
ಭೋಪಾಲ್[ಮಾ.12]: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡ ಮಧ್ಯಪ್ರದೇಶ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಬಿಜೆಪಿಗೆ ಸೇರ್ಪಡೆಗೊಂಡ ಸಿಂಧಿಯಾ ಗುರುವಾರ ರಾಜಧಾನಿ ಭೋಪಾಲ್ ಗೆ ಆಗಮಿಸಲಿದ್ದಾರೆ. ಹೀಗಿರುವಾಗ ಅವರಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಪೋಸ್ಟರ್ ಗಳನ್ನು ನಗಪ ನಿಗಮ ಕಿತ್ತೆಸೆದಿದೆ.
ಹೌದು ಬಿಜೆಪಿ ಸೇರ್ಪಡೆಗೊಂಡ ಸಿಂಧಿಯಾ ಸ್ವಾಗತಕ್ಕೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ಭರ್ಜರಿ ತಯಾರಿ ನಡೆದಿದೆ. ಇಲ್ಲಿನ ವಿವಿಧ ಪ್ರದೇಶಗಳಲ್ಲಿ ಹೋರ್ಡಿಂಗ್ ಹಾಗೂ ಪೋಸ್ಟರ್ ಗಳನ್ನು ಲಗತ್ತಿಸಲಾಗಿದೆ. ಇವುಗಳಲ್ಲಿ ಅನೇಕ ಪೋಸ್ಟರ್ ಗಳಿಗೆ ಮೇಲೆ ದುಷ್ಕರ್ಮಿಗಳು ಮಸಿ ಬಳಿದಿದ್ದಾರೆ. ಇನ್ನು ಸಿಂಧಿಯಾ ಎರಡು ದಿನ ಮಧ್ಯಪ್ರದೇಶದಲ್ಲಿರಲಿದ್ದಾರೆ. ಇದೇ ವೇಳೆ ರಾಜ್ಯಸಭಾ ಸದಸ್ಯರಾಗಲು ನಾಮ ನಿರ್ದೇಶನ ಮಾಡಲಿದ್ದಾರೆ.
ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?
ಜ್ಯೋರತಿರಾದಿತ್ಯ ಸಿಂಧಿಯಾ ಲಗತ್ತಿಸಲಾದ ಪೋಸ್ಟರ್ ಗಳನ್ನು ನಗರ ನಿಯಮ ತೆಗೆದು ಹಾಕಿದ್ದು, ಮತ್ತೆ ಕೆಲವೆಡೆ ಅನಾಮಿಕ ವ್ಯಕ್ತಿಗಳು ಪೋಸ್ಟರ್ ಗಳ ಮೇಲೆ ಕಪ್ಪು ಮಸಿ ಬಳಿದಿದ್ದಾರೆ. ಇವುಗಳಲ್ಲಿ ಕೇವಲ ಸಿಂಧಿಯಾ ಮುಖಕ್ಕಷ್ಟೇ ಮಸಿ ಬಳಿದಿದ್ದಾರೆ.
ಬಿಜೆಪಿ ಮಧ್ಯಪ್ರದೇಶ ಕಚೇರಿಯ ಮೂಲಗಳಿಂದ ಸಿಕ್ಕ ಮಾಹಿತಿ ಅನ್ವಯ ಮಧ್ಯಪ್ರದೇಶಕ್ಕೆ ಬಡುವ ಸಿಂಧಿಯಾ ಪ್ರಾದೇಶಿಕ ಕಚೇರಿಗೆ ತೆರಳಲಿದ್ದಾರೆ. ಅಲ್ಲಿಂದ ಸೋಭಾ ಯಾತ್ರೆ ಆಯೋಜಿಸಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.