ಬಹಳಷ್ಟು ಕಷ್ಟ ಪಟ್ಟಿದ್ದೇನೆ, ಐದು ಜಿಲ್ಲೆಗಳಲ್ಲಿ ದುಡಿದು ಮತದಾರರ ನೋಂದಣಿಯನ್ನ ಮಾಡಿಸಿದ್ದೇನೆ. ಶಿಕ್ಷಕರು, ಪದವೀಧರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಇವರೆಲ್ಲರ ಒತ್ತಾಸೆಯಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್
ದಾವಣಗೆರೆ(ಅ.07): ನನ್ನದು ಬಂಡಾಯ ಸ್ಪರ್ಧೆನಾ ಅಲ್ವಾ ಅನ್ನೋ ಪ್ರಶ್ನೆಗೆ ಫಲಿತಾಂಶದ ದಿನ ಹೇಳುತ್ತೇನೆ. ಬ್ಯಾಲೆಟ್ ಪೇಪರ್‌ನಲ್ಲಿ ಯಾರಿಗೂ ಪಕ್ಷದ ಗುರುತು ಇರಲ್ಲ. ಎಲ್ಲರೂ ಒಂದರ್ಥದಲ್ಲಿ ಪಕ್ಷೇತರ ಅಭ್ಯರ್ಥಿಗಳೇ ಎಂದು ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳಷ್ಟು ಕಷ್ಟ ಪಟ್ಟಿದ್ದೇನೆ, ಐದು ಜಿಲ್ಲೆಗಳಲ್ಲಿ ದುಡಿದು ಮತದಾರರ ನೋಂದಣಿಯನ್ನ ಮಾಡಿಸಿದ್ದೇನೆ. ಶಿಕ್ಷಕರು, ಪದವೀಧರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಇವರೆಲ್ಲರ ಒತ್ತಾಸೆಯಿಂದ ನಾಮಪತ್ರ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮೋದಿ ಆದರ್ಶಕ್ಕೆ ಮೆಚ್ಚಿದೆ : ಕೈ ತೊರೆದ ನಾಯಕ ಬಿಜೆಪಿಗೆ
ನಾನು ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಗೊಲ್ಲ ಸಮುದಾಯದ ನಾಯಕನಾಗಿದ್ದೇನೆ. ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರ ಪ್ರಚಂಡ ಬಹುಮತದಿಂದ ಗದ್ದೇ ಗೆಲ್ಲುತ್ತೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಹೇಳಿದ್ದಾರೆ.
ಶ್ರೀನಿವಾಸ್ ಸ್ಪರ್ಧೆ ವಿಚಾರದ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಸ್ಪರ್ಧೆ ಬಗ್ಗೆ ಮಾಹಿತಿ ಬಂದಿದೆ ಅವರೊಟ್ಟಿಗೆ ಮಾತುಕತೆ ನಡೆಸುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ಇರಲಿದೆ. ಸಂಘಟಿತವಾಗಿ ಚುನಾವಣೆ ಎದುರಿಸುತ್ತೇವೆ. ಆರ್. ಆರ್. ನಗರ ಅಭ್ಯರ್ಥಿ ಘೋಷಣೆ ಇನ್ನು ಫೈನಲ್ ಆಗಿಲ್ಲ. ಈ ನಬಗ್ಗೆ ಸಂಸದೀಯ ಮಂಡಳಿ ಸಭೆ ನಿರ್ಧಾರ ಮಾಡಲಿದೆ. ಅಧಿಕೃತ ಘೋಷಣೆ ಮಾಡುವವರೆಗೆ ಊಹಾಪೋಹ ಇರುವುದು ಸಹಜ ಎಂದು ತಿಳಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಒಳ ಒಪ್ಪಂದ ಮಾಡಿಕೊಳ್ಳುವ ಅನಿರ್ವಾತೆ ಬಿಜೆಪಿಗೆ ಇಲ್ಲ. ಆದರೆ ರಾಜಕೀಯ ಅಸ್ಪೃಶ್ಯತೆಯೂ ಬಿಜೆಪಿಗೆ ಇಲ್ಲ. ಪಕ್ಷದ ಬೆಳವಣೆಗೆ ಸಹಾಯಕವಾಗುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.