ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಜಗದೀಶ್‌ ಶೆಟ್ಟರ್‌

By Kannadaprabha News  |  First Published Mar 7, 2023, 12:30 AM IST

ರಾಜ್ಯದಲ್ಲಿ ಕಾಂಗ್ರೆಸ್‌ ಜಗಳದಲ್ಲಿ ಮುಳುಗಿದೆ. ಕೇಂದ್ರ, ರಾಜ್ಯದ ಸಾಧನೆಗಳು ಜನರನ್ನು ಸೆಳೆಯುತ್ತಿವೆ. ಹೀಗಾಗಿ 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.


ಚಿಂಚೋಳಿ (ಮಾ.07): ರಾಜ್ಯದಲ್ಲಿ ಕಾಂಗ್ರೆಸ್‌ ಜಗಳದಲ್ಲಿ ಮುಳುಗಿದೆ. ಕೇಂದ್ರ, ರಾಜ್ಯದ ಸಾಧನೆಗಳು ಜನರನ್ನು ಸೆಳೆಯುತ್ತಿವೆ. ಹೀಗಾಗಿ 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು. ಪಟ್ಟಣದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಹತ್ತಿರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಯಾತ್ರೆ ಸಂಕಲ್ಪ ಉದ್ಘಾಟಿಸಿ ಮಾತನಾಡಿದರು. ಡಬಲ ಇಂಜಿನ ಸರಕಾರದಿಂದ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು ಭಾರತದ ಆರ್ಥಿಕತೆ ಎಷ್ಟು ಬೆಳೆದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಮತ್ತು ಬಿಜೆಪಿ ಅ​ಕಾರಕ್ಕೆ ಬರಲಿದೆ; ಕಲ್ಯಾಣ ಕರ್ನಾಟಕ ಪ್ರದೇಶದಲಿ ಬಿಜೆಪಿ ಸರಕಾರದಿಂದ ಸಾಕಷ್ಟುಅಭಿವೃದ್ಧಿ ಆಗಿದೆ ಬಿಜೆಪಿಗೆ ಬಲಪಡಿಸಬೇಕೆಂದು ಜಗದೀಶ ಶೆಟ್ಟರ ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಮಾತನಾಡಿ, ಚಿಂಚೋಳಿ ಜನತೆ ಬಹಳ ಬುದ್ಧಿವಂತರು, ಹೀಗಾಗಿ ಇಲ್ಲಿ ಬಡತನವಿದೆಯೇ ಹೊರತು ಜ್ಞಾನಕ್ಕೆ ಕೊರತೆಯಿಲ್ಲ. ಆದ್ದರಿಂದ ಕಾಂಗ್ರೆಸ ಪಕ್ಷ ಹಾಗೂ ಬಿಜೆಪಿ ನಡುವೆ ಇರುವ ವ್ಯತ್ಯಾಸವನ್ನು ತೂಕ ತುಲನೆ ಮಾಡಿ ಬಿಜೆಪಿಗೆ ಮತ ಹಾಕಿ. 2008ರಲ್ಲಿ ಯಡಿಯೂರಪ್ಪನವರು ಹೆಣ್ಮಕ್ಕಳ ಕಾಳಜಿ ವಹಿಸಿ ಭಾಗ್ಯಲಕ್ಷಿತ್ರ್ಮ ಯೋಜನೆ, ವಿಧವಾ ವೇತನ, ಅಂಗವಿಕಲ, ವೃದ್ಧಾಪ್ಯ, ಸಂಧ್ಯಾಸುರಕ್ಷ ರೈತರಿಗೆ ಉಚಿತವಾಗಿ ನೀಡುವ ಮೂಲಕ ಅಭಿವೃದ್ಧಿಗೆ ವೇಗ ನೀಡಿದ್ದಾರೆಂದರು.

Tap to resize

Latest Videos

ಬಿಜೆಪಿ ಸರ್ಕಾರ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿ: ರಣದೀಪ್‌ ಸಿಂಗ್‌ ವಾಗ್ದಾಳಿ

ಅವಿನಾಶ ಜಾಧವ್‌ ಮಾತನಾಡಿ, ಅಭಿವೃದ್ಧಿ ಅನುದಾನ ತರಲಾಗಿದೆ. ಐನಾಪೂರ ಏತನೀರಾವರಿ ಯೋಜನೆಗೆ 225 ಕೋಟಿ ರು.ಗಳಲ್ಲಿ ಇಗಾಗಲೇ 110 ಕೋಟಿ ರು.ಟೆಂಡರ್‌ ಕರೆಯಲಾಗಿದೆ. ನೀವು ನನಗೆ ನೀಡಿದ ಅಧಿ​ಕಾರದಿಂದ ಪ್ರಾಮಾಣಿಕತೆಯಿಂದ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ನನಗೆ ಮತ್ತೇ ಆಶೀರ್ವದಿಸಿ ಎಂದರು. ಯಾತ್ರೆ ಸಮಾರಂಭದಲ್ಲಿ ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಭಗವಂತ ಖುಬಾ, ಸಂಸದ ಡಾ. ಉಮೇಶ ಜಾಧವ್‌, ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿದರು.

ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸುನೀಲ್‌ ವಲ್ಯಾಪೂರೆ, ಬಿ.ಜಿ.ಪಾಟೀಲ, ಅಶೋಕ ಮಗದುಮಪುರ, ಶಶಿಕಲಾ ತೆಂಗಳಿ, ಶರಣಪ್ಪ ತಳವಾರ, ಅತೀಶ ಪವಾರ, ಡಾ. ವಿಕ್ರಮ ಪಾಟೀಲ, ಗೌತಮ ಪಾಟೀಲ, ರಾಮಚಂದ್ರ ಜಾಧವ್‌, ಶ್ರೀಮಂತ ಕಟ್ಟಿಮನಿ, ರಾಜು ಪವಾರ,ಪ್ರೇಮಸಿಂಗ ಜಾಧವ್‌ ಇದ್ದರು. ಬಿಜೆಪಿ ಅಧ್ಯಕ್ಷ ಶಿವರಾಜ ರದ್ದೇವಾಡಗಿ ಪ್ರಸ್ತಾವಿಕ ಮಾತನಾಡಿದರು. ತಾಲೂಕ ಅಧ್ಯಕ್ಷ ಸಂತೋಷ ಗಡಂತಿ ಸ್ವಾಗತಿಸಿದರು ಭೀಮಶೆಟ್ಟಿಮುರುಡಾ ನಿರೂಪಿಸಿ, ಗೋಪಾಲರೆಡ್ಡಿ ಕೊಳ್ಳುರ ವಂದಿಸಿದರು.

ಕಲ್ಯಾಣ ನಾಡು ಪ್ರಗತಿಗೆ ಹೆಚ್ಚಿನ ಗಮನ ಹರಿಸಬೇಕಿದೆ: ಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಬಿಜೆಪಿ ಕಾಂಗ್ರೆಸ್‌ ಪಕ್ಷಕ್ಕಿಂತ ಹೆಚ್ಚಿನ ಒತ್ತು ನೀಡಿದೆ, ಆದಾಗ್ಯೂ ಇನ್ನೂ ಹೆಚ್ಚಿನ ಗಮನ ನೀಡುವ ಅಗತ್ಯವಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯೊಂದಿಗೆ ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತ​ನಾಡಿ, ಕಲ್ಯಾಣಕ್ಕೆ 5 ಸಾವಿರ ಕೋಟಿ ರು. ನೀಡಿದ ಬಿಜೆಪಿ ಎಂದು ಸಾಧನೆಯ ಪಟ್ಟಿಮಾಡುತ್ತಿರುವಾಗಲೇ ಮಧ್ಯಪ್ರವೇಶ ಮಾಡಿದ ಸುದ್ದಿಗಾರರು ಕೆಕೆಆರ್‌ಡಿಬಿಗೆ ಸಾವಿರಾರು ಕೋಟಿ ನೀಡಿದ್ದೀರಿ, ಅಲ್ಲಿನ್ನೂ ಶೇ.7ರಷ್ಟೂಕಾಮಗಾರಿಯಾಗಿಲ್ಲ. 1,500 ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಹೀಗಿರುವಾಗ ಬರೀ ಬಡಾಯಿಗೆ ಅನುದಾನದ ಮಾತಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಗರೆದರು.

ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರ ಶೋಷಣೆ: ಸಂಸದ ಮುನಿಸ್ವಾಮಿ ಆರೋಪ

2013ರಲ್ಲೇ ಮಂಜೂರಾಗಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ ಚಿಲ್ಲರೆ ಕಾಸು ನೀಡಿ ಅಪಮಾನಿಸುತ್ತಿದ್ದೀರಿ, ಕಲಬುರಗಿಯಿಂದ ಉಗಮವಾಗಿ ಬೆಂಗಳೂರಿಗೆ ಹೋಗಲೂ ಪ್ರತ್ಯೇಕ ರೈಲು ಸವಲತ್ತಿಲ್ಲ, ಡಬ್ಬಲ್‌ ಎಂಜಿನ್‌ ಸರ್ಕಾರ ಕಲ್ಯಾಣದ ಜನರ ಆಶಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಪತ್ರಕರ್ತರು ಅಭಿವೃದ್ಧಿ ವಿಷಯವಾಗಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದಾಗ ಮಾತನಾಡಿದ ಜಗದೀಶ ಶೆಟ್ಟರ್‌ ಕಲ್ಯಾಣ ಜಿಲ್ಲೆಗಳಲ್ಲಿ ಪ್ರಗತಿ ಮಾಡಿದ್ದೇವೆ. ನಿರೀಕ್ಷೆಯಂತೆ ಆಗಿಲ್ಲ, ಇನ್ನೂ ಹೆಚ್ಚಿನ ಗಮನ ಹರಿಸಲು ಅವಕಾಶವಿದೆ. ಪಕ್ಷದ ಎಲ್ಲಾ ಹಂತಗಳಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸುವೆ ಎಂದು ಪ್ರಗತಿ ವಿಚಾರದಲ್ಲಿ ಪತ್ರಕರ್ತರ ಮನದಾಳದ ಭಾವನೆಗಳಿಗೆ ಸಹಮತಿಸಿದರು.

click me!