ಬಿಜೆಪಿ ನಾಯಕ ಸಿಬಿಐ ವಶಕ್ಕೆ: ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತು

By Suvarna NewsFirst Published Dec 5, 2020, 5:25 PM IST
Highlights

ಸಿಬಿಐನಿಂದ ಬಂಧನಕ್ಕೊಳಗಾಗಿರುವ ನಗರಪಾಲಿಕೆ ಕೌನ್ಸಿಲರ್ ನನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಪ್ರತಿಕ್ರಿಯಿಸಿದ್ದು ಹೀಗೆ...

ನವದೆಹಲಿ, (ಡಿ.05): ಸಿಬಿಐನಿಂದ ಬಂಧನಕ್ಕೊಳಗಾಗಿರುವ ನಗರಪಾಲಿಕೆ ಕೌನ್ಸಿಲರ್ ಮನೋಜ್ ಮಹಲಾವಾತ್ ಎನ್ನುವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ಇಂದು (ಶನಿವಾರ) ಮನೋಜ್ ಮಹಲಾವಾತ್ ಅವರನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಾಯಕತ್ವದ ಮೇಲೆ ಅಸಮಾಧಾನ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು

ಇನ್ನು ಈ ಬಗ್ಗೆ ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಬಂದ ಕೂಡಲೇ ಗುಪ್ತಾ ಅವರು ಪಾಲಿಕೆ ಕೌನ್ಸಿಲರ್ ಮನೋಜ್ ಮಹಲಾವಾತ್ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದಾಗಿ ಸ್ಪಷ್ಟಪಡಿಸಿದರು.

ಭ್ರಷ್ಟಾಚಾರದ ವಿಚಾರದಲ್ಲಿ ಪಕ್ಷ ಯಾವುದೇ ರಾಜೀ ಸೂತ್ರ ಅನುಸರಿಸುವುದಿಲ್ಲ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದು ಮನೋಜ್ ಹೇಳಿದರು.

ದಕ್ಷಿಣ ದೆಹಲಿಯ ವಸಂತ್ ಕುಂಜ್ ವಾರ್ಡ್‌ನ ಮುನ್ಸಿಪಲ್ ಕಾರ್ಪೂರೇಶನ್‌ ಆಗಿದ್ದ ಮನೋಜ್, ಕೆಲಸ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ 10 ಲಕ್ಷ ರೂ ಲಂಚ ಬೇಡಿಕೆಯೊಡ್ಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಮನೋಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

click me!