Karnataka election 2023: ಚನ್ನಗಿರಿ ಕ್ಷೇತ್ರದ ಬಿಜೆಪಿ ‘ಗುಪ್ತ ಮತದಾನ’ ಬಹಿರಂಗ

By Kannadaprabha News  |  First Published Apr 2, 2023, 9:16 AM IST

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ನಗರದಲ್ಲಿ ಶುಕ್ರವಾರ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದ ಕೆಲವು ಮತದಾರರು ಅಡ್ಡ ಮತದಾನ ಮಾಡಿ ಗೊಂದಲಗಳನ್ನು ಹುಟ್ಟು ಹಾಕಿದ್ದಾರೆ.


ದಾವಣಗೆರೆ (ಏ.2) : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ನಗರದಲ್ಲಿ ಶುಕ್ರವಾರ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದ ಕೆಲವು ಮತದಾರರು ಅಡ್ಡ ಮತದಾನ ಮಾಡಿ ಗೊಂದಲಗಳನ್ನು ಹುಟ್ಟು ಹಾಕಿದ್ದಾರೆ.

ಚನ್ನಗಿರಿ ಕ್ಷೇತ್ರ(Channagiri assembly constittuency)ಕ್ಕೆ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ(MLA Madalu virupakshappa) ಬೆಂಬಲಿಗರಾದ ಕೆಲ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಜನ ಪ್ರತಿನಿಧಿಗಳ ಪೈಕಿ ಕೆಲವರು ಇಲ್ಲಿನ ದಾವಣಗೆರೆ ಹರಿಹರ ಅರ್ಬನ್‌ ಕೋ ಆಪ್‌ ಬ್ಯಾಂಕ್‌ನ ಸಮುದಾಯ ಭವನದಲ್ಲಿ ನಡೆದ ಆಂತರಿಕ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ತಮ್ಮ ಮತದ ಮೌಲ್ಯವನ್ನೂ ಕಳೆಯುವ ಕೆಲಸ ಮಾಡಿದ್ದಾರೆ.

Tap to resize

Latest Videos

ದಾವಣಗೆರೆ: ಕೊಲೆ ಪ್ರಕರಣ ಭೇದಿಸಿದ ಎಂಸಿಸಿಟಿಎನ್‌ಎಸ್‌ ಆ್ಯಪ್‌!

ಬಿಜೆಪಿ(BJP)ಯಿಂದ ಗೋಪ್ಯ ಮತದಾನಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ, ಚನ್ನಗಿರಿಯ ಕೆಲವರು ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಿರಿಯ ಪುತ್ರ ಮಾಡಾಳು ಮಲ್ಲಿಕಾರ್ಜುನ್‌ಗೆ ಮತ ಹಾಕಿರುವ ಫೋಟೋ ತೆಗೆದು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್‌ ಆದ ಹಿನ್ನೆಲೆಯಲ್ಲಿ ಪಕ್ಷಕ್ಕೂ ತೀವ್ರ ಮುಜುಗರ ಉಂಟು ಮಾಡಿದೆ ಎನ್ನಲಾಗಿದೆ.

ಶಕ್ತಿ ಕೇಂದ್ರದಲ್ಲಿ ಯಾವುದೇ ಜವಾಬ್ದಾರಿ ಇಲ್ಲದ ಇಬ್ಬರು ಮತದಾನ ಮಾಡಿದ್ದು, ತಾವು ಮಾಡಾಳು ಮಲ್ಲಿಕಾರ್ಜುನ ಹೆಸರನ್ನು ಬರೆದು, ಗೋಪ್ಯವಾಗಿ ಹಾಕಬೇಕಿದ್ದ ಮತವನ್ನು ಬಹಿರಂಗಪಡಿಸಿದ್ದರಿಂದ ಸಹಜವಾಗಿಯೇ ಸಾಕಷ್ಟುಗೊಂದಲಗಳಿಗೂ ಕಾರಣವಾಗಿದೆ. ಪಕ್ಷದಲ್ಲಿ ಮತದಾನದ ಹಕ್ಕು ಇಲ್ಲದ ಇಬ್ಬರು ಮತ ಚಲಾಯಿಸಿರುವುದಕ್ಕೆ ಈಗ ಸ್ವಪಕ್ಷೀಯರಲ್ಲೇ ಆಕ್ಷೇಪಕ್ಕೆ ಕಾರಣವಾಗಿದೆ.

Hubballi Crime News: ಆಟವಾಡಲು ಹೋಗಿದ್ದ ಬಾಲಕನ ಭೀಕರ ಹತ್ಯೆ!

ಟಾಪ್‌ನ್ಯೂಸ್‌..ಅಕ್ರಮ ಮದ್ಯ ವಶ

ಚನ್ನಗಿರಿ: ತಾಲೂಕಿನ ಬೆಂಕಿಕೆರೆ ಗ್ರಾಮದ ಹೊದಿಗೆರೆ ಗ್ರಾಮಕ್ಕೆ ತæರಳುವ ತಿರುವಿನಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬ್ರಾಂಡಿ, ವಿಸ್ಕಿ ಮತ್ತು ಬಿಯರ್‌ ಬಾಟಲ್‌ಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿದ ಘಟನೆ ಶನಿವಾರ ನಡೆದಿದೆ. ಶನಿವಾರ ಬೆಳಗ್ಗೆ ಗಸ್ತು ತಿರುಗುವ ಸಂದರ್ಭದಲ್ಲಿ ಹೆಬ್ಬಳಗೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟಗಾರನೊಬ್ಬ 6,480 ಲೀಟರ್‌ ಮದ್ಯ ಮತ್ತು 3,920 ಲೀಟರ್‌ ಬಿಯರ್‌ (ಒಟ್ಟು ಮೌಲ್ಯ 34,200 ರು.) ಸಾಗಾಣಿಕೆ ವೇಳೆ ಸಿಕ್ಕಿ ಬಿದ್ದಿದ್ದಾನೆ ಎಂದು ಅಬಕಾರಿ ನಿರೀಕ್ಷಕ ಟಿ.ಜೆ. ಜಾನ್‌ ತಿಳಿಸಿದ್ದಾರೆ. ಮದ್ಯ ಮತ್ತು ಸಾಗಾಣಿಕೆ ವಾಹನ ವಶಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಟಿಕೆಟ್‌ ಫೈನಲ್‌ ಮಾಡಲು ಕೋರ್‌ ಕಮಿಟಿ ಮ್ಯಾರಥಾನ್ ಸಭೆ

click me!