
ನವದೆಹಲಿ/ಬೆಂಗಳೂರು, (ಮಾ.12): ತೇಜಸ್ವಿ ಸೂರ್ಯ ಸದಾ ಆಕ್ಟಿವ್ ಆಗಿರುವ ಸಂಸದ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆನ್ನುವ ಮಾತಿನಂತೆ, ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ತೇಜಸ್ವಿ ಸೂರ್ಯ ಆಗಾಗ ಕ್ರೀಡೆಗಳನ್ನಾಡುತ್ತಾ ರಿಲ್ಯಾಕ್ಸ್ ಮೂಡ್ನಲ್ಲಿರುತ್ತಾರೆ.
ಹೌದು...ಬುಧವಾರ ಲೋಕಸಭಾ ಅಧಿವೇಶನದ ಬಳಿಕ ಸಂಜೆ ಹೊತ್ತಲ್ಲಿ ತೇಜಸ್ವಿ ಸೂರ್ಯ ಫುಟ್‌ಬಾಲ್ ಆಡಿ ಗಮನಸೆಳೆದಿದ್ದಾರೆ. ಮೈಸೂರು ಸಂಸದ ಪ್ರತಾಪ್ ಸಿಂಹ ಜತೆ ಫುಟ್‌ಬಾಲ್ ಆಡಿ ರಿಲ್ಯಾಕ್ಸ್ ಆಗಿದ್ದಾರೆ.
ಯುವದಿನದಲ್ಲಿ ತೇಜಸ್ವಿ ಸೂರ್ಯ ಬಿಂದಾಸ್ ಸ್ಟೆಪ್.. ವಿಡಿಯೋ ನೋಡಿ!
ಸ್ವತಃ ತೇಜಸ್ವಿ ಸೂರ್ಯ ತಾವು ಫುಟ್‌ಬಾಲ್ ಆಡಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ರತಾಪ್ ಸಿಂಹಗೆ ಬಾಲ್ ಕೊಡದೇ ಸಖತ್ ಆಗಿ ಫುಟ್‌ಬಾಲ್ ಆಡಿ ಎಂಜಾಯ್ ಮಾಡಿದ್ದಾರೆ.
29 ಸೆಕೆಂಡ್ ವೀಡಿಯೊಕ್ಕೆ 1700ಕ್ಕೂ ಹೆಚ್ಚ ರೀಟ್ವೀಟ್ ಹಾಗೂ 16700ಕ್ಕೂ ಹೆಚ್ಚು ಲೈಕ್ಸ್‌ಗಳು ಸಿಕ್ಕಿವೆ. ಇನ್ನು ಹಲವರು ಕಮೆಂಟ್‌ಗಳನ್ನ ಸಹ ಮಾಡಿದ್ದಾರೆ.
ಇತ್ತೀಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಹುಡುಗರ ಜೊತೆ ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ್ದನ್ನ ಇಲ್ಲಿ ಸ್ಮರಿಸಬಹುದು.
ಕ್ರಿಕೆಟ್ ಆಡುವಾಗ ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲರೊಂದಿಗೆ ತಾವೂ ಕೂಡ ಒಬ್ಬನೆಂಬಂತೆ ಮಿಂಗಲ್ ಆಗಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡಿ ಉತ್ತಮ ಕ್ರಿಕೆಟ್ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಬಾಳೆಹೊನ್ನೂರು ಹುಡುಗರು ಕೂಡ ಸಂಸದರ ಜೊತೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.