ಮುಂಬರುವ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಭರ್ಜರಿ ಎಂಟ್ರಿ ಕೊಟ್ಟಿದೆ. ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರಚಾರದ ಕಣಕ್ಕೆ ನೇರವಾಗಿ ಧುಮುಕಿದ್ದಾರೆ.
ಚಿತ್ರದುರ್ಗ (ಫೆ.26): ಮುಂಬರುವ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಭರ್ಜರಿ ಎಂಟ್ರಿ ಕೊಟ್ಟಿದೆ. ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರಚಾರದ ಕಣಕ್ಕೆ ನೇರವಾಗಿ ಧುಮುಕಿದ್ದಾರೆ. ಚಿತ್ರದುರ್ಗದ ಒಕ್ಕಲಿಗರ ಸಮುದಾಯ ಭವನ ಕಾಂಪ್ಲೆಕ್ಸ್ ನಲ್ಲಿ ಪಕ್ಷದ ಪ್ರಚಾರ ಕಚೇರಿಗೆ ಅಧೀಕೃತ ಚಾಲನೆ ನೀಡಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯಿಂದಲೇ ಬಿಜೆಪಿ ಗೆಲುವಿನ ನಗೆ ಬಿರುವಂತಾಗಬೇಕು ಎಂದರು. ಲೋಕಸಭಾ ಚುನಾವಣೆ ಕಾರ್ಯಾಲಯ ಪ್ರಾರಂಭವಾಗುವುದರ ಮೂಲಕ ಚುನಾವಣೆ ಕೆಲಸಗಳು ಇಂದಿನಿಂದ ಅಧಿಕೃತವಾಗಿ ಚಾಲನೆ ನೀಡಿದಂತೆ ಆಗಿದೆ.
10 ದಿನಗಳಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗಲಿದೆ. ಏಪ್ರಿಲ್ 3ನೇ ಅಥವಾ 4ನೇ ವಾರದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಬಹುದು. ಇನ್ನು 60 ರಿಂದ 70 ದಿನ ನಾವೆಲ್ಲ ಸಂಘಟನೆಯಲ್ಲಿ ತೊಡಗಬೇಕಾಗಿದೆ ಎಂದರು. ಬಿಜೆಪಿ ಗೆಲುವು ಸಾಧಿಸಬೇಕಾದರೆ ಹಿಂದಿನ ಚುನಾವಣೆಯಲ್ಲಿ ತೆಗೆದುಕೊಂಡ ಮತಗಳಿಗಿಂತ ಶೇ 10ರಷ್ಟು ಹೆಚ್ಚು ಮಾಡಿಕೊಳ್ಳಬೇಕಾಗಿದೆ. ರಾಮಮಂದಿರ ಕೇವಲ ಮಂದಿರ ಅಲ್ಲ ಅದು ಪ್ರತಿಯೊಬ್ಬ ಹಿಂದೂವಿನ ಆತ್ಮ ಗೌರವ. ವಿಶ್ವ ನಾಯಕ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ದಾರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವುದರ ಎನ್‍ಡಿಎ ಜಯ ಸಾಧಿಸಬೇಕು ಎಂಬ ಅಂಶವನ್ನು ದೇಶದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.ಆ ನಿಟ್ಟಿನಲ್ಲಿ ಜನರ ಆಶೀರ್ವಾದವನ್ನು ಪಡೆಯಬೇಕು ಎಂದರು.
ವಿಜ್ಞಾನ ಕೇಂದ್ರ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ: ಸಚಿವ ಬೋಸರಾಜು
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಇನ್ನು ನೂರು ದಿನ ಸಂಪೂರ್ಣ ಶ್ರಮ ಹಾಕಿ ಬಿಜೆಪಿ ಪಕ್ಷ ಮಾಡಿರುವಂತ ಎಲ್ಲಾ ಕೆಲಸಗಳನ್ನು ಮನೆ ಮನೆಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸಬೇಕು. 3ನೇ ಬಾರಿ ಮತ್ತೊಮ್ಮೆ ಮೋದಿ ಎಂಬ ಅಂಶವನ್ನು ಇಟ್ಟುಕೊಂಡು ಚುನಾವಣೆಯನ್ನು ಗೆಲ್ಲಬೇಕು. ದೇಶದಲ್ಲಿ ಒಂದು ರೀತಿಯ ವಿಶೇಷವಾದ ವಾತಾವರಣ ಭಾರತೀಯ ಜನತಾ ಪಾರ್ಟಿ ಪರವಿದೆ. ದೇಶದ ಬಡವರು, ರೈತರು, ಯುವಕರು, ವಿಶೇಷವಾಗಿ ಮಹಿಳೆಯರ ಬಗ್ಗೆ ಹೆಚ್ಚಿನ ಒತ್ತು ನೀಡಿ ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳು ಬಿಜೆಪಿಗೆ ಹೆಚ್ಚಿನ ಲಾಭವಾಗಲಿವೆ. ಇಡೀ ದೇಶವ ಒಗ್ಗೂಡಿಸಿದಂತಹ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಲಾಭವಾಗುವುದಿದೆ. ಎಲ್ಲಾ ಅಂಶಗಳನ್ನು ಗಮನಿಸಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿಯುವವರೆಗೆ ತಮ್ಮ ವೈಯುಕ್ತಿಕ ಕೆಲಸಗಳನ್ನು ಬೇರೆಯವರಿಗೆ ವರ್ಗಾಯಿಸಿ ಚುನಾವಣಾಕಾರ್ಯದಲ್ಲಿ ಭಾಗವಹಿಸಬೇಕು. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರೇ ಆಗಲಿ,ಕಮಲದ ಗುರುತನ್ನು ಗೆಲ್ಲಿಸುವುದು ನಮ್ಮಗುರಿಯಾಗಬೇಕು.ಕಾಂಗ್ರೆಸ್ ಸೋಲಿಸಲು ಪಣತೊಡಬೇಕು.ಕಾಂಗ್ರೆಸ್ ಸರ್ಕಾರದ ವೈಫಲ್ಯ ನಮ್ಮ ಗೆಲುವಿಗೆ ಸುಲಭವಾಗಲಿದೆ . ಪ್ರತಿ ಚುನಾವಣೆಯನ್ನು ಹೊಸ ಆರಂಭ ಎನ್ನುವಂತೆ ಸ್ವೀಕಾರ ಮಾಡಬೇಕೆಂದರು ಬಿಎಸ್‍ವೈ ಹೇಳಿದ್ದು, ಜವಾಬ್ದಾರಿ ಹೊರುವುದರ ಮೂಲಕ ಪಕ್ಷ ಗೆಲ್ಲಿಸೋಣವೆಂದರು.
ಮಾಜಿ ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಬಂದ ಮೇಲೆ ರಾಜ್ಯದಲ್ಲಿ ಸಂಚಲನ ಉಂಟಾಗಿದೆ. ಪ್ರಧಾನಿ ಮೋದಿಯವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗೌರವ ತೋರಿಸುತ್ತಿದ್ದಾರೆ. ಇದರ ಬಗ್ಗೆ ಜನಜಾಗೃತಿ ಆಗಬೇಕಿದೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ವಿಪಲವಾಗಿದೆ.ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಮನ ಅಸ್ತಿತ್ವವನ್ನೇ ಮುಖ್ಯಮಂತ್ರಿಗಳು ಪ್ರಶ್ನಿಸಿಸುತ್ತಾರೆ. ಕಳೆದ ಬಾರಿ ನಾವು ರಾಜ್ಯದಲ್ಲಿ 25 ಸ್ಥಾನ ಪಡೆದಿದ್ದೆವು. ಈಗ 28ಕ್ಕೆ 28 ಗೆಲ್ಲಬೇಕೆಂದರು.
ಶೀಘ್ರದಲ್ಲೇ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ
ಬಿಜೆಪಿ ಮುಖಂಡ ಲಿಂಗಮೂರ್ತಿ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಭರವಸೆ ಇದ್ದು, ಚಿತ್ರದುರ್ಗ ಗೆಲ್ಲುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಎಲ್ಲರು ತಮ್ಮ ವೈಯಕ್ತಿಕ ಕೆಲಸ ಬದಿಗಿಟ್ಟು,ದೇಶ ಸೇವೆಯಲ್ಲಿ ಭಾಗವಹಿಸಬೇಕು. ಮೋದಿಗೆದ್ದರೆ ದೇಶಗೆದ್ದಂತೆ ಎಂದುಭಾವಿಸಿ, ಬಿಜೆಪಿಗೆಲ್ಲಿಸಲು ದುಡಿಯಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಜೇಶ್ ಗೌಡ, ಮಧುಗಿರಿ ಅಧ್ಯಕ್ಷ ಹನುಮಂತೆ ಗೌಡ, ಮಾಧುರಿ ಗಿರೀಶ್, ಸಂಪತ್, ಸಿದ್ದಾಪುರ ಸುರೇಶ್, ಭಾರ್ಗವಿ ದ್ರಾವಿಡ್, ಶೈಲಾಜ ರೆಡ್ಡಿ, ಮಂಜುನಾಥ್, ಡಾ.ಸಿದ್ಧಾರ್ಥ, ಶಂಕ್ರಣ್ಣ, ದಗ್ಗೆ ಶಿವಪ್ರಕಾಶ್ ಉಪಸ್ಥಿತರಿದ್ದರು.