ರಾಷ್ಟ್ರೀಯ BJP ಯುವ ಮೋರ್ಚಾ ಅಧ್ಯಕ್ಷರಾದ ಖುಷಿಯಲ್ಲಿ ತೇಜಸ್ವಿ ಸೂರ್ಯ ಎಡವಟ್ಟು..!

By Suvarna NewsFirst Published Sep 30, 2020, 8:17 PM IST
Highlights

ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಖುಷಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಎಡವಟ್ಟು ಮಾಡಿಕೊಂಡಿದ್ದಾರೆ.

ಬೆಂಗಳೂರು, (ಸೆ.30): ಬಿಜೆಪಿ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾದ ಬಳಿಕ ಸಂಸದ ತೇಜಸ್ವಿ ಸೂರ್ಯ ಮೊದಲ ಬೆಂಗಳೂರಿಗೆ ಆಗಮಿಸಿದರು.

 ಇದೇ ವೇಳೆ ಇಂದು (ಬುಧವಾರ)  ತೇಜಸ್ವಿ ಸೂರ್ಯ ಅವರನ್ನು ವಿಮಾನ ನಿಲ್ದಾಣದಿಂದ ಸಹಸ್ರಾರು ಕಾರ್ಯಕರು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಗಿದ್ದು, ಈಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. 

ಹೌದು... ರಾಜ್ಯದಲ್ಲಿ ಕೊರೋನಾ ಸಾಂಕ್ರಮಿಕ ರೋಗ ಹಿನ್ನಲೆಯಲ್ಲಿ ಹಲವು ಮಾರ್ಗಸೂಚಿಗಳು ಇವೆ. ಆದ್ರೆ, ಶಿಸ್ತಿನ ಪಕ್ಷದ ಸಿಪಾಯಿಗಳು ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮೆರವಣಿಗೆ ಮಾಡಿದ್ದಾರೆ. 

ಬಿಜೆಪಿಯಲ್ಲಿ ಭಾರೀ ಬದಲಾವಣೆ; ಕೇಸರಿ ಯುವಪಡೆಗೆ ಕನ್ನಡಿಗನ ಹೊಣೆ!

ಸಾದಹಳ್ಳಿ ಟೋಲ್ ಬಳಿಯಿಂದ ಬೆಂಗಳೂರಿನ ಬಿಜೆಪಿ ಕಚೇರಿವರೆಗೂ ರ್ಯಾಲಿ ಮಾಡಲಾಗಿದ್ದು, ಕೊರೋನಾ ಲೆಕ್ಕಕ್ಕೆ ಇಲ್ಲವಂತೆ ಬಿಜೆಪಿ ಕಚೇರಿ ಮುಂದೆ ಜನವೋ ಜನ ಸೇರಿದರು.

ಆಡಳಿ ಪಕ್ಷದಲ್ಲಿದ್ದುಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ಮೊದಲ ಸಾಲಿನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ನಿಲ್ಲಬೇಕಾಗಿತ್ತು, ಆದರೆ ಕಾನೂನು ಮೀರಿ ಅವರು ನಡೆದುಕೊಂಡಿರುವುದು ಸರಿಯಲ್ಲ ಎನ್ನುವುದು ಜನತೆ ಪ್ರಶ್ನೆಯಾಗಿದೆ.

ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಇದೆಲ್ಲಾ ಬೇಕಿತ್ತಾ?  ಜನರಿಗೆ ಕೊರೋನಾ ಜಾಗೃತಿ ಬಗ್ಗೆ ಉದ್ದುದ್ದ ಭಾಷಣ ಮಾಡುವ ಒಂದು ಶಿಸ್ತಿನ ಪಕ್ಷದ ನಾಯಕರುಗಳಿಗೆ ಅಷ್ಟು ಪರಿಜ್ಞಾನ ಇಲ್ಲವೇ?

ಸಮಜಾಯಿಸಿಕೊಟ್ಟ ತೇಜಸ್ವಿ ಸೂರ್ಯ
ಮೆರವಣಿಗೆ ಮಾಡಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಕೊರೋನಾ ನಿಯಮಗಳ ಅನ್ವಯ ನಮ್ಮೆಲ್ಲರಿಗೂ ಆಗುತ್ತೆ. ಇವತ್ತು ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷನಾದ ಮೇಲೆ ಮೊದಲ ಸಲ ಬೆಂಗಳೂರಿಗೆ ಬಂದೆ. ಪಕ್ಷದ ಕಡೆಯಿಂದ ಪದಾಧಿಕಾರಿಗಳಿಗೆ ಬರಲು ಅವಕಾಶ ಇಲ್ಲ‌ ಎಂದು ಸೂಚಿಸಲಾಗಿತ್ತು. ಆದ್ರೆ ಬಿಜೆಪಿ ಕಾರ್ಯಕರ್ತರ ಪಕ್ಷ. ಕಾರ್ಯಕರ್ತರಿಗೆ ಸಂತೋಷ ಆಗಿ ಮೆರವಣಿಗೆ ಮಾಡಿದಾರೆ. ಎಲ್ಲರೂ ಮಾಸ್ಕ್ ಧರಿಸಿದ್ರು ಎಂದು ಸಮಜಾಯಿಸಿ ನೀಡಿದರು.

click me!