ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 9 ವರ್ಷಗಳ ಕಡಿಮೆ ಅವಧಿಯಲ್ಲಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಗೋಕಾಕ (ಮಾ.06): ದೇಶದಲ್ಲಿ ಕಾಂಗ್ರೆಸ್ ಪಕ್ಷ 60 ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 9 ವರ್ಷಗಳ ಕಡಿಮೆ ಅವಧಿಯಲ್ಲಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಿಮಿತ್ತ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಿದೆ.
ದೇಶದ ಸ್ವಾತಂತ್ರ್ಯ ನಂತರ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ದಿಂದ ದೇಶದ ಅಭಿವೃದ್ಧಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ದೇಶದ ಸಮಗ್ರ ಅಭಿವೃದ್ಧಿಯಾಗಿದ್ದು ಜನತೆಯ ಕಣ್ಣು ಮುಂದಿದೆ ಎಂದರು. ಸಚಿವ ಮುರಗೇಶ ನಿರಾಣಿ ಮಾತನಾಡಿ, ಪ್ರಧಾನಿಯವರ ಮಾರ್ಗದರ್ಶನದಲ್ಲಿ ದೇಶದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯುತ್ತಿದೆ. ರಾಜ್ಯದಲ್ಲೂ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ಶ್ರಮಿಸಲಾಗುತ್ತಿದೆ. ರಾಜ್ಯದಲ್ಲಿ ಸಾಲಮನ್ನಾ ಮಾಡಿದ ಪ್ರಥಮ ಪಕ್ಷ ಬಿಜೆಪಿಯಾಗಿದೆ. ಉಚಿತ ಶಿಕ್ಷಣ, ಮಸಾಶನಗಳನ್ನು ಹೆಚ್ಚಿಸಲಾಗಿದೆ. ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ.
ಬಿಜೆಪಿ, ಕಾಂಗ್ರೆಸ್ ಅಣ್ಣ ತಮ್ಮ ಇದ್ದಂತೆ: ಸಿ.ಎಂ.ಇಬ್ರಾಹಿಂ
ಎಸ್ಸಿ ಮತ್ತು ಎಸ್ಟಿಜನರಿಗೆ ಕೈಗಾರಿಕೆ ಪ್ರಾರಂಭಿಸಲು ಜಮೀನು ಖರೀದಿಗೆ ಶೇ. 75ರಷ್ಟುಸಬ್ಸಿಡಿ ನೀಡಲಾಗುತ್ತಿದ್ದು, ಇವುಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು. ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲಿದ್ದು, ಉತ್ತರ ಕರ್ನಾಟಕದ ನೀರಾವರಿ ಅಭಿವೃದ್ಧಿಗಾಗಿ ಈಗಾಗಲೇ .5,700 ಕೋಟಿ ಮಂಜೂರು ದೊರೆತಿದ್ದು, ಇನ್ನು 9 ಸಾವಿರ ಕೋಟಿಗಳ ಅನುದಾನದ ಬಿಡುಗಡೆಯೊಂದಿಗೆ ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸಲಾಗುವುದು. ನೀವೆಲ್ಲರೂ ಆಶೀರ್ವದಿಸಿ ನನ್ನನ್ನು ಮತ್ತೊಮ್ಮೆ ಶಾಸಕನನ್ನಾಗಿ ಮಾಡಲು ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶಾಸಕ ಅನೀಲ ಬೆಣಕೆ, ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ಅರುಣ ಶಹಾಪುರ, ಸಹಸಂಚಾಲಕ ವಿವೇಕ ಡಬ್ಬಿ, ಮಹಾಂತೇಶ ಬಾಳಿಕಾಯಿ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದನ್ನವರ, ಮಾಜಿ ಶಾಸಕರುಗಳಾದ ಶಶಿಕಾಂತ ನಾಯ್ಕ, ಎಂ.ಎಲ್. ಮುತ್ತೆನ್ನವರ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ್ ಸಿದ್ದಪ್ಪ ಹುಚ್ಚರಾಮಗೋಳ, ಮಾಜಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಎಂ.ಎಲ್.ತೋಳಿನವರ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.
ಅದ್ಧೂರಿ ರೋಡ್ ಶೋ: ನಗರದ ಬ್ಯಾಳಿ ಕಾಟಾ ಹತ್ತಿರವಿರುವ ಕೊಳವಿ ಹನುಮಂತ ದೇವಸ್ಥಾನದಲ್ಲಿ ಗೊ ಪೂಜೆಯೊಂದಿಗೆ ಪ್ರಾರಂಭಗೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯೂ 15 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರು, ವಿವಿಧ ವಾದ್ಯಮೇಳ, ಸುಮಂಗಲಿಯರ ಆರತಿಯೊಂದಿಗೆ ನಗರದ ಬಾಫನಾ ಕೂಟ, ಸಂಗೋಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಮುಕ್ತಾಯಗೊಂಡಿತು.
ಕೊರೋನಾದಂತಹ ಸಂಕಷ್ಟಸಮಯದಲ್ಲಿ ಇಡಿ ಪ್ರಪಂಚವೇ ಕೊಂಡಾಡುವ ನಿಟ್ಟಿನಲ್ಲಿ 130 ಕೋಟಿ ದೇಶವಾಸಿಗಳಿಗೆ ಉಚಿತ ವ್ಯಾಕ್ಸಿನ್ ನೀಡಿದ್ದಲ್ಲದೇ ನಮ್ಮ ನರೆಹೊರೆಯ ರಾಷ್ಟ್ರಗಳಿಗೂ ಕೊಟ್ಟು ಮಾನವಿಯತೆ ಮೆರೆದರು. ಬಿಜೆಪಿ ಪಕ್ಷದಿಂದ ಮಾತ್ರ ಉತ್ತಮ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಸಾಧ್ಯ ಎಂಬುವುದು ಜನತೆಗೆ ಮನಗಣನೆಯಾಗಿದೆ.
-ಗೋವಿಂದ ಕಾರಜೋಳ, ಸಚಿವರು.
ರಮೇಶ ಜಾರಕಿಹೊಳಿ ಅವರು ನಿಮ್ಮೆಲ್ಲರ ಆಶೀರ್ವಾದದಿಂದ 6 ಬಾರಿ ಆಯ್ಕೆಯಾಗಿ 7ನೇ ಬಾರಿ ಆಯ್ಕೆಗೆ ಆಶೀರ್ವದಿಸಿ. ಗೋಕಾಕ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದ್ದು, ಇನ್ನು ಹೆಚ್ಚಿನ ಅಭಿವೃದ್ಧಿಗೆ ಅವರನ್ನು 1ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆ ಮಾಡಬೇಕು.
-ಮುರಗೇಶ ನಿರಾಣಿ, ಸಚಿವರು.
ಕಾಂಗ್ರೆಸ್‌ನಿಂದ ಮುಸ್ಲಿಂ ಮಹಿಳೆಯರ ಶೋಷಣೆ: ಸಂಸದ ಮುನಿಸ್ವಾಮಿ ಆರೋಪ
ನಿಮ್ಮೆಲ್ಲರ ಆಶೀರ್ವಾದದಿಂದ 6 ಬಾರಿ ಶಾಸಕನಾಗಿ ರಾಜ್ಯ ಮಟ್ಟದ ನಾಯಕನಾಗಿದ್ದೇನೆ. ಬರುವ ಚುನಾವಣೆಯಲ್ಲಿ ಜಿಲ್ಲೆಯಿಂದ 15ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಸಂಕಲ್ಪ ಮಾಡಿದ್ದು, ಇದಕ್ಕೆ ತಾವೆಲ್ಲರೂ ಆಶೀರ್ವದಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದರೊಂದಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಿ ಭಾರತ ದೇಶವನ್ನು ವಿಶ್ವದ ದೊಡ್ಡಣ್ಣನನ್ನಾಗಿ ಮಾಡೋಣ.
-ರಮೇಶ ಜಾರಕಿಹೊಳಿ, ಶಾಸಕರು.