ಕಾಂಗ್ರೆಸ್ ಪಾದಯಾತ್ರೆಗಳು ಅವರು ಅಸ್ಥಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಪಾದಯಾತ್ರೆಗಳು ಮಾಡುವುದರಿಂದ ಯಾರಿಗೆ ಯಾವುದೆ ಲಾಭ ಇಲ್ಲ ಎಂದು ಕಂದಾಯ ಸಚಿವ ಆರ್ ಆಶೋಕ ಹೇಳಿದ್ದಾರೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,
ಕೋಲಾರ (ಅ.27): ನಾಡಪ್ರಭು ಕೆಂಪೇಗೌಡರ ರತೋತ್ಸವಕ್ಕೆ ಕೋಲಾರ ನಗರದ ಟೇಕಲ್ ವೃತ್ತದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ನವೆಂಬರ್ 11 ರಂದು ನಾಡ ಪ್ರಭ ಕೆಂಪೇಗೌಡ 108 ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಿನ್ನೆಲೆ, ಕೋಲಾರ ಜಿಲ್ಲೆಯಲ್ಲಿ ಎಂಟು ದಿನಗಳ ಕಾಲ ಸಂಚರಿಸಲಿರುವ ಕೆಂಪೇಗೌಡ ರಥಯಾತ್ರೆಗೆ ಕಂದಾಯ ಸಚಿವ ಆರ್ ಆಶೋಕ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಟ್ಟಿಗೆ ಹಲವಾರು ವಿಚಾರವಾಗಿ ಮಾತನಾಡಿದ ಸಚಿವ ಆರ್.ಅಶೋಕ್, ದಕ್ಷಿಣ ಭಾರತದಲ್ಲಿ ಒಂದು ಪುತ್ಥಳಿ ನಿರ್ಮಾಣ ಮಾಡಿ ಉದ್ಘಾಟನೆ ಮಾಡಲಾಗುತ್ತಿದೆ. ಕೆಂಪೇಗೌಡ ಥೀಮ್ ಪಾರ್ಕ್ ಲ್ಲಿ ಎಲ್ಲೆಡೆ ಸಂಗ್ರಹ ಮಾಡಲಾಗುತ್ತಿರುವ ಮಣ್ಣನ್ನು ಹಾಕಲಾಗುವುದು. ಕೆಂಪೇಗೌಡ ಹೆಸರಲ್ಲಿ ರಾಜಕೀಯ, ಸರ್ಕಾರ ಮಾಡಿದೋರು ತುಂಬ ಜನ ಇದ್ದಾರೆ. ಕೆಂಪೇಗೌಡ ಅವರು ಬೆಂಗಳೂರು ಕಟ್ಟಿದಾಗ ಎಲ್ಲಾ ಜಾತಿ ಜನಾಂಗದ ಪೇಟೆಗಳನ್ನ ಕಟ್ಟಿದ್ದಾರೆ.ಹಳೆ ಮೈಸೂರು ಸೇರಿದಂತೆ ಮೈಸೂರು ಭಾಗದಲ್ಲಿ ಕೆಂಪೇಗೌಡ ಅವರ ಪುತ್ಥಳಿ ಸಾಗುತ್ತಿದೆ ಎಂದರು.
undefined
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಉತ್ತರ ದಕ್ಷಿಣ ಪಾದಯಾತ್ರೆ ಮಾಡುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಅವರು, ಈಗಾಗಲೆ ಅವರಿಬ್ಬರು ಉತ್ತರ ದಕ್ಷಿಣ ಎನ್ನುತ್ತಿದ್ದಾರೆ. ಜೋಡೊ ಯಾತ್ರೆ ಓಡೋ ಯಾತ್ರೆಯಾಗಿದೆ, ಅದರಿಂದ ಅವರಿಗೆ ಮರ್ಯಾದೆ ಹೋಯ್ತೆ ಹೊರತು ಲಾಭ ಇಲ್ಲ. ಕಾಂಗ್ರೆಸ್ ಪಾದಯಾತ್ರೆಗಳು ಅವರು ಅಸ್ಥಿತ್ವ ಉಳಿಸಿಕೊಳ್ಳಲು ಮಾಡುತ್ತಿದ್ದಾರೆ. ಪಾದಯಾತ್ರೆಗಳು ಮಾಡುವುದರಿಂದ ಯಾರಿಗೆ ಯಾವುದೆ ಲಾಭ ಇಲ್ಲ ಎಂದು ಹೇಳಿದ್ದಾರೆ.
ಜೋಡೊ ಮಾಡಿದವರೆ ಕಾಂಗ್ರೆಸ್ ಮಾಡಿದ ತಪ್ಪುಗಳನ್ನ ಮುಚ್ಚಿ ತೋಡೊ ಮಾಡುತ್ತಿದ್ದಾರೆ. ಅವರದೆ ಸರ್ಕಾರ ಇದ್ದಾಗ ಭಾಗ್ಯಗಳು ಕೊಟ್ಟವರು 123 ರಿಂದ 70 ಸೀಟಿಗೆ ಬಂದು ಏಕೆ ಇಳಿದ್ರು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದಕ್ಕೆ ಬಿಜೆಪಿ ಪಕ್ಷಕ್ಕೆ ಏನು ನಷ್ಟವಾಗಲ್ಲ.ಗುಲ್ಬರ್ಗಾದಲ್ಲಿ ಗೆಲ್ಲಕ್ಕಾಗಿಲ್ಲ ಇನ್ನೂ ರಾಜ್ಯದಲ್ಲಿ ಯಾವುದೆ ಪರಿಣಾಮ ಬೀರಲ್ಲ.
ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿ, ನನ್ನ ಅವಧಿಯಲ್ಲಿ ನಡೆದಿದೆ ಎಂಬ ಹೆಮ್ಮೆ: ಡಿಕೆಶಿ
ಕಾಂಗ್ರೆಸ್‌ನಲ್ಲಿ ಕೆಲವರಿಗೆ ನೆಲೆ ಇಲ್ಲದೆ ಓಡಾಡುತ್ತಿದ್ದಾರೆ, ಹಾಗಾದ್ರೆ ಸಿದ್ದರಾಮಯ್ಯ ಅವರು ಬಾದಾಮಿ,ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದ ಯಾಕೆ. ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ, ನಮ್ಮದು ಹಿಂದುತ್ವ ಆಧಾರದ ಮೇಲೆ ಅಧಿಕಾರಕ್ಕೆ ಬರುತ್ತೆ. ಒಕ್ಕಲಿಗ ಮೀಸಲಾತಿ ವಿಚಾರವಾಗಿ ಸ್ವಾಮೀಜಿಯವರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
Kolara; ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆ
ಇನ್ನು ಒಕ್ಕಲಿಗ ಸಮುದಾಯದವರು ಈ ಬಾರಿ ಪೆನ್ ಹಿಡಿಯಬೇಕು (ಸಿಎಂ ಆಗಬೇಕು)ಎಂಬ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, ನನಗೆ ಅಂತಹ ಯಾವುದೆ ಆಸೆ ಇಲ್ಲ, ಈಗಾಗಲೆ ಸಿಎಂ ಎಂದುಕೊಂಡವರು ಏನಾಗುತ್ತೆ ಎಂದು ನಮಗೆ ಗೊತ್ತಿದೆ.ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆ ತೆರಳುತ್ತೇವೆ. ನಾನು ಈಗಾಗಲೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ, ಅವರು ಎರಡಂಕಿ ಸಹ ದಾಟಲ್ಲ ಎಂದು ತಿಳಿಸಿದರು.