಪ್ರಕಾರ ಶಿರಾ, ಆರ್‌.ಆರ್‌. ನಗರ ಎರಡೂ ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಬಕೆಟ್ ಹಿಡಿಯುವ ರಾಜಕಾರಣಿ ನಾನಲ್ಲ, ರಾಜೀನಾಮೆ ಅಂಗೀಕಾರಕ್ಕೆ ಸಿಎಂಗೆ ಮನವಿ'

ಇಂದು (ಮಂಗಳವಾರ) ಚಿಕ್ಕಮಗಳೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಿಜೆಪಿ ಭದ್ರಕೋಟೆ. ಅಲುಗಾಡಿಸಲು ಪ್ರಯತ್ನಿಸಿದವರೇ ಕುಸಿಯುತ್ತಾರೆ. ಪಕ್ಷದ ಆಂತರಿಕ ವರದಿ ಪ್ರಕಾರ ಶಿರಾ, ಆರ್‌.ಆರ್‌. ನಗರ ಎರಡೂ ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ' ಎಂದರು.

ಕಾಂಗ್ರೆಸ್‌ನವರು ಇವಿಎಂ ಮೇಲೆ ಆರೋಪ ಶುರು ಮಾಡಿದ್ದಾರೆ ಎಂದರೆ ಸೋಲು ಗ್ಯಾರಂಟಿ ಎಂಬುದು ಅವರಿಗೆ ತೀರ್ಮಾನವಾಗಿದೆ ಎಂದರ್ಥ. ಗೆದ್ದರೆ ಜನಾದೇಶ ಎನ್ನುತ್ತಾರೆ, ಸೋತರೆ ಇವಿಎಂ ದೋಷ ಎನ್ನುತ್ತಾರೆ. ಚುನಾವಣೆಯಲ್ಲಿ ಸೋಲಾದಾಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು. ಕೋರ್ಟ್‌ ತೀರ್ಪು ಬಂದಾಗ ನ್ಯಾಯಾಧೀಶರ ಮೇಲೆ ಅನುಮಾನ ಪಡುವುದು ಕಾಂಗ್ರೆಸ್‌ನ ಕಾಯಿಲೆ ಎಂದು ಕಿಡಿಕಾರಿದರು.

click me!