Karnataka Politics| ಬಿಜೆಪಿ ಮೊದಲು ದಲಿತರನ್ನು ಸಿಎಂ ಮಾಡಲಿ: ಎಂ.ಬಿ.ಪಾಟೀಲ

By Kannadaprabha NewsFirst Published Nov 13, 2021, 2:33 PM IST
Highlights

*  ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾವು ಮಾತನಾಡುತ್ತೇವೆ
*  ದಲಿತರನ್ನು ಸಿಎಂ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್‌ ನಿರ್ಧಾರ 
*  ಸಿಂದಗಿ ಮತಕ್ಷೇತ್ರದ ಸೋಲಿಗೆ ತಲೆಬಾಗಿ ನಾವು ಒಪ್ಪಿಕೊಳ್ಳುತ್ತೇವೆ

ವಿಜಯಪುರ(ನ.13):  ಈಗ ಬಿಜೆಪಿಯವರು ಅಧಿಕಾರದಲ್ಲಿದ್ದು, ಅವರು ದಲಿತರನ್ನು ಮುಖ್ಯಮಂತ್ರಿ ಮಾಡಲಿ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾವು ಈ ವಿಷಯದ ಕುರಿತು ಮಾತನಾಡುತ್ತೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ(MB Patil) ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರನ್ನು ಸಿಎಂ ಮಾಡುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್‌(HighCommand) ನಿರ್ಧಾರ ಕೈಗೊಳ್ಳುತ್ತದೆ. ಮೊದಲು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು. 115 ಸ್ಥಾನಗಳನ್ನು ಗೆಲ್ಲಬೇಕು. ಆ ನಂತರ ಇದರ ಬಗ್ಗೆ ತೀರ್ಮಾನವಾಗುತ್ತದೆ. ಈಗ ನಾವು ಅಧಿಕಾರದಲ್ಲಿಲ್ಲ. ಬಿಜೆಪಿಯವರು(BJP) ಅಧಿಕಾರದಲ್ಲಿದ್ದಾರೆ. ಅವರು ದಲಿತರನ್ನು ಮುಖ್ಯಮಂತ್ರಿ(Dalit Chief Minister) ಮಾಡಿ ತೋರಿಸಲಿ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ದಲಿತರ(Dalit) ಬಗ್ಗೆ ಮಾತನಾಡಿಲ್ಲ. ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಇದೆ. ಎಸ್‌ಸಿಪಿ-ಟಿಎಸ್‌ಪಿಯಲ್ಲಿ ದೇಶದಲ್ಲೇ(India) ಮೊದಲು ಶೇ.24 ರಷ್ಟುಇದ್ದ ಬಜೆಟ್‌ನಲ್ಲಿ(Budget) .4 ಸಾವಿರ ಕೋಟಿ ಇದ್ದದ್ದನ್ನು 25 ಸಾವಿರ ಕೋಟಿಗಳವರೆಗೆ ವಿಸ್ತರಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರಿಗೆ ದಲಿತರ ಬಗ್ಗೆ ಇರುವಷ್ಟು ಬದ್ಧತೆ ಬೇರೆ ಯಾರಿಗೂ ಇಲ್ಲ. ಬಿಜೆಪಿಗರು ದಲಿತರನ್ನು ಉಪಯೋಗಿಸಿಕೊಂಡು ರಾಜಕಾರಣ(Politics) ಮಾಡಬಾರದು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಆದರೆ ಬಿಜೆಪಿಯವರು ಇದನ್ನೇ ತಿರುಚಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

Karnataka Politics: 'ದಲಿತರು ಸಿಎಂ ಆದ್ರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ'

ಸೋಲಿಗೆ ತಲೆಬಾಗುತ್ತೇವೆ:

ಸಿಂದಗಿ(Sindagi) ಮತಕ್ಷೇತ್ರದ ಸೋಲಿಗೆ ತಲೆಬಾಗಿ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅಲ್ಲಿ ರಾಜ್ಯ ಸರ್ಕಾರ(Government of Karnataka) ಸಚಿವರನಿಟ್ಟು ಹಣದ ಹೊಳೆ ಹರಿಸಿ ಚುನಾವಣೆ(Election) ಗೆದ್ದಿದೆ, ಆದರೂ ಮತದಾರರ(Voters) ತೀರ್ಪಿಗೆ ನಾವು ತಲೆ ಬಾಗಿದ್ದೇವೆ. ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದಾಗ ನಮಗೆ 3 ಪಟ್ಟು ಹೆಚ್ಚಿಗೆ ಮತಗಳು ಬಿದ್ದಿವೆ. 2023ರ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದರು.

ನ. 14 ರಂದು ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆಯಲ್ಲಿ ವಿಭಾಗವಾರು ಸಭೆ ನಡೆಯಲಿದೆ. ಸಂಜೆ ಕೆಪಿಸಿಸಿ(KPCC) ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಸುರ್ಜೇವಾಲಾ(Randeep Surjewala) ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ, ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿಯವರಂತ ಕೊಳಕರು, ಜಾತಿವಾದಿಗಳು ಮತ್ಯಾರಿಲ್ಲ: ಸಿದ್ದು!

'ಬಿಜೆಪಿ ಬಗ್ಗೆ ದಲಿತರು ಎಚ್ಚರದಿಂದಿರಿ'

ಬಾಗಲಕೋಟೆ: ವಿಜ​ಯ​ಪುರ(Vijayapura) ಜಿಲ್ಲೆ ಸಿಂದಗಿ ಉಪಚುನಾವಣೆಯಲ್ಲಿ ಮಾದಿಗ ದಂಡೋರ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ದಲಿತರ ಉದ್ದೇಶಿಸಿ ಭಾಷಣ ಮಾಡುವಾಗ ಅವರು ದಲಿತರು ಅನ್ನುವ ಪದವನ್ನೇ ಬಳಸಿಲ್ಲ. ದಲಿ​ತ ಕೆಲ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಏಳಿಗೆ ಸಹಿಸದೆ ಬಿಜೆಪಿಯ ಮನುವಾದಿಗಳು ಅವರ ಹೇಳಿಕೆಯನ್ನು ತಿರುಚಿ ಸಿದ್ದರಾಮಯ್ಯ ಅವರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ದಲಿತ ಸಮು​ದಾ​ಯ​ದ​ವರು ಜಾಗೃತಿಯಿಂದ ಇರಬೇಕೆಂದು ಕಾಂಗ್ರೆಸ್‌ ತಾಲೂಕು ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಸರ್ಕಾರ(BJP Government) ಕೇಂದ್ರ ಮತ್ತು ರಾಜ್ಯದಲ್ಲಿ ಬಂದಾಗಿನಿಂದಲೂ ಅನಂತಕುಮಾರ ಹೆಗಡೆ ನಾವು ಸಂವಿಧಾನ(Constitution) ಬದಲಾವಣೆ ಮಾಡುವದಕ್ಕಾಗಿ ಅಧಿಕಾರಕ್ಕಾಗಿಯೇ ಬಂದಿದ್ದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ದಲಿತರಿಗೆ(Dalit) ಇದ್ದ ಮೀಸಲಾತಿ(Reservation) ತೆಗೆಯುತ್ತೇವೆ ಎಂದು ಬಹಿಂರಗವಾಗಿ ಹೇಳಿರುವುದು ಬಿಜೆಪಿಯ(BJP) ದಲಿತ ವಿರೋಧಿ ನಡೆಯಾಗಿದೆ. ಈ ಹೇಳಿಕೆಯ ಬಗೆಗೆ ಬಿಜೆಪಿಯ ದಲಿತರು ಯಾವುದೇ ಚಕಾರ ಎತ್ತಲಾರದೆ ಜಾಣಕಿವುಡರಾಗಿರುತ್ತಾರೆ. ಇದು ಬಿಜೆಪಿ ದಲಿತಪರ ಕಾಳಜಿ ಇರದ್ದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ್ದರು. 
 

click me!