ಕಾಂಗ್ರೆಸ್ ವೈಡ್ ಬಾಲ್, ಆಪ್ ನೋ ಬಾಲ್, ಬಿಜೆಪಿ ಗುಡ್ ಲೆಂಥ್ ಬಾಲ್, ರಾಜನಾಥ್ ಮಾತಿಗೆ ಕೆಲವರು ಕಂಗಾಲ್!

By Suvarna NewsFirst Published Nov 7, 2022, 8:31 PM IST
Highlights

ರಾಜಕಾರಣಿಗಳು ಹೋಲಿಕೆ, ಹಾಸ್ಯ, ಟೀಕೆ, ವ್ಯಂಗ್ಯ ಸೇರಿದಂತೆ ಹಲವು ದಾಟಿಯಲ್ಲಿ ಮಾತನಾಡುವುದು ಹೊಸದೇನಲ್ಲ. ಇದು ರಾಜಕಾರಣಿಗಳಿಗೆ ಕರತಗತ. ಚುನಾವಣೆ ಹೊಸ್ತಿಲಲ್ಲಿ ಇಂತಹ ಮಾತುಗಳು ಭಾರಿ ವೈರಲ್ ಆಗುತ್ತವೆ. ಇದೀಗ ರಾಜನಾಥ್ ಸಿಂಗ್ ಮಾಡಿದ ಭಾಷಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಿಕೆಟ್ ಕಮೆಂಟರಿ ರೀತಿಯಲ್ಲಿ ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ.
 

ಶಿಮ್ಲಾ(ನ.07); ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ಭಾರತದಲ್ಲಿ ಇದೀಗ ಕ್ರಿಕೆಟ್ ಚರ್ಚೆ ಜೋರಾಗಿದೆ. ಇದೇ ಚರ್ಚೆಯನ್ನು ಬಳಸಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಿಮಾಚಲ ಪ್ರದೇಶ ಚುನಾವಣಾ ರ್ಯಾಲಿಯಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಿಮಾಚಲ ಪ್ರದೇಶದ ಬೈಜಿನಾಥ್ ಹಾಗೂ ಬಲ್‌ನಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ಭಾಷಣ ಮಾಡಿದ ರಾಜನಾಥ್ ಸಿಂಗ್ ರಾಜಕಾರಣ ಎಂಬ ಪಿಚ್‌ನಲ್ಲಿ ಬಿಜೆಪಿ ಮಾತ್ರ ಗುಡ್ ಲೆಂಥ್ ಡೆಲವರಿಯಾಗಿದೆ. ಕಾಂಗ್ರೆಸ್ ವೈಡ್ ಬಾಲ್, ಆಮ್ ಆದ್ಮಿ ಪಾರ್ಟಿ ನೋ ಬಾಲ್ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಏಕರೂಪ ನಾಗರೀಕ ಸಂಹಿತ ಜಾರಿಗೆ ತರುವುದಾಗಿ ಪುನರುಚ್ಚರಿಸಿದ್ದಾರೆ.

ಸಾರ್ವಜನಿಕರನ್ನುದ್ದೇಶಿ ಭಾಷಣ ಮಾಡಿದ ರಾಜನಾಥ್ ಸಿಂಗ್, ಮುಂಬುರವ ಚುನಾವಣೆಯಲ್ಲಿ ಹಿಮಾಚಲ ಪ್ರದೇಶ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಹಿಮಾಚಲ ಪ್ರದೇಶ ಅಭಿವೃದ್ಧಿ ಕಂಡಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ನೀಡಲು ಮನವಿ ಮಾಡಿದ್ದಾರೆ. ಈ ವೇಳೆ ರಾಜಕೀಯವನ್ನು ಕ್ರಿಕೆಟ್ ಮೂಲಕ ಹೇಳುವುದಾದರೆ, ಆಪ್ ನೋ ಬಾಲ್, ಕಾಂಗ್ರೆಸ್ ವೈಡ್ ಬಾಲ್ , ಕೇವಲ ಬಿಜೆಪಿ ಗುಡ್ ಲೆಂಥ್ ಬಾಲ್ ಎಂದಿದ್ದಾರೆ.

 

ಗೆದ್ದರೆ ಏಕರೂಪ ನಾಗರಿಕ ಸಂಹಿತೆ: ಹಿಮಾಚಲದಲ್ಲಿ ಬಿಜೆಪಿ ಪ್ರಣಾಳಿಕೆ

ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ಇದನ್ನು ಕಾಂಗ್ರೆಸ್ ಸಮಾಜ ಒಡೆಯುವ ಕಾರ್ಯ ಎಂದು ಟೀಕಿಸುತ್ತಿದೆ. ಗೋವಾದಲ್ಲಿ ಈಗಾಗಲೇ ಏಕರೂಪ ನಾಗರೀಕ ಸಂಹಿತ ಜಾರಿಯಾಗಿದೆ. ಸಮಾಜವನ್ನು ಒಡೆದು ನಮಗೆ ಮತ ಬೇಡ. ಬಿಜೆಪಿ ಅಭಿವೃದ್ಧಿ ಮಂತ್ರದೊಂದಿಗೆ ಮುನ್ನುಗ್ಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೋದಿ ಸರ್ಕಾರದಲ್ಲಿ ಭಾರತ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಸದ್ಯ 5ನೇ ಸ್ಥಾನದಲ್ಲಿರುವ ಭಾರತ ಶೀಘ್ರದಲ್ಲೇ ವಿಶ್ವದ ಪ್ರಮುಖ 3 ರಾಷ್ಟ್ರಗಳಲ್ಲಿ ಒಂದಾಗಲಿದೆ. ಭ್ರಷ್ಟಾಚಾರ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ. ಭ್ರಷ್ಟಾಚಾರ ಹತ್ತಿಕ್ಕಲು ಮೋದಿ ಸರ್ಕಾರ ವಿನೂತವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸರ್ಕಾರ ದೆಹಲಿಯಲ್ಲಿ ಫಲಾನುಭವಿಗೆ 100 ಪೈಸೆ ಬಿಡುಗಡೆ ಮಾಡಿದರೆ ಅಷ್ಟೂ ಹಣ ಫಲಾನುಭವಿ ಖಾತೆಗೆ ಜಮಾ ಆಗಲಿದೆ ಎಂದರು.

 

ಔಷಧಿ, ಸರ್ಕಾರ ಬದಲಿಸುವುದು ಸೂಕ್ತವಲ್ಲ, ಹಿಮಾಚಲ ಸಂಪ್ರದಾಯಕ್ಕೆ ಅಂತ್ಯ ಹಾಡಲು ಮೋದಿ ಮನವಿ!

ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾಲಂಬಿಯಾಗುತ್ತಿದೆ. ದೇಶದಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ ಮಾಡಲಾಗುತ್ತಿದೆ. ಲಘು ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳನ್ನು ಭಾರತವೇ ಉತ್ಪಾದನೆ ಮಾಡುತ್ತಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸೇನೆಗೆ ನೀಡಲಾಗಿದೆ. ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ. ನಾವೀಗ ರಫ್ತು ಮಾಡುವತ್ತ ಚಿತ್ತ ಹರಿಸಿದ್ದೇವೆ ಎಂದರು.

ಹಿಮಾಚಲ ಪ್ರದೇಶ ಜನತೆ ಪ್ರತಿ ಚುನಾವಣೆಯಲ್ಲಿ ಸರ್ಕಾರ ಬದಲಿಸುತ್ತಾರೆ. ಈ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ಪ್ರತಿ ಬಾರಿ ಹಿಮಾಚಲ ಪ್ರದೇಶ ಜನರು ಚಪಾತಿಯನ್ನು ಮಗುಚುತ್ತಾರೆ. ಆದರೆ ಈ ಬಾರಿ ಚಪಾತಿ ಸರಿಯಾಗಿ ಬೆಂದಿದೆ. ಮಗುಚುವ ಅಗತ್ಯವಿಲ್ಲ ಎಂದಿದ್ದಾರೆ. 

click me!