ಭಿನ್ನರಿಗೆ ವಿಜಯೇಂದ್ರ ಸಡ್ಡು: ವಕ್ಫ್‌ ಪ್ರವಾಸಕ್ಕೆ ಮೂರು ತಂಡ ರಚನೆ

Published : Nov 16, 2024, 08:02 AM IST
ಭಿನ್ನರಿಗೆ ವಿಜಯೇಂದ್ರ ಸಡ್ಡು: ವಕ್ಫ್‌ ಪ್ರವಾಸಕ್ಕೆ ಮೂರು ತಂಡ ರಚನೆ

ಸಾರಾಂಶ

ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಅತೃಪ್ತ ನಾಯಕರು ಸಭೆ ಸೇರಿ ಈ ತಿಂಗಳ 25ರಿಂದ ಒಂದು ತಿಂಗಳ ಕಾಲ ವಕ್ಫ್ ಆಸ್ತಿ ಕುರಿತು ಜನಜಾಗೃತಿ ಅಭಿಯಾನ ನಡೆಸುವ ತೀರ್ಮಾನ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ವಿಜಯೇಂದ್ರ ಅವರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತಂಡಗಳನ್ನು ರಚಿಸುವ ನಿರ್ಧಾರ ಪ್ರಕಟಿಸಿದರು. 

ಬೆಂಗಳೂರು(ನ.16): ವಕ್ಫ್‌ ಆಸ್ತಿ ಕುರಿತಂತೆ ಪಕ್ಷದ ಅತೃಪ್ತ ನಾಯಕರು ಜನಜಾಗೃತಿ ಅಭಿಯಾನ ನಡೆಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೈಜ ವರದಿ ಸಂಗ್ರಹಿಸುವ ಸಂಬಂಧ ಮೂರು ತಂಡಗಳನ್ನು ರಚಿಸಿದ್ದಾರೆ. 

ಶುಕ್ರವಾರ ಬೆಳಗ್ಗೆ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಅತೃಪ್ತ ನಾಯಕರು ಸಭೆ ಸೇರಿ ಈ ತಿಂಗಳ 25ರಿಂದ ಒಂದು ತಿಂಗಳ ಕಾಲ ವಕ್ಫ್ ಆಸ್ತಿ ಕುರಿತು ಜನಜಾಗೃತಿ ಅಭಿಯಾನ ನಡೆಸುವ ತೀರ್ಮಾನ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ವಿಜಯೇಂದ್ರ ಅವರು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತಂಡಗಳನ್ನು ರಚಿಸುವ ನಿರ್ಧಾರ ಪ್ರಕಟಿಸಿದರು. ಬಳಿಕ ಸಂಜೆ ಹೊತ್ತಿಗೆ ತಂಡಗಳನ್ನು ರಚಿಸಿ ಪ್ರಕಟಣೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಆಶೋಕ್ ಹಾಗೂ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಮೂರು ತಂಡಗಳನು ರಚಿಸಲಾಗಿದೆ.

ಮತ್ತೆ ಬಿಜೆಪಿ ಭಿನ್ನರಾಗ: ಯತ್ನಾಳ್‌ ನೇತೃತ್ವದಲ್ಲಿ ವಿಜಯೇಂದ್ರ ವಿರೋಧಿಗಳ ಸಭೆ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಕ್ಸ್ ಅಸ್ತಿ ವಿವಾದದ ತನಿಖೆಗಾಗಿ 3 ತಂಡವನ್ನು ರಚಿಸಿದ್ದಾರೆ. ಒಂದು ತಂಡದಲ್ಲಿ ಸ್ವತಃ ತಾವೇ ಸದಸ್ಯರಾಗಿದ್ದು, ಇನ್ನಿತರೆ ನಾಯಕರನ್ನು ಅವರು ಸದಸ್ಯರು, ಸಂಯೋಜಕ, ಸಂಯೋಜಕರನ್ನು ನೇಮಿಸಿ ಆದೇಶಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರಿಗೂ ತಂಡದಲ್ಲಿ ಸ್ಥಾನ ನೀಡಿದ್ದಾರೆ.

ತಂಡ 1:ಸದಸ್ಯರು-ಬಿ.ವೈ.ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಭಗವಂತ ಖೂಬಾ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ಬಿ.ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಈರಣ್ಣ ಕಡಾಡಿ, ಹಾಲಪ್ಪ ಆಚಾರ್, ಸುನೀಲ್ ವಲ್ಯಾಪುರೆ, ಎಂ.ಬಿ.ಜಿರಲಿ, ಸಂಚಾಲಕ -ಪಿ.ರಾಜೀವ್ 
ಸಂಯೋಜಕರು: ಅರುಣ್ ಶಹಾಪುರ, ಹರೀಶ್ ಪೂಂಜಾ, ಡಾ.ಶೈಲೇಂದ್ರ ಬೆಲ್ದಾಳೆ. 
ಪ್ರವಾಸ ಕೈಗೊಳ್ಳಲಿರುವ ಜಿಲ್ಲೆಗಳು: 
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ ಹಾಗೂ ಬಾಗಲಕೋಟೆ.

ತಂಡ 2: ಸದಸ್ಯರು- ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್ ಯತ್ನಾಳ, ರಾಜೂಗೌಡ, ಎಂ.ಪಿ.ರೇಣುಕಾ ಚಾರ್ಯ, ಎನ್.ಮಹೇಶ್, ದೊಡ್ಡನಗೌಡ ಪಾಟೀಲ್, ಭಾರತಿ ಶೆಟ್ಟಿ, ವಸಂತಕುಮಾರ್. ಡಾ.ಬಿ.ಸಿ.ನವೀನ್‌ಕುಮಾರ್, 
ಸಂಚಾಲಕ: ಜೆ.ಪ್ರೀತಂಗೌಡ. ಸಂಯೋಜಕರು: ವಿನಯ್ ಬಿದರೆ, ಡಿ.ಎಸ್. ಅರುಣ್, ಲಕ್ಷ್ಮಿ ಅಶ್ವಿನ್‌ಗೌಡ. 
ಪ್ರವಾಸ ಕೈಗೊಳ್ಳಲಿರುವ ಜಿಲ್ಲೆಗಳು: ಚಾಮರಾಜ ನಗರ, ಮೈಸೂರು ನಗರ, ಮೈಸೂರು ಗ್ರಾಮಾಂತರ, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ. 

ತಂಡ 3: ಸದಸ್ಯರು- ಛಲವಾದಿ ನಾರಾಯಣಸ್ವಾಮಿ, ಡಿ.ವಿ.ಸದಾನಂದಗೌಡ, ವಿ.ಸೋಮಣ್ಣ, ಸಿ.ಟಿ.ರವಿ, ನಳಿನ್‌ ಕುಮಾರ್‌ ಕಟೀಲ್, ಅರವಿಂದ ಲಿಂಬಾವಳಿ, ಎಸ್.ಮುನಿಸ್ವಾಮಿ, ಆರಗ ಜ್ಞಾನೇಂದ್ರ, ಬಿ.ಸಿ.ಪಾಟೀ ಲ್‌, ವೈ.ಎ.ನಾರಾಯಣಸ್ವಾಮಿ, ವಿವೇಕ್ ಸುಬ್ಬಾರೆಡ್ಡಿ. ಸಂಚಾಲಕ: ವಿ.ಸುನೀಲ್‌ಕುಮಾರ್. 
ಸಂಯೋಜಕರು: ಅಶ್ವತ್ಥನಾರಾಯಣ, ತಮ್ಮೇಶ್ ಗೌಡ, ಅಂಬಿಕಾ ಹುಲಿನಾಯ್ಕರ್. 

ವಕ್ಫ್ ಆಸ್ತಿ ವಿವಾದ: ರೈತಪರ ಹೋರಾಡಬೇಕಾದ ರಾಕೇಶ್ ಟಿಕಾಯತ್ ಯಾಕೆ ಮೌನ? ರೈತ ಸಂಘಟನೆಗಳು ಎಲ್ಲಿ ಅಡಗಿವೆ? ಯತ್ನಾಳ್ ಕಿಡಿ

ಪ್ರವಾಸ ಕೈಗೊಳ್ಳಲಿರುವ ಜಿಲ್ಲೆಗಳು: ರಾಮನಗರ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ.

ಹೋರಾಟ ಯಾರು ಮಾಡಿದರೂ ಬೆಂಬಲ ರೈತರ ಪರ ಹೋರಾಟ ಮಾಡುವುದು ತಪ್ಪಲ್ಲ. ವಕ್ಫ್‌ ವಿರುದ್ಧ ಯಾರೇ ಹೋರಾಟ ಮಾಡಿದರೂ ನಮ್ಮ ಬೆಂಬಲ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ