ಜೂನ್ 18ಕ್ಕೆ ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ JP Nadda ಆಗಮನ

Published : Jun 14, 2022, 08:52 PM IST
ಜೂನ್ 18ಕ್ಕೆ ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ JP Nadda ಆಗಮನ

ಸಾರಾಂಶ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇದೇ ‌ತಿಂಗಳು 18 ನೇ ತಾರೀಖು ರಾಜ್ಯಕ್ಕೆ ಆಗಮಿಸುತ್ತಿದ್ದು, ಚಿತ್ರದುರ್ಗದಲ್ಲಿ ನಡೆಯಲಿರುವ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ರಾಜ್ಯ ಜನಪ್ರತಿನಿಧಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣನ್ಯೂಸ್

ಚಿತ್ರದುರ್ಗ (ಜೂ.14): ಇನ್ನೇನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಬರುವ ಹಿನ್ನೆಲೆ, ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಸಕಲ ಪ್ಲಾನ್ ಮಾಡಿಕೊಂಡಿದೆ. ಇದಕ್ಕೆಲ್ಲಾ ಪೂರಕವೆಂಬಂತೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇದೇ ‌ತಿಂಗಳು 18 ನೇ ತಾರೀಖು ರಾಜ್ಯಕ್ಕೆ ಆಗಮಿಸ್ತಿರೋದೆ ಸೂಕ್ತ ಉದಾಹರಣೆ ಆಗಿದೆ.

ರಾಜ್ಯದ ಮಧ್ಯ ಕರ್ನಾಟಕದ ಮಧ್ಯ ಭಾಗವಾಗಿರೋ ಕೋಟೆನಾಡು ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಮಿಸ್ತಿರೋದಕ್ಕೆ ಎಲ್ಲಾ ನಾಯಕರು ಸಕಲ ತಯಾರಿ ನಡೆಸೋದ್ರಲ್ಲಿ ಬ್ಯುಸಿ ಆಗಿದ್ದಾರೆ. ನಗರದ ಹೊರವಲಯದಲ್ಲಿರುವ ಮುರುಘಾ ಮಠದ ಅನುಭವ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು ನಡ್ಡಾ ಅವರು ಆ ಕಾರ್ಯಕ್ರದಲ್ಲಿ ಭಾಗಿಯಾಗಲಿದ್ದಾರೆ.

UDUPI: ಕೊಡೆ ಸೇವೆಗೆ ಮೆಚ್ಚಿದಳಾ ಮಹಿಷಮರ್ದಿನಿ? ನಡೆದದ್ದು ಪವಾಡವೆಂದ ಭಕ್ತರು!

18ನೇ ತಾರೀಖು ಮಧ್ಯಾಹ್ನ 3.30 ರ ಸುಮಾರಿಗೆ ಚಿತ್ರದುರ್ಗಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿಲಿರೋ ನಡ್ಡಾ ಅವರು ಮೊದಲು ಮುರುಘಾ ಶರಣರ ಆಶೀರ್ವಾದ ಪಡೆಯುವರು. ನಂತರ ಮುರುಘಾ ಮಠದ ಆವರಣದಲ್ಲಿಯೇ ವಿವಿಧ ಮಠಾಧೀಶರ ಭೇಟಿ ‌ಮಾಡಲಿದ್ದಾರೆ. ನಂತರ ಮುರುಘಾ ಮಠದ ಹಿಂಭಾಗದಲ್ಲಿರುವ ಅನುಭವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಏನಿದು ಕಾರ್ಯಕ್ರಮ?: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಸದಸ್ಯರಿಗೆ ಜೆಪಿ ನಡ್ಡಾ ಕಿವಿಮಾತು. ರಾಜ್ಯ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಜನಪ್ರತಿನಿಧಿಗಳು. ಸನ್ಮಾನ್ಯ ನರೇಂದ್ರ ಮೋದಿ ಸರ್ಕಾರದ ಎಂಟು ವರ್ಷದ ಸಾಧನೆ ಹಾಗೂ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸಾಧನೆ ಕುರಿತು ಜನರಿಗೆ ತಿಳಿಸುವಂತಹ ಕಾರ್ಯಕ್ರಮ. ವಿಶೇಷವಾಗಿ ಕೇಂದ್ರ ರಾಜ್ಯ ಸರ್ಕಾರಿ ಬಡವರು, ರೈತರು,‌ಕೂಲಿ ಕಾರ್ಮಿಕರಿಗಾಗಿ ಏನೆಲ್ಲಾ ಅನುಕೂಲ ಮಾಡಿಕೊಡ್ತಿದೆ ಎಂಬುದರ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು. ಇದ್ರಿಂದಾಗಿ ಪಕ್ಷ‌ ಬಲವರ್ಧನೆ ಹಾಗೂ ಸಂಘಟನೆ ಮಾಡುವುದು ಸುಲಭವಾಗಲಿದೆ ಎಂಬ ಆಶಯ.

ಸುಮಾರು 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಲಿರುವ ಜನಪ್ರತಿನಿಧಿಗಳು: ಈಗಾಗಲೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸುಮಾರು 6 ಸಾವಿರಕ್ಕೂ ಅಧಿಕ ‌ಮಂದಿ‌ ಇದ್ದಾರೆ. ಅದ್ರಲ್ಲಿ 3 ಸಾವಿರ ಮಹಿಳೆಯರು ಹಾಗೂ 3ಸಾವಿರು ಪುರಷ ಸದಸ್ಯರು ಇದ್ದಾರೆ. ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಸುಮಾರು ಈ ಕಾರ್ಯಕ್ರಮಕ್ಕೆ 10 ಸಾವಿರ ಬಿಜೆಪಿ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಹೆಚ್ಚಿದೆ ಅಂತಾರೆ ಸಚಿವ ಶ್ರೀರಾಮುಲು.

Kalaburagi; ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜೂ.15ರಿಂದ ಅಹೋರಾತ್ರಿ ಸತ್ಯಾಗ್ರಹ

ಜೊತೆಗೆ ಈ ರೀತಿಯ ಕಾರ್ಯಕ್ರಮ ಇತಿಹಾಸದಲ್ಲಿಯೇ ಬರೆದಿಡಬಹುದಾದ ಕಾರ್ಯಕ್ರಮ ಆಗಬಹುದು. ಒಂದೆಡೆ ಎಲ್ಲಾ ಜನಪ್ರತಿನಿಧಿಗಳನ್ನು ಸೇರಿಸಿ ಅವರಿಗೆ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸೊಕದಕ್ಕೆ ನಮಗೆ ಕುತೂಹಲ ಇದೆ. ಅಲ್ಲದೇ‌ ಕೋಟೆನಾಡಿನಲ್ಲಿ ಈ ಕಾರ್ಯಕ್ರಮ ಏರ್ಪಟ್ಟಿರೋದು ನಮಗೆ ಮತ್ತೊಂದು ಜವಾಬ್ದಾರಿ ಹೆಚ್ಚಿಸಿದೆ. ಹಾಗಾಗಿ ಎಲ್ಲರೂ ತುಂಬಾ ಶಿಸ್ತು ಬದ್ದವಾಗಿ ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲು ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮದ ರೂಪುರೇಷೆ ಮಾಡ್ತಿದ್ದೇವೆ.

ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ‌ ನಳೀನ್ ಕುಮಾರ್ ಕಟೀಲ್‌ ಹಾಗೂ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಸೇರಿ ನಮ್ಮ ಸರ್ಕಾರದ ಅನೇಕ ಸಚಿವರು ಹಾಗೂ ಪಕ್ಷದ ಅನೇಕ ನಾಯಕರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ