
ವಿಜಯಪುರ (ಫೆ.26): ಕಾಂಗ್ರೆಸ್ ಸರ್ಕಾರ ಪತನ ಆಗಲ್ಲ, ಶೋಭಕ್ಕ ಟಿಕೆಟ್ ಪತನ ಆಗುತ್ತೆ ಎಂದು ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದರು. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಶೋಭಾ ಕರಂದ್ಲಾಜೆ ಟಿಕೆಟ್ ಕಟ್ ಆಗಲಿದೆ. ಶೋಭಕ್ಕ ಮೊದಲು ತಮ್ಮ ಟಿಕೆಟ್ ಗಟ್ಟಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಶೋಭಕ್ಕ ಇದರಲ್ಲೇ ಇರಲಿ, ಬಿಜೆಪಿ ಸೋಲಿಸಿ ಜನ ನಮಗೆ 135 ಸೀಟ್ ಕೊಟ್ಟಿದ್ದಾರೆ. ಆಪರೇಶನ್ ಕಮಲ ಮಾಡದಂತಹ ಪರಿಸ್ಥಿತಿ ಈಗ ಇದ್ದು, ನಮ್ಮ ಯಾವ ಶಾಸಕರು ಹೋಗುವುದಿಲ್ಲ.
ಶೋಭಕ್ಕ 50 ಸೀಟ್ ಎಲ್ಲಿಂದ ತರ್ತಾರಂತೆ ಕೇಳಿ ಎಂದು ಪ್ರಶ್ನಿಸಿದರು. ಅವರ ಕ್ಷೇತ್ರದಲ್ಲೇ (ಲೋಕಸಭಾ) ಕಾರ್ಯಕರ್ತರು ಅವರಿಗೆ ಟಿಕೆಟ್ ಕೊಡಬೇಡಿ ಎನ್ನುತ್ತಿದ್ದಾರೆ. ಹೀಗಾಗಿ ಶೋಭಕ್ಕನ ಟಿಕೆಟ್ ಪತನವಾಗಲಿದ್ದು, ಮೊದಲು ಅವರು ತಮ್ಮ ಟಿಕೆಟ್ ಗಟ್ಟಿ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಕಮ್ಯೂನಲ್ ಹಾಗೂ ಕ್ರಿಮಿನಲ್ ಪಕ್ಷ ಎಂದು ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನು ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುವ ಕಾರಣಕ್ಕೇ ಸಿ.ಟಿ.ರವಿ ಅವರನ್ನು ಜನ ಸೋಲಿಸಿದ್ದಾರೆ, ಇಂತಹದ್ದಕ್ಕೆ ಅವರನ್ನು ಮತದಾರರು ಸೋಲಿಸಿ ಮನೆಗೆ ಕಳಿಸಿದ್ದಾರೆ ಎಂದು ಕಿಡಿಕಾರಿದರು.
ಜನಮಾನಸದಲ್ಲಿ ಶಾಶ್ವತ ನೆಲೆಸಿದ ಕನಕರು, ರಾಯಣ್ಣ: ಸಚಿವ ಎಂ.ಬಿ.ಪಾಟೀಲ್
ಅನಂತ ಹೆಗಡೆಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ: ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕಿಡಿ ಕಾರಿದ್ದಾರೆ. ಇಂಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರದ ಹಣವೇನು ಸಿದ್ದರಾಮಯ್ಯನವರ ಮನೆ ಆಸ್ತಿನಾ ಎಂಬ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ತಿರುಗೇಟು ನೀಡಿ, ಇವರು ಐದು ವರ್ಷ ಕಾಣೆಯಾಗಿದ್ದರು, ಎಲ್ಲಿಯೂ ಇರಲಿಲ್ಲ, ಮತದಾರರಿಗೆ ಮುಖ ಕೂಡ ತೋರಿಸಿರಲಿಲ್ಲ.
ಗ್ಯಾರಂಟಿ ಯೋಜನೆ ಸಫಲವಾಗಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಯುರಿ: ಸಚಿವ ಸಂತೋಷ್ ಲಾಡ್
ಈಗ ಚುನಾವಣೆ ಬಂದ ಕಾರಣ ಹಿಂದೂ-ಮುಸ್ಲಿಂ ಹೇಳಿಕೆ ಕೊಡುವ ಮೂಲಕ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿದ್ದಾರೆ ಎಂದು ಹರಿಹಾಯ್ದರು. ಸಿಎಂ ಸಿದ್ದರಾಮಯ್ಯ ವಿರುದ್ದದ ಸಂಸದರ ಹೇಳಿಕೆಯನ್ನು ಖಂಡಿಸಿದ ಸಚಿವರು, ಅನಂತ ಕುಮಾರ್ ಹೆಗಡೆಯವರು ಈ ಹಿಂದೆ ಕೇಂದ್ರ ಸಚಿವರಾಗಿದ್ದಾಗಲೇ ಸಂವಿಧಾನ ತಿರುಚಬೇಕೆಂದು ಹೇಳಿದ್ದರು. ಇಂಥವರ ಬಗ್ಗೆ ಬಹಳ ಮಾತನಾಡೋ ಅವಶ್ಯಕತೆಯಿಲ್ಲ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ, ಇದು ಚುನಾವಣೆ ಗಿಮಿಕ್ ಎಂದು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.